ಬದುಕೇ ಒಂದು ಸವಾಲು

Author : ವಿಹಾರಿಕಾ ಅಂಜನಾ ಹೊಸಕೇರಿ

Pages 120

₹ 100.00




Year of Publication: 2021
Published by: ಉದಯ ಪ್ರಕಾಶನ
Address: #984, 11ನೇ ’ಎ’ ಮೈನ್, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು
Phone: 08023389143

Synopsys

ಯುವ ಲೇಖಕಿ ವಿಹಾರಿಕಾ ಅಂಜನಾ ಹೊಸಕೇರಿ ಅವರ ’ಬದುಕೇ ಒಂದು ಸವಾಲು’ ಕೃತಿಯು ಚಿಂತನಶೀಲ ಬರವಣಿಗೆಗಳನ್ನು ಒಳಗೊಂಡಿದೆ. ಒಟ್ಟು ಬರಹಗಳಿವೆ. ಸಾಧನೆಯ ಮನಸ್ಸು, ಹಿಂದಿನ ಕಾಲ-ಇಂದಿನ ಕಾಲ, ಜೀವನವೇ ವಿದ್ಯೆ - ವಿದ್ಯೆಯೇ ಜೀವನ, ಗ್ರಂಥಾಲಯ ಪ್ರಕೃತಿ, ನಮ್ಮ ಭಾರತೀಯ ಯೋಧರೇ ನಮ್ಮೆಲ್ಲರ ಸಹೋದರರು, ಶಿಕ್ಷಕರು, ಧೈರ್ಯ, ಸಮಯ, ಆತ್ಮವಿಶ್ವಾಸವೇ ಯಶಸ್ಸಿನ ಶಕ್ತಿ, ಮುತ್ತಿನ ಮಾತುಗಳು, ಮುಳ್ಳಿನ ಹಾದಿ, ಹೆಣ್ಣು ಈ ಜಗದ ಕಣ್ಣು, ವಿಶಾಲ ಮನಸ್ಸು, ಜನ್ಮಕೊಟ್ಟ ದೇವತೆ, ಹಣ, ಶ್ರೀಮಂತಿಕೆ ಎಂಬ ಹೃದಯ, ಸಿಡಿಲು ಮಿಂಚಿಗೆ ಕರಗದಿರಲಿ, ನಮ್ಮ ಕುಟುಂಬ, ಮನಸ್ಸು, ಬದುಕೇ ಒಂದು ಸವಾಲು ಹೀಗೆ ವಸ್ತು ವೈವಿಧ್ಯತೆಯ ಬರಹಗಳಿವೆ. ವಯಸ್ಸಿಗೆ ಮೀರಿದ ಚಿಂತನೆಗಳ ಚಿತ್ತಾರವಿದೆ. ಕೆಲವಕ್ಕೆ ಭಾವದ ವೇಗವಿದ್ದರೆ ಮತ್ತೆ ಕೆಲವಕ್ಕೆ ಚಿಂತನೆಯ ನಿಧಾನವಿದೆ. ವಿಚಾರಗಳ ಅಭಿವ್ಯಕ್ತಿ, ಪ್ರಬಂಧಗಳ ಒಟ್ಟು ಬಂಧ, ಭಾಷೆಯನ್ನು ಬಳಸುವಾಗಿನ ಎಚ್ಚರ ಮತ್ತು ಸಂಯಮಗಳು ಇಲ್ಲಿ ಬರವಣಿಗೆಗಳ ಕೊಂಡಿಯಾಗಿದೆ. ವಿಷಯಗಳ ಆಯ್ಕೆಯು ಗಗನ ತುಂಬಿದ ಕಾಮನಬಿಲ್ಲಿನಂತೆ ವಿಸ್ತಾರವಾಗಿದ್ದು, ಪ್ರತಿಯೊಂದು ವಿಷಯದಲ್ಲಿ ಪುಟಿಯುವ ಆತ್ಮವಿಶ್ವಾಸ, ಮೌಲ್ಯಗಳ ಮೆರವಣಿಗೆ ಇವೆಲ್ಲವೂ ಬರವಣಿಗೆಯ ಕಲಾವಸ್ತುಗಳಾಗಿವೆ’ ಎಂದು ಪ್ರಶಂಸಿಸಿದ್ದಾರೆ.

About the Author

ವಿಹಾರಿಕಾ ಅಂಜನಾ ಹೊಸಕೇರಿ
(14 May 2006)

ಯುವ ಬರಹಗಾರ್ತಿ ವಿಹಾರಿಕಾ ಅಂಜನಾ ಹೊಸಕೇರಿ ಮೂಲತಃ ಧಾರವಾಡ ಜಿಲ್ಲೆಯವರು. ತಂದೆ ಲಕ್ಷ್ಮಣ ಹೊಸಕೇರಿ, ತಾಯಿ ಜಯಲಕ್ಷ್ಮಿ. ಶಾಲಾ ದಿನಗಳಲ್ಲಿ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಹಲವಾರು ಬಹುಮಾನ ಪಡೆದಿದ್ದಾರೆ. ಮೊದಲಿನಿಂದಲೂ ಸಂಗೀತ, ಸಾಹಿತ್ಯ, ನೃತ್ಯ, ನಟನೆಯಲ್ಲಿ ಆಸಕ್ತಿ ಇತ್ತು. ಬುಕ್ ಬ್ರಹ್ಮ ಆಯೋಜಿಸಿದ್ದ 2020 ನೇ ಸಾಲಿನ ಕತಾಸ್ಪರ್ಧೆಯಲ್ಲಿ ’ಜನಮೆಚ್ಚಿದ ಕತೆ’ ಹಾಗೂ ’ಜನ ಮೆಚ್ಚಿದ ಲೇಖನ’ಗಳಿಗೆ ಬಹುಮಾನ ಪಡೆದಿದ್ದರು. ಕೃತಿಗಳು: ಬದುಕೇ ಒಂದು ಸವಾಲು ...

READ MORE

Conversation

Related Books