'ಹೇ ರಾಮ್‌' ಭಾರತದ ಆತ್ಮಚ್ಛೇದ ಕಥನ

Author : ನ. ರವಿಕುಮಾರ್

Pages 400

₹ 250.00




Year of Publication: 2003
Published by: ಅಭಿನವ
Address: ಅಭಿನವ, 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040.
Phone: 9448804905 / 9448676770

Synopsys

"ಹೇ ರಾಮ್‌' ಭಾರತದ ಆತ್ಮಚ್ಛೇದ ಕಥನ’ ನ. ರವಿಕುಮಾರ ಅವರ ಸಂಪಾದನೆಯ ಕೃತಿಯಾಗಿದೆ. ಸ್ವಾತಂತ್ರ್ಯ ಕಾಲದ ದೇಶ ವಿಭಜನೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂದೂ-ಮುಸ್ಲಿಂ ಗಲಭೆ ಗಾಂಧೀಜಿಯವರ ಉಸಿರಾದ ಅಹಿಂಸೆಯನ್ನು ಗಾಳಿಗೆ ತೂರಿ ರಕ್ತರಂಜಿತ ಅಧ್ಯಾಯವನ್ನು ಬರೆಯಿತು. ಒಂದೇ ಮನೆಯವ ರಂತಿದ್ದ ಅವರು ಜನ್ಮಾಂತರದ ವೈರಿಗಳಾಗಿ ಮಾರ್ಪಾಡು ಹೊಂದಿದ್ದು ಹೇಗೆ ? ಎಂಬುದನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ.

About the Author

ನ. ರವಿಕುಮಾರ್
(02 February 1969)

ನ. ರವಿಕುಮಾರ್ ಅವರು ಮೂಲತಃ ತುಮಕೂರಿನವರು. ಕುಣಿಗಲ್ ತಾಲೋಕಿನ ಪುಟ್ಟಯ್ಯನಪಾಳ್ಯ, ಹಾಲಶೆಟ್ಟಿಹಳ್ಳಿ, ಕೆಂಪಸಾಗರ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು, ಎಸ್.ಕೆ. ಎಫ್. ಬೇರೀಂಗ್ಸ್ ಕಾರ್ಖಾನೆಯಲ್ಲಿ 25 ವರ್ಷಗಳ ದುಡಿದಿದ್ದಾರೆ. ಆನಂತರ ‘ಅಭಿನವ’ ಪ್ರಕಾಶನವನ್ನು ಆರಂಭಿಸಿ ಆ ಮೂಲಕ ವಿವಿಧ ಲೇಖಕರ  500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹಾಗೂ ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಉಪನಿಷತ್ತು(2018), ಮಕ್ಕಳಿಗಾಗಿ ಕೆ.ಎಸ್ . ನರಸಿಂಹಸ್ವಾಮಿ,  ಆಯ್ದ ವಿಮರ್ಶೆಗಳು, ದೇವರ ಗೊಡವೆ ಕೂಡಾ ನನಗೆ ಬೇಡ, ಮನುಕುಲದ ಮಾತುಗಾರ, ಮಾತು ತಲೆ ಎತ್ತಿದ ಬಗೆ ಅವರ ಪ್ರಕಟಿತ ಕೃತಿಗಳು.  ಕರ್ನಾಟಕ ಪ್ರಕಾಶಕರ ...

READ MORE

Reviews

ಹೊಸತು- 2004-ಫೆಬ್ರವರಿ 

ಸ್ವಾತಂತ್ರ್ಯ ಕಾಲದ ದೇಶ ವಿಭಜನೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂದೂ-ಮುಸ್ಲಿಂ ಗಲಭೆ ಗಾಂಧೀಜಿಯವರ ಉಸಿರಾದ ಅಹಿಂಸೆಯನ್ನು ಗಾಳಿಗೆ ತೂರಿ ರಕ್ತರಂಜಿತ ಅಧ್ಯಾಯವನ್ನು ಬರೆಯಿತು. ಒಂದೇ ಮನೆಯವ ರಂತಿದ್ದ ಅವರು ಜನ್ಮಾಂತರದ ವೈರಿಗಳಾಗಿ ಮಾರ್ಪಾಡು ಹೊಂದಿದ್ದು ಹೇಗೆ ? ಅ೦ದಿನ ಕ್ರೌರ್ಯವನ್ನು ಕಣ್ಣಾರೆ ಕಂಡ ಸಾಹಿತಿ-ಕವಿ- ಬುದ್ಧಿಜೀವಿಗಳು ಭಾರತವನ್ನು ರಕ್ತಸಿಕ್ತ ಹೋಳನ್ನಾಗಿ ಹಂಚಿಕೊಟ್ಟ ಬಗ್ಗೆ ಸಾಕಷ್ಟು ಸಾಹಿತ್ಯವನ್ನು ರಚಿಸಿದ್ದಾರೆ. ಎರಡೂ ದೇಶಗಳ ಜನರ ಮಾನಸಿಕ ನೋವನ್ನಲ್ಲಿ ಕಾಣಬಹುದು. ಅಂಥ ಕೆಲವು ಲೇಖನಗಳ ಸಂಗ್ರಹ ಇಲ್ಲಿದೆ.

Related Books