ಕಂಗಳ ಮುಂದಿನ ಬೆಳಕು

Author : ವಿಶ್ವಾರಾಧ್ಯ ಸತ್ಯಂಪೇಟೆ

Pages 132

₹ 130.00




Year of Publication: 2019
Published by: ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ
Address: ಬಸವ ಬೆಳಗು, ಬುದ್ಧ ವಿಹಾರದ ಹತ್ತಿರ, ಶಹಾಪುರ, ಯಾದಗಿರಿ - 585223

Synopsys

‘ಕಂಗಳ ಮುಂದಿನ ಬೆಳಕು’ ಲೇಖಕ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಲೇಖನಗಳ ಸಂಕಲನ. ಪತ್ರಕರ್ತ ಚಾಮರಾಜ ಸವಡಿ ಅವರು ಬೆನ್ನುಡಿ ಬರೆದು ‘ಬಸವಣ್ಣನವರು ಹಾಗೂ ಶರಣರ ಬದುಕು ಮತ್ತು ಬೋಧನೆ ಕುರಿತು ವಾಸ್ತವಿಕ ನೆಲೆಗಟ್ಟಿನಲ್ಲಿ ಸ್ಪಷ್ಟವಾಗಿ ಮಾತನಾಡಬಲ್ಲವರ ಪೈಕಿ ವಿಶ್ವಾರಾಧ್ಯ ಸತ್ಯಂಪೇಟೆ ಅಗ್ರಗಣ್ಯರು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಧಾರ್ಮಿಕ ಹಾಗೂ ವೈಚಾರಿಕ ಬೂಟಾಟಿಕೆಯನ್ನು ಅತ್ಯಂತ ನಿಷ್ಠುರವಾಗಿ ಖಂಡಿಸುತ್ತಲೇ ಬಂದಿರುವ ಸತ್ಯಂಪೇಟೆ, ಬಸವಾದಿ ಶರಣರ ಕುರಿತು ನೈಜ ಚಿತ್ರಣವನ್ನು ಹೆಚ್ಚು ಸ್ಪಷ್ಟಪಡಿಸುತ್ತಾ ಹೋಗಿದ್ದಾರೆ. ಲಿಂಗಾಯತ ಧರ್ಮದ ಸಮಗ್ರತೆ ಕುರಿತ ಅವರ ಪ್ರತಿಪಾದನೆಗೆ ಶರಣರ ವಿಚಾರಗಳ ತಳಹದಿ ಇದೆ. ಇಲ್ಲಿ ನಾಡೋಜ ದೇ. ಜವರೇಗೌಡ, ಕೊಂಡು ತಂದು ಹೊತ್ತು ಮಾರಿ, ಜೀವಂತ ವಚನ ಗುಮ್ಮಟ, ಪಾಳೇಗಾರ ಲಂಕೇಶ್. ಕಲ್ಯಾಣ ತೊರೆದು ಹೋಗದಿರು, ಯಾವ ಋಣಾನು ಬಂಧವೋ, ಉಣ್ಣದ ಲಕ್ಷ್ಮಿಗೆ ಬೋನವ ಹಿಡಿಯಲಾರೆ, ದೇವರು ಎಲ್ಲಿದ್ದಾನೆ ಸೇರಿದಂತೆ ಹೀಗೆ ವಿವಿಧ ಶೀರ್ಷಿಕೆಯ ಒಟ್ಟು 20 ಲೇಖನಗಳು ಸಂಕಲನಗೊಂಡಿವೆ

About the Author

ವಿಶ್ವಾರಾಧ್ಯ ಸತ್ಯಂಪೇಟೆ
(08 June 1969)

ವಿಶ್ವಾರಾಧ್ಯ ಸತ್ಯಂಪೇಟೆ ಮೂಲತಃ ಯಾದಗಿರಿ ಜಿಲ್ಲೆಯ (08-06-1969) ಸುರಪುರ ತಾಲೂಕಿನ ಸತ್ಯಂಪೇಟೆಯವರು. ತಂದೆ ಹಿರಿಯ ಲೇಖಕ, ಚಿಂತಕ, ಪತ್ರಕರ್ತ ಲಿಂಗಣ್ಣ ಸತ್ಯಂಪೇಟೆ, ತಾಯಿ- ಶಾಂತಮ್ಮ ಸತ್ಯಂಪೇಟೆ. ಬಿ.ಎ ಮುಗಿಸಿ, ಡಿಪ್ಲೋಮಾ ಇನ್ ಜರ್ನಲಿಸಂ ಪೂರ್ಣಗೊಳಿಸಿದ್ದಾರೆ.  ಹವ್ಯಾಸಿ ಪತ್ರಕರ್ತರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಹಾಗೂ ಸತ್ಯಂಪೇಟೆಯ ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷರೂ ಆಗಿದ್ದಾರೆ. ಈ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಬಸವ ಬೆಳಕು ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ‘ಮನೆಯಲ್ಲಿ ಮಹಾಮನೆ’ ಶೀರ್ಷಿಕೆಯಡಿ ಬಸವ ತತ್ವ ಪ್ರಚಾರ-ಪ್ರಸಾರವೇ ಜೀವಾಳವಾಗಿರಿಸಿಕೊಂಡು ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.  ಕೃತಿಗಳು:  ಸಾಹಿತ್ಯ ಕೃಷಿಯೂ ಅವರ ಇಷ್ಟದ ಹವ್ಯಾಸ. ಚಿತ್ತ ಚೋರರು, ಬಸವಣ್ಣ ಮತ್ತು ...

READ MORE

Related Books