ವಿಚಾರದಡವಿಯೊಳಗಿನ ಪಯಣಕ್ಕೆ

Author : ಯು. ಶ್ರೀನಿವಾಸಮೂರ್ತಿ

Pages 128

₹ 100.00




Year of Publication: 2019
Published by: ಗಾಯತ್ರಿ ಪ್ರಕಾಶನ
Address: #193, ಚರ್ಚ್‌ ಹೌಸ್‌ ಹತ್ತಿರ, ಬಂಡಿಹಟ್ಟಿ, ಚೌಲ್‌ ಬಜಾರ್‌, ಬಳ್ಳಾರಿ
Phone: 9880254405

Synopsys

ವಿಚಾರದಡವಿಯೊಳಗಿನ ಪಯಣಕ್ಕೆ ಯು. ಶ್ರೀನಿವಾಸಮೂರ್ತಿ ಅವರ ಕೃತಿಯಾಗಿದೆ. ನಮ್ಮ ದಿನನಿತ್ಯದ ಕಾರ್ಯಕ್ರಮಗಳಲ್ಲಿ ನಮ್ಮ ಅರಿವಿಗೆ ಬಂದು ಕೆಲವು ನಮ್ಮ ಅರಿವಿಗೆ ಬರದೆ ಕೆಲವು ಸರಿ ತಪ್ಪು ನಡೆಯುತ್ತವೆ. ಅದು ಪ್ರಕೃತಿ ಸಹಜವೂ ಆಗಿದೆ. ಆದರೆ ತಿಳಿವಳಿಕೆಯನ್ನುಳ್ಳ ಮಾನವನು ನಿತ್ಯದಲ್ಲಿ ಒಮ್ಮೆಯಾದರೂ ತನ್ನ ನಡೆ ನುಡಿಗಳನ್ನು ಅಂತರಾಳದಿಂದ ಪರಿಶೋಧಿಸಿಕೊಂಡರೆ ನಿರ್ಮಲ(ಶುಭ್ರ)ವಾದ ಆಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗೆ ಸಾಧ್ಯವಾಗಿಸಿಕೊಂಡವರು ಜಾತಿ ಮತ ಭೇದವಿಲ್ಲದೆ ಎಲ್ಲ ಸಮುದಾಯದ ಅನೇಕ ಜನ ನಮ್ಮ ಪೃಥ್ವಿಯಲ್ಲಿ ಜನಿಸಿ ಸಾಧಿಸಿ ತೋರಿಸಿ ಹೋಗಿದ್ದಾರೆ. ಆ ಎಲ್ಲ ಮಹಾತ್ಮರ ಅನುಭವ ವಾಣಿಯನ್ನು ಸಾರಭೂತವಾಗಿ ಚಿಂತನೆಗೆ ಒಳಪಡಿಸಿ ನಮ್ಮ ಮಾತುಗಳಲ್ಲಿ ಸೆರೆಹಿಡಿಯುವುದೆ ‘ವಿಚಾರದಡವಿಯೊಳಗಿನ ಪಯಣ’ ಎಂದೆನಿಸುತ್ತಿದೆ.

About the Author

ಯು. ಶ್ರೀನಿವಾಸಮೂರ್ತಿ

28 ವರ್ಷಗಳ ಕಾಲ ಗಣಿತ, ವಿಜ್ಞಾನ ಶಿಕ್ಷಕರಾಗಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸುಧೀರ್ಘ ಅನುಭವ ಹೊಂದಿದ ಇವರು ಗಣಿತ, ವಿಜ್ಞಾನ ಬೋಧನೆಯ ಅನುಭವದ ಜೊತೆಗೆ ಮೂಢನಂಬಿಕೆ ಬಗ್ಗೆ ಜಾಗ್ರತಿ ಮೂಡಿಸುವ ಮತ್ತು ವೈಚಾರಿಕತೆ ಬೆಳೆಸುವ, ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಆಸಕ್ತಿ ಹೆಚ್ಚಿಸುವ, ವ್ಯಕ್ತಿತ್ವ ಬೆಳವಣಿಗೆ ಕಾರಣವಾಗುವಂತಹ ಸಾವಿರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಶಾಲೆ, ಕಾಲೇಜು ಎಂಬ ಸಂಸ್ಥೆಗಳು ಸಮಾಜದ ಪ್ರತಿರೂಪದಂತಿರುತ್ತವೆ. ಈ ಹೊತ್ತಿನ ಮಕ್ಕಳ ನಡವಳಿಕೆಯಲ್ಲಿನ ಬದಲಾವಣೆಯ ಪರಿ ಕಂಡಾಗ ಶಿಕ್ಷಕನಿಗೆ ಮುಂದಿನ ಸಮಾಜ ಹೇಗೆ ನಿರ್ಮಾಣ ವಾಗುತ್ತದೆ ಎಂಬ ಸುಳುಹು ಕಂಡು ಬರುತ್ತದೆ ಎಂದು ನಂಬಿ ಕೆಲವು ಲೇಖನಗಳನ್ನು ...

READ MORE

Related Books