ಸಾಂಖ್ಯ ದರ್ಶನ

Author : ಎಸ್.ಎಸ್. ಹಿರೇಮಠ

Pages 100

₹ 35.00




Year of Publication: 2002
Published by: ಸಮತಾ ಪ್ರಕಾಶನ
Address: ಬೆಂಗಳೂರು

Synopsys

‘ಸಾಂಖ್ಯ ದರ್ಶನ’ಎಸ್‌.ಎಸ್‌. ಹಿರೇಮಠ ಅವರ ಅಧ್ಯಯನ ಕೃತಿಯಾಗಿದೆ. ಪ್ರಕೃತಿ ಹಾಗೂ ಮನುಷ್ಯನ ಸಂಬಂಧಗಳನ್ನು ವಿಶ್ಲೇಷಿಸು ಸುತ್ತ ಲೌಕಿಕ - ಪಾರಲೌಕಿಕ ವಿಚಾರಗಳತ್ತ ಅಧ್ಯ ಯನ - ತರ್ಕಗಳು ನಡೆಯುತ್ತಿದ್ದಂತೆ ಪ್ರಪಂಚದೆಲ್ಲೆಡೆ ದರ್ಶನಗಳು ಜ್ಞಾನ ಶಾಖೆಗಳಾಗಿ ಮೂಡಿಬಂದಿವೆ.

About the Author

ಎಸ್.ಎಸ್. ಹಿರೇಮಠ

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಎಸ್.ಎಸ್. ಹಿರೇಮಠ ಅವರು ಬೆಳಗಾವಿ ಜಿಲ್ಲೆಯ ಸಾಣಿಕೊಪ್ಪದವರು. ರಾಯಣ್ಣನ ಸಂಗೊಳ್ಳಿ, ಸಂಗ್ಯಾಬಾಳ್ಯಾದ ಬೈಲವಾಡ, ಬೈಲಹೊಂಗಲ, ಕಿತ್ತೂರು ಪರಿಸರದಲ್ಲಿ ಬರುವ ಊರು ಸಾಣಿಕೊಪ್ಪ. ಬೆಳಗಾವಿಯಲ್ಲಿ ಬಿ.ಎ. ಮತ್ತು ಧಾರವಾಡದಲ್ಲಿ ಎಂ. ಎ ಪದವಿ ಪಡೆದ ನಂತರ ಹಿರೇಮಠರು ಹೊಸಪೇಟೆ, ಹಡಗಲಿ, ಹರಪನಹಳ್ಳಿಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಪ್ರಗತಿಪರ ಸಂಘಟನೆ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ದಲಿತರ ಇತಿಹಾಸ ಮತ್ತು ಸಂಸ್ಕೃತಿ ಪರಂಪರೆಯ ಕುರಿತು ಶೋಧನೆ ನಡೆಸಿದ್ದಾರೆ. ದರ್ಶನಗಳ ಸರಣಿಯಲ್ಲಿ ಪಾಶುಪತ ದರ್ಶನ, ಕಾಳಾಮುಖ ದರ್ಶನ, ಲಾಕುಳ ದರ್ಶನ ಕೃತಿಗಳು ಪ್ರಕಟಗೊಂಡಿವೆ. ...

READ MORE

Reviews

ಹೊಸತು-  ಸೆಪ್ಟೆಂಬರ್‌ -2003

ಪ್ರಕೃತಿ ಹಾಗೂ ಮನುಷ್ಯನ ಸಂಬಂಧಗಳನ್ನು ವಿಶ್ಲೇಷಿಸುತ್ತ ಲೌಕಿಕ - ಪಾರಲೌಕಿಕ ವಿಚಾರಗಳತ್ತ ಅಧ್ಯಯನ - ತರ್ಕಗಳು ನಡೆಯುತ್ತಿದ್ದಂತೆ ಪ್ರಪಂಚದೆಲ್ಲೆಡೆ ಅನೇಕ ದರ್ಶನಗಳು ಜ್ಞಾನ ಶಾಖೆಗಳಾಗಿ ಮೂಡಿಬಂದವು. ಅವುಗಳಲ್ಲೊಂದು ಭಾರತದ ಕಪಿಲ ಮುನಿಗಳ ಕೊಡುಗೆಯಾದ ಸಾಂಖ್ಯದರ್ಶನ. ಮೂಲದಲ್ಲಿ ನಿರೀಶ್ವರವಾದ - ವೈದಿಕವಲ್ಲದ ಭೌತವಾದಿ ವಿಚಾರಗಳಿಂದ ತುಂಬಿದ್ದ ಸಾಂಖ್ಯದಿಂದ ಉಳಿದೆಲ್ಲ ದರ್ಶನಗಳು ಎಲ್ಲ ಪರಿಭಾಷೆ ಬಳಸಿ ಅದರ ಉತ್ತಮ ಗುಣಗಳನ್ನು ಹೀರಿಕೊಂಡವು. ತಾತ್ವಿಕ ಚಿಂತನೆಗೆ ಹೇರಳ ದ್ರವ್ಯವಾದ ಸಾಂಖ್ಯದ ಅದ್ಭುತ ವಿವರಣೆ ಇಲ್ಲಿದೆ.

Related Books