ಸಕಲೇಶ ಮಾದರಸ

Author : ಸಿದ್ಧರಾಮ ಹೊನ್ಕಲ್

Pages 104

₹ 70.00




Year of Publication: 2015
Published by: ಶ್ರೀ ಬಸವ ಅಧ್ಯಯನ ಪೀಠ
Address: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ,ಮೈಸೂರು ವಿಶ್ವವಿದ್ಯಾಲಯದ, ಮಾನಸ ಗಂಗೋತ್ರಿ-570006

Synopsys

ಬಸವಾದಿ ಶರಣರ ತಲೆಮಾರಿನ ಶರಣರ ಜೀವನ ಕೃತಿ. ಬಸವಣ್ಣನ ಹಿರಿಯ ಕಾಲದವರಾದ ಸಕಲೇಶ ಮಾದರಸನು ಕಲ್ಲುಕುರಿಕೆ ಎಂಬ ಊರಿನ ಅರಸ. ಅರಸನಾಗಿದ್ದ ಈ ದೊರೆ ಶರಣನಾಗಿ ವಚನ ಸಾಹಿತ್ಯ ಕ್ಕೆ ವಿಚಾರಕಿಂತ ಮಿಗಿಲೇನು ಇಲ್ಲ ಎಂಬ ನುಡಿ ನೀಡಿದ ಶರಣರ ಕೃತಿದಾಗಿದೆ . ಸಕಲೇಶ ಮಾದರಸ ಬರೆದ 133 ವಚನಗಳು ದೊರೆತ್ತಿವೆ. ಈ ಬಸವಾದಿ ಶರಣರ ಜೀವನವೃತಾಂತವನ್ನು ವಿವರಿಸುವ ಕೃತಿಯಾಗಿದೆ. ಒಬ್ಬ ಅರಸನು ಶರಣನಾಗಿದರ ಕುರಿತು ವಿವರಿಸುತ್ತದೆ.

About the Author

ಸಿದ್ಧರಾಮ ಹೊನ್ಕಲ್
(22 December 1960)

ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು.  ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು.  ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...

READ MORE

Related Books