ಅಂಬೇಡ್ಕರ್‌ ಮತ್ತು ಕಾರ್ಟೂನ್ ವಿವಾದ

Author : ಎಚ್.ಎಸ್. ಅನುಪಮಾ

Pages 120

₹ 100.00




Year of Publication: 2012
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ವ್ಯಂಗ್ಯಚಿತ್ರವೊಂದು ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿ ಸೇರಿಸಿದ್ದರಿಂದ ವಿವಾದಕ್ಕೆ ಕಾರಣವಾಗಿತ್ತು.  ಅಂಬೇಡ್ಕರ್‌ ಅವರು ಬಸವನ ಹುಳುವಿನ ಮೇಲೆ ಕುಳಿತಿದ್ದ ಚಿತ್ರದಲ್ಲಿ ನೆಹರು ಅವರು ಹಿಂದೆ ಚಾಟಿ ಹಿಡಿದು ನಿಂತ ಚಿತ್ರ ಅದಾಗಿತ್ತು. ಹೆಸರಾಂತ ವ್ಯಂಗ್ಯ ಚಿತ್ರಕಾರ ಶಂಕರ್‌ ಚಿತ್ರಿಸಿದ ಚಿತ್ರವು ಪ್ರಕಟವಾದ ಹಲವಾರು ವರ್ಷಗಳ ನಂತರ ವಿವಾದ ಹುಟ್ಟಿತ್ತು. ಈ ವಿವಾದದ ಕುರಿತಾದ ಬರಹಗಳನ್ನು ಈ ಸಂಕಲನ ಒಳಗೊಂಡಿದೆ. ಡಾ. ಎಚ್.ಎಸ್. ಅನುಪಮಾ ಮತ್ತು ಬಸವರಾಜ ಸೂಳಿಬಾವಿ ಅವರು ಈ ಪುಸ್ತಕವನ್ನು ಸಂಪಾದಿಸಿದ್ದಾರೆ.

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Related Books