ಬುದ್ಧ ಬಸವ ಮತ್ತು ಬಾಬಾ ಸಾಹೇಬ

Author : ಮಹಾಬಲೇಶ್ವರ ಕಾಟ್ರಹಳ್ಳಿ

Pages 156

₹ 100.00




Year of Publication: 2011
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಜಾತಿ ತಾರತಮ್ಯ, ಭೇದಭಾವ ನೀತಿ ರುದ್ರತಾಂಡವ ಆಡುತ್ತಿರುವ ದೇಶದಲ್ಲಿ , ವರ್ಗೀಯ ವ್ಯವಸ್ಥೆ ಹೊಂದಿರುವ ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದುಕುಗಳಲ್ಲಿ ಬುದ್ಧ, ಬಸವ ಮತ್ತು ಬಾಬಾ ಸಾಹೇಬ ಎಂಬ ಮೂವರು ಮಹನೀಯರು ಆಯಾ ಕಾಲದಲ್ಲಿ ಮಾಡಿದ ಸಾಧನೆ ಅಸಾಧಾರಣವಾದುದ್ದು. ನಾಡಿನ ಬಹುಸಂಖ್ಯಾತ ಜನ ಶೋಷಣೆಗೆ ಒಳಪಟ್ಟ ಸಂದರ್ಭದಲ್ಲಿ , ಇದನ್ನು ಮನಗಂಡು ಅವರನ್ನು ಎಚ್ಚರಿಸಿ, ಅವರನ್ನು ಶೋಷಣೆಯಿಂದ ಮುಕ್ತಿಯಾಗಿಸಲು ಹೆಣಗಾಡಿದ ಹಿರಿಯ ಚೇತನಗಳ ಬದುಕುಗಳ ಸಾಮ್ಯತೆ ಮತ್ತು ಚಿಂತನಾ ವೈಖರಿಗಳನ್ನು ಲೇಖಕ ಮಹಾಬಲೇಶ್ವರ ಕಾಟ್ರಹಳ್ಳಿಯವರು ಈ ಕೃತಿಯ ಮೂಲಕ ಓದುಗರ ಕೈಗೆಟುಕುವಂತೆ ಮಾಡಿದ್ದಾರೆ. ಈ ಕೃತಿಯಲ್ಲಿ ದೇಶ ದ ಪ್ರಮುಖ ಮೂರು ಮಹಾ ಪುರುಷರ ಬಗ್ಗೆ ಏಕಕಾಲಕ್ಕೆ ಒಂದು ಪುಸ್ತಕದಲ್ಲಿ ಮಾಹಿತಿಗಳು ದೊರೆಯುತ್ತದೆ.

About the Author

ಮಹಾಬಲೇಶ್ವರ ಕಾಟ್ರಹಳ್ಳಿ
(20 July 1950 - 02 November 2015)

ಬಳ್ಳಾರಿ ಜಿಲ್ಲೆಯ ಉತ್ತಂಗಿಯವರಾದ ಮಹಾಬಲೇಶ್ವರ ಕಾಟ್ರಹಳ್ಳಿ ತತ್ವಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಪತ್ರಕರ್ತರಾಗಿರುವ ಅವರು ’ಜೀವಸ್ಪಂದಿ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಅನ್ಯಕತೆಗಳು, ಹುಣ್ಣಿಮೆ ಚಂದಿರ ಮತ್ತು ಇತರ ಕತೆಗಳು, ಸಮಕಾಲೀನ  ಭಾರತದ ಇಂಗ್ಲಿಷ್ ಕತೆಗಳು ಅವರ ಅನುವಾದಿತ ಕೃತಿಗಳು.  ದೃಷ್ಟಿ, ನಿಗೂಢ ನಿಸರ್ಗ, ವಿಕೇಂದ್ರೀಕರಣ-ಒಂದು ಪ್ರಯೋಗ, ಸಿನಿಮಾ ಮತ್ತುಸಾಹಿತ್ಯ, ಬಾ ಗಿಳಿಯೆ ಬಾಗಳಿಗೆ, ವಿಚಾರದೊಡನೆ ಜಿಹಾದ, ಮಾಹಿತಿ ಸಂಸ್ಕೃತಿ, ಹಕ್ಕಿ ಹಾರುತಿದೆ ಇತರೆ ಪ್ರಕಟಿತ ಕೃತಿಗಳು. ...

READ MORE

Related Books