ಮಧುರಚೆನ್ನರ ಬದುಕು ಬರಹ

Author : ಎಂ. ಎನ್. ವಾಲಿ

Pages 144

₹ 120.00




Year of Publication: 2018
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.70, 2ನೇ ಮುಖ್ಯರಸ್ತೆ, ಜಬ್ಬರ್ ಬ್ಲಾಕ್, ವೈಯ್ಯಾಲಿಕಾವಲ್, ಬೆಂಗಳೂರು- 560003
Phone: 23313400

Synopsys

‘ಮಧುರಚೆನ್ನರ ಬದುಕು ಬರಹ’ ಸಿವಿಜಿ ಪಬ್ಲಿಕೇಷನ್ಸ್ ನ ಮಕ್ಕಳ ಸಾಹಿತ್ಯ ನಿರ್ಮಾಪಕರು ಮಾಲೆಯಲ್ಲಿ ಪ್ರಕಟವಾದ ಕೃತಿ. ಹಲಸಂಗಿಯಲ್ಲಿ ಗೆಳೆಯರ ಬಳಗವನ್ನು ಹುಟ್ಟುಹಾಕಿ ಅದರ ಕರ್ಣಾಧಾರವ್ವವನು ವಹಿಸಿದ್ದ ಮಧುರ ಚೆನ್ನರ ಬದುಕು ಅನುಪಮವಾದುದು. ಐವತ್ತು ವರುಷಗಳ ಅವರ ಬದುಕಿನಲ್ಲಿ ಅವರು ಮಾಡಿದ ಸಾಹಿತ್ಯಕ ಹಾಗೂ ಆಧ್ಯಾತ್ಮಿಕ ಸಾಧನೆ, ಅವರು ಏರಿದ ಎತ್ತರ ನಮಗೆ ಸೋಜಿಗವನ್ನು ಉಂಟುಮಾಡುತ್ತವೆ. ಅಂತೆಯೇ ಡಾ. ಸಿದ್ದಯ್ಯ ಪುರಾಣಿಕರು ಹೇಳುವಂತೆ “ಹೊಸ ಗನ್ನಡ ಸಾಹಿತ್ಯದ ಇತಿಹಾಸವನ್ನು ಬರೆಯುವವರು ಹಲಸಂಗಿಯ ಹೆಸರನ್ನು ಮರೆಯುವಂತಿಲ್ಲ. ಕನ್ನಡ ನುಡಿಯ ನವೋದಯಕ್ಕೆ ಕಾರಣವಾದ ಕೆಲವೇ ಕೇಂದ್ರಗಳಲ್ಲಿ ಅದೊಂದು” ಎಂದಿದ್ದಾರೆ.

“ಮಧುರ ಚೆನ್ನರ ಬದುಕು ಬರಹ' ಕುರಿತು ಬರೆದ ಈ ಕೃತಿಯಲ್ಲಿ ಅವರ ಬದುಕಿನ ಐವತ್ತು ವರುಷಗಳ ಕಾಳಘಟ್ಟದಲ್ಲಿ ಆರಂಭದ 20 ವರುಷ, ನಂತರ 15 ವರುಷಗಳ ಮೂರು ವಿಭಾಗ ಮಾಡಿ ಬರಹ ಮುಂದುವರಿದಿದೆ. ಅವರು ಜನಿಸಿದ 1903 ರಿಂದ 1938 ಹಾಗೂ ಕೊನೆಯ ವಿಭಾಗ 1938 ರಿಂದ 1953 ಎಂದು ವಿಭಾಗಮಾಡಿ ಚರಿತ್ರೆ ಕೊನೆಗೊಳ್ಳುತ್ತದೆ. ಮಕ್ಕಳಿಗಾಗಿ ಬರೆದ ಕೃತಿ ಎಂಬುದನ್ನು ಗಮನಿಸಿ ಸರಳ ಭಾಷೆ ಹಾಗೂ ವಿವರಣೆ ಕೊಡುತ್ತ ಸಾಗಲಾಗಿದೆ. ಕೊನೆಯಲ್ಲಿ ಮಧುರ ಚನ್ನರ ಕೆಲವು ಕವನಗಳನ್ನು ಕೊಡಲಾಗಿದೆ. 

About the Author

ಎಂ. ಎನ್. ವಾಲಿ
(10 June 1935)

ಹಿರಿಯ ಲೇಖಕ ಎಂ.ಎನ್. ವಾಲಿ ಅವರ ಪೂರ್ಣ ಹೆಸರು ಮಲ್ಲಿಕಾರ್ಜುನ ವಾಲಿ. ಜಾನಪದ ಸಂಶೋಧಕ, ಶಿವಶರಣ ಸಾಹಿತ್ಯ ಹಾಗೂ ವ್ಯಕ್ತಿ ಚಿತ್ರ ಕೃತಿಗಳ ಕರ್ತೃ, ಸಾಹಿತ್ಯ ಪ್ರಚಾರ ಪ್ರಸಾರಕರಾದ ಮಲ್ಲಿಕಾರ್ಜುನ ವಾಲಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿಯಲ್ಲಿ. ತಂದೆ ನಿಂಗಪ್ಪ ವಾಲಿ, ತಾಯಿ ಸಂಗನ ಬಸವ್ವ. ಸಾಲೋಟಗಿ ಹಾಗೂ ಇಂಡಿಯಲ್ಲಿ ಪ್ರೌಢಶಾಲೆಯ ವರೆಗೆ ವಿದ್ಯಾಭ್ಯಾ ಮುಗಿಸಿದ ಅವರು ಜಮಖಂಡಿಯ ಕಲಾ ಹಾಗೂ ವಿಜ್ಞಾನ ಕಾಲೇಜಿನಿಂದ ಬಿ.ಎ. ಪದವಿ ಪಡೆದರು, ಕರ್ನಾಟಕ ವಿಶ್ವವಿದ್ಯಾಲಯದಿಂದ ಶಾಸನದಲ್ಲಿ ಡಿಪ್ಲೊಮಾ ಹಾಗೂ ಎಂ.ಎ ಪದವಿ ಪಡೆದ ಅವರು, ‘ಸಿಂಪಿ ಲಿಂಗಣ್ಣನವರ ...

READ MORE

Related Books