ಪಂಚಾಚಾರ್ಯರ ಪೂರ್ವಗ್ರಹಗಳು

Author : ವೀರಭದ್ರ ಚನ್ನಮಲ್ಲ ಸ್ವಾಮಿ

Pages 49

₹ 50.00




Year of Publication: 2000
Published by: ಅನು ಪ್ರಕಾಶನ
Address: ನಂ.1008, 8ನೇ ಬಿ. ಮುಖ್ಯರಸ್ತೆ, 3ನೇ ಬ್ಲಾಕ್ , 3ನೇ ಸ್ಟೇಜ್, ಬಸವೇಶ್ವರನಗರ, ಬೆಂಗಳೂರು- 79
Phone: 3229763

Synopsys

ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅವರ ಕೃತಿ ‘ಪಂಚಾಚಾರ್ಯರ ಪೂರ್ವಗ್ರಹಗಳು’. ಧರ್ಮಾಂಧತೆ, ಮೌಢ್ಯಗಳ ಕುರಿತು ಈ ಕೃತಿಯಲ್ಲಿ ವಿವರಿಸಿದ್ದಾರೆ. ಅರಮನೆ-ಗುರುಮನೆ ಒಂದಕ್ಕೊಂದು ಪೂರಕವಾಗಿಯೇ ಬೆಳೆದು ಬಂದಿವೆ. ಪರಿಣಾಮ, ಇಂದು ಧರ್ಮ ಮತ್ತು ರಾಜಕಾರಣ ಒಂದಕ್ಕೊಂದು ಶಕ್ತಿ ಸಂಚಯದ ಅಂತಃ ಸಂಬಂಧ ಪಡೆದಿದೆ. ಹೀಗೆಯೇ ಇಂದಿನ ಧರ್ಮದ, 'ಜಗದ್ಗುರು'ಗಳ ಚಟುವಟಿಕೆಗಳು ಕನಿಷ್ಠ ತನ್ನದೇ ಧರ್ಮದ ಸರ್ವ ಜನರ ಒಳಿತನ್ನೂ ಬಯಸದೇ, ಕಂದಾಚಾರ ಪಾಲನೆಯಲ್ಲಿ ಆಸಕ್ತವಾಗಿವೆ. ತಮ್ಮ ಅಸ್ತಿತ್ವಕ್ಕಾಗಿ ಹುಸಿ ಆಚರಣೆಗಳು, ಡಂಭಾಚಾರಗಳ ಮುಖಾಂತರ ತಾನು ಇನ್ನೊಂದು ಧರ್ಮಕ್ಕಿಂತ ಶ್ರೇಷ್ಠ ಎಂದು ಸಾಧಿಸ ಹೊರಟಿವೆ. ಆ ಶ್ರೇಷ್ಠತೆಯನ್ನು ನಂಬಿಸಲು 'ಅನಾದಿ, ಜಗದಾದಿ ಲಿಂಗೋದ್ಬವ'ಗಳ ಕತೆ ಕಟ್ಟಿಕೊಂಡಿವೆ. ಇವೆಲ್ಲ ಶ್ರೇಷ್ಠತೆಯ ಪ್ರದರ್ಶನಕ್ಕಾಗಿ ನಡೆಯುವಂಥವು. ನಾನು ಶೇಷ್ಠ, ನನ್ನ ಧರ್ಮವೇ ಶ್ರೇಷ್ಠ ಸಾಧಿಸಹೊರಟಿವೆ. ಆ ಶ್ರೇಷ್ಠತೆಯನ್ನು ನಂಬಿಸಲು ಅನೇಕಾನೇಕ 'ಹುಸಿ ಪ್ರಹಸನ' ನಡೆಸುತ್ತವೆ. ನನ್ನ ಕೆಳಗೆ ಇನ್ನೊಂದು ಧರ್ಮ, ಕನಿಷ್ಠವಾದುದಿವೆ ಎಂಬ ಡಂಭಾಚಾರದ ತಾಲೀಮು ನಡೆಸುತ್ತಿವೆ. ಅದಕ್ಕಾಗಿ ಇನ್ನೊಂದು ಧರ್ಮ, ಚಿಂತನೆಯ ಬಗೆಗೆ ಕೀಳುಭಾವನೆ ಮೂಡಿಸುತ್ತಿವೆ. ಇದೆಲ್ಲ ಎಂತಹ ಕೀಳು ಅಭಿರುಚಿ ಎಂಬುದು ಮೇಲ್ನೋಟಕ್ಕೇ ಅರಿವಾಗುತ್ತದೆ. 'ಕೀರ್ತಿಕಾಮಿ'ಗಳು ಎಂಬ ಶಬ್ದವನ್ನು ವೀರಭದ್ರ ಚೆನ್ನಮಲ್ಲ ಸ್ವಾಮಿಗಳು 'ಪಂಚಾಚಾರ್ಯರ ಪೂರ್ವಗ್ರಹಗಳು' ಕೃತಿಯಲ್ಲಿ ವಿವರಿಸಿದ್ದಾರೆ.

About the Author

ವೀರಭದ್ರ ಚನ್ನಮಲ್ಲ ಸ್ವಾಮಿ
(01 June 1960)

ವೀರಭದ್ರ ಚನ್ನಮಲ್ಲ ಸ್ವಾಮಿ ಅವರು ಜನಿಸಿದ್ದು 1960 ಜೂನ್ 1ರಂದು ಚಿತ್ರದುಗದಲ್ಲಿ. ನಿಡುಮಾಮಿಡಿ ಮಠದ ಮಠಾಧೀಶರಾಗಿರುವ ಇವರು ವೈಚಾರಿಕ ಚಿಂತನೆ, ಕಾವ್ಯ, ಪ್ರಬಂಧ, ಸಂಪಾದನೆ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಇವರ ಪ್ರಮುಖ ಕೃತಿಗಳೆಂದರೆ ಸುಳ್ಳು ಸೃಷ್ಟಿಗಳು, ಅಂತರ, ಕನ್ನಡದ ಬನ ವಚನಾಂಜಲಿ, ಮಣ್ಣು ಮುಗಿಲು ( ಕಾವ್ಯ), ವ್ಯಾಸಂಗ (ಪ್ರಬಂಧ): ನೆನಹುನಮನ, ಸ್ವಾತಂತ್ರ್ಯ ಸೂರ್ಯ ಜಚನಿ, (ಸಂಪಾದನೆ) ಶಿವಸಂಸ್ಕೃತಿ ಒಂದು ಚಿಂತನೆ, ಮಠಾಧೀಶರ ಮರ್ಮ, ಪಂಚಾಚಾರ್ಯರ ಪೂರ್ವಗ್ರಹಗಳು; ಒಲವು - ನಿಲುವು, ಸಹಜ ಜೀವಿಗಳು (ವೈಚಾರಿಕ ಲೇಖನಗಳು) ಮುಂತಾದವು.  ...

READ MORE

Related Books