
ಪ್ರೊ. ಜಿ. ರಾಮಕೃಷ್ಣ ಅವರ ಕೃತಿ-ಎಂದಿಗೂ ಸಲ್ಲುವ ಮಾರ್ಕ್ಸ್. ವಿಶ್ವ ಕಾರ್ಮಿಕರು ಎಂ ಪರಿಕಲ್ಪನೆಯನ್ನು ಸಾಕಾರಗೊಳಿಸಿದವರೇ ಕಾರ್ಲ್ ಮಾರ್ಕ್ಸ್. ಶ್ರಮದ ಮಹತ್ವವನ್ನು ಕಾರ್ಮಿಕರ ಘನತೆಯನ್ನು ಎತ್ತಿ ಹಿಡಿದವರು. ಹೀಗಾಗಿ, ಕಾರ್ಲ್ ಮಾರ್ಕ್ಸ್ ನ ಸಿದ್ಧಾಂತಗಳು ಎಂದಿಗೂ ಇರುವಂತಹವು. ಬಂಡವಾಳಶಾಹಿ ವಿರುದ್ಧ ಹೋರಾಟದ ಕರೆ ನೀಡಿದ್ದು ಎಂದಿಗೂ ಕುಗ್ಗದ ಧ್ವನಿ-ಹೋರಾಟ. ಜಾಗತೀಕರಣದ ಎಲ್ಲ ಘಟ್ಟಗಳಲ್ಲೂ ಸಾಮ್ರಾಜ್ಯಶಾಹಿಗಳು ಮತ್ತೊಂದು ರೀತಿಯಲ್ಲಿ ಬಡವರ ಶೋಷಣೆ ಮಾಡುತ್ತಿರುವುದು. ಕಾರ್ಲ್ ಮಾರ್ಕ್ಸ್ ಹೋರಾಟದ ದಾರಿ ಹಿಡಿದಾಗ ಕಾಲಕ್ಕಿಂತಲೂ ಪರಿಸ್ಥಿತಿ ಭಿನ್ನವಾಗಿದೆಯಾದರೂ ಶೋಷಣೆಯ ಸ್ವರೂಪವೇನೂ ಬದಲಾಗಿಲ್ಲ. ಹಣ ಮತ್ತು ಅಧಿಕಾರದ ಬಲದಿಂದ ಪ್ರಜಾಪ್ರಭುತ್ವದ ದಾರಿಯಾಗಿ ಆರಿಸಿಬಂದು ಗೋಮುಖ ವ್ಯಾಘ್ರದಂತಹ ನಯವಾದ ಶೋಷಣೆ ಇಂದಿನದು! ಇಂತಹ ಅಂಶಗಳನ್ನು ಕೃತಿಯಲ್ಲಿ ಲೇಖಕರು ಚರ್ಚಿಸಿದ್ದಾರೆ. ಮಾನವೀಯ ಸಿದ್ಧಾಂತಗಳಿಗೆ ಜಾತಿ-ಧರ್ಮದ , ದೇಶದ ಗಡಿ ರೇಖೆಯ ಗೋಜು ಇರದು ಎಂಬುದನ್ನು ಹೇಳುವ ಸೈದ್ಧಾಂತಿಕ ಕೃತಿ ಇದು.

©2025 Book Brahma Private Limited.