ಸೊನ್ನಲಿಗೆಯ ಸಿದ್ಧರಾಮ

Author : ಚಂದ್ರಕಾಂತ ಬಿಜ್ಜರಗಿ

Pages 408

₹ 400.00




Year of Publication: 2012
Published by: ಶೈಲಚಂದ್ರ ಪ್ರಕಾಶನ
Address: ದರ್ಗಾ, ಸೆಂಟ್ರಲ್‌ ಜೈಲ್ ಹತ್ತಿರ, ವಿಜಯಪುರ 586103
Phone: 9448336151

Synopsys

12ನೆಯ ಶತಮಾನದ ಸಿದ್ಧರಾಮ ವೀರಶೈವ-ಲಿಂಗಾಯತನಾಗಿರಲಿಲ್ಲ ಎಂದು ಪ್ರತಿಪಾದಿಸುವ ಲೇಖಕರು ಅವನೊಬ್ಬ ನಾಥಸಿದ್ಧ ಎಂದು ಅಭಿಪ್ರಾಯ ಪಡುತ್ತಾರೆ. ಕುರುಬ ಕುಲದ ಒಳಪಂಗಡವಾದ ಹೈನುಗಾರ (ಕುಡಿಯರ್ ಒಕ್ಕಲಿಗ, ನೊಳಂಬ, ಹಂಡೆಕುರುಬ) ಒಳಪಂಗಡಕ್ಕೆ ಸೇರಿದವ ಎನ್ನುವ ಲೇಖಕರು ಸಿದ್ಧರಾಮ ತನ್ನ ಜೀವಿತ ಕಾಲದಲ್ಲಿ ಕಲ್ಯಾಣಕ್ಕೆ ಬರಲಿಲ್ಲ ಹಾಗೂ ವೀರಶೃವ ದೀಕ್ಷೆ ಪಡೆಯಲಿಲ್ಲ ಎಂದು ವಿವರಿಸುತ್ತಾರೆ.

ಸಿದ್ಧರಾಮನ ಕುರಿತು ಸದ್ಯ ಪ್ರಚಾರದಲ್ಲಿರುವ ಪವಾಡಕಥೆಗಳನ್ನು ಚರ್ಚಿಸುವ ಅವರು ಆತನ ಹೆಸರಿನ ಉಲ್ಲೇಖವಿರುವ 37 ಶಾಸನಗಳನ್ನು ಕಲೆಹಾಕಲಾಗಿದೆ ಎಂದು ವಿವರ ಒದಗಿಸುತ್ತಾರೆ. ಕರ್ನಾಟಕ ಮಹಾರಾಷ್ಟ್ರಗಳಲ್ಲಿರುವ 78 ಗದ್ದುಗೆಗಳ ವಿವರ ನೀಡಲಾಗಿದೆ. ಸಿದ್ಧರಾಮನ ಎಲ್ಲ ಮಂದಿರಗಳ ಪೂಜಾರಿಗಳು ಮೂಲತಃ ಕುರುಬ ಜಾತಿಗೆ ಸೇರಿದವರು ಎಂಬ ವಿವರನ್ನು ಲೇಖಕರು ನೀಡಿದ್ದಾರೆ.

About the Author

ಚಂದ್ರಕಾಂತ ಬಿಜ್ಜರಗಿ
(27 September 1949)

ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು.  ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ...

READ MORE

Related Books