ಮಿತ್ರಲಾಭ

Author : ಲಕ್ಷ್ಮಣ ಕೊಡಸೆ

Pages 204

₹ 207.00




Year of Publication: 2020
Published by: ಸಿರಿವರ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ, ಅಂಕಣಕಾರ ಲಕ್ಷ್ಮಣ ಕೊಡಸೆ ಅವರ ಕೃತಿ-ಮಿತ್ರಲಾಭ. ಲೇಖಕರು ತಮ್ಮ ಅನುಭವಕ್ಕೆ ಬಂದ ಘಟನೆ, ವ್ಯಕ್ತಿ, ಸನ್ನಿವೇಶಗಳು, ಓದು ಹೀಗೆ ಎಲ್ಲವನ್ನೂ ಅಕ್ಷರ ರೂಪಕ್ಕೆ ಇಳಿಸಿದ್ದೇ ಈ ಕೃತಿ. ಮಲೆನಾಡಿನ ಕಥೆಗಳಿರಬಹುದು. ಕುವೆಂಪು -ತೇಜಸ್ವಿ ಯಾಗಿರಬಹುದು. ಮಲೆಗಳಲ್ಲಿ ಮದುಮಗಳು -ಇಂತಹ ಕಾದಂಬರಿಗಳಿರಬಹುದು, ಇವು ಆತ್ಮ ನಿರೂಪಣಾ ಶೈಲಿಯನ್ನು ಅನುಸರಿಸುತ್ತವೆ. ಆದರೂ, ಆತ್ಮಕಥೆ ಎಂದು ಹೇಳುವಂತಿಲ್ಲ. ಒಂದು ವಿಷಯದ ಆಯ್ಕೆ ಹಾಗೂ ಅದರ ಮೇಲೆ ಕ್ಷಕಿರಣದಷ್ಟು ತೀಕ್ಷಣವಾಗಿ ಪ್ರತಿಕ್ರಿಯಿಸುವ-ಸ್ಪಂದಿಸುವ ಗುಣಗಳ ಬರೆಹಗಳಿವು. ಹೀಗಾಗಿ, ಪ್ರತಿ ಬರೆಹವು ಪ್ರಖರ ವೈಚಾರಿಕತೆ, ತೀವ್ರ ಭಾವನಾತ್ಮಕತೆ ಹಾಗೂ ಪರಿಗಣಿಸಲೇ ಬೇಕಾದ ವರ್ತನಾ ರೀತಿಗಳು ಅಧ್ಯಯನ ಯೋಗ್ಯವೆನಿಸುತ್ತವೆ. ಲೇಖಕರೇ ಹೇಳುವಂತೆ ‘ಈ ಕೃತಿಯು ನೆನಪುಗಳ ಮೆರವಣಿಗೆ’ಯ ಸಂಭ್ರಮದ ಅನುಭವ ನೀಡುತ್ತದೆ. 

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Related Books