
ಮರಾಠಿ ರಂಗಭೂಮಿ ಮತ್ತು ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಅಮೀರಬಾಯಿ ಕರ್ನಾಟಕಿ. ಮೂಲತಃ ಬಿಜಾಪುರದ ಅಮೀರ್ ಬಾಯಿ ಅವರು ಕನ್ನಡ ಚಿತ್ರರಂಗದಲ್ಲಿಯೂ ಅಭಿನಯಿಸಿ, ಹಾಡಿದ್ದರು. ನಂತರ ಮುಂಬೈಗೆ ಹೋದ ಅಮೀರ್ ಬಾಯಿ ಮತ್ತು ಅವರ ಸಹೋದರಿ ಗೋಹರ್ ಅಲ್ಲಿ ರಂಗಭೂಮಿಯಲ್ಲಿ ಗಣನೀಯ ಸಾಧನೆ ಮಾಡಿದರು. ನಂತರ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡರು, ಮಾತ್ರವಲ್ಲ ತಮ್ಮದೇ ಛಾಪು ಮೂಡಿಸಿದರು. ಒಂದು ಕಾಲಘಟ್ಟದಲ್ಲಿ ಅನಭಿಷಕ್ತಿ ಸಾಮ್ರಾಜ್ಞಿಯಾಗಿ ಮೆರೆದಳು. ಅಮೀರ್ ಬಾಯಿ ಅವರ ಬದುಕು- ಸಾಧನೆಗಳನ್ನು ವಿಶ್ಲೇಷಣಾತ್ಮಕ ರೀತಿಯಲ್ಲಿ ಸಂಶೋಧನೆ- ಮಾಡಿ ರಚಿಸಿದ ಕೃತಿಯಿದು. ಒಟ್ಟು ಹನ್ನೆರಡು ಅಧ್ಯಾಯಗಳಲ್ಲಿದೆ. ಹಾಡುನಟಿಯ ಪರಂಪರೆ, ರಂಗಭೂಮಿಗೆ ಸಂಗೀತದ ನಂಟು, ಕಲಾಲೋಕದ ಧರ್ಮಾತೀತತೆ, ಮುಂಬೈ ಹಾಗೂ ಮುಂಬೈ ಕರ್ನಾಟಕ, ಅಮೀರ್ ಬಾಯಿ: ಚಿತ್ರನಟಿಯಾಗಿ, ಗಾಯಕಿಯಾಗಿ, ಕನ್ನಡ ಹಾಡು, ಅಕ್ಕ ಗೋಹರ್ ಬಾಯಿ ಕರ್ನಾಟಕಿ, ಬಿಜಾಪುರದ ನಂಟು ಮತ್ತು ಕೊನೇ ದಿನಗಳು, ನೆನಪುಗಳಲ್ಲಿ ಅಮೀರ್ ಬಾಯಿ ಎಂಬ ಶೀರ್ಷಿಕೆಗಳ ಅಡಿಯಲ್ಲಿ ಚರ್ಚಿಸಲಾಗಿದೆ. ಇದೊಂದು ಅಪರೂಪದ ಮತ್ತು ಅಷ್ಟೇ ಮಹತ್ವದ ಗ್ರಂಥ.ಪುಸ್ತಕದ ಕೊನೆಯಲ್ಲಿ ಅಭ್ಯಾಸ ಸೂಚಿ, ಅಮೀರ್ ಬಾಯಿ ಹಾಡುಗಳ ಪಟ್ಟಿ, ಸಿನಿಮಾಗಳ ಪಟ್ಟಿ ಮತ್ತು ಫೋಟೊಗಳನ್ನು ನೀಡಲಾಗಿದೆ.
©2025 Book Brahma Private Limited.