ಬಸವೇಶ್ವರ ಮತ್ತು ಪುರಂದರದಾಸ

Author : ಬಸವರಾಜ ಸಬರದ

Pages 304

₹ 260.00




Year of Publication: 2019
Published by: ಶ್ರೀಸಿದ್ದಲಿಂಗೇಶ್ವ ಬುಕ್ ಡಿಪೋ ಮತ್ತು ಪ್ರಕಾಶನ
Address: ಮುಖ್ಯಬೀದಿ, ಕಲಬುರಗಿ- 585101

Synopsys

‘ಬಸವೇಶ್ವರ ಮತ್ತು ಪುರಂದರದಾಸ’ ಲೇಖಕ ಬಸವರಾಜ ಸಬರದ ಅವರ ಕೃತಿ. ಬಸವೇಶ್ವರ ಮತ್ತು ಪುರಂದರದಾಸರನ್ನು ಇಬ್ಬರು ವ್ಯಕ್ತಿಗಳೆಂದು ಪರಿಗಣಿಸದೆ, ಕನ್ನಡ ಸಾಹಿತ್ಯ-ಸಂಸ್ಕೃತಿಯ ಶಕ್ತಿ ಸಂಕೇತಗಳೆಂದು ಗುರುತಿಸುವುದು ಹೆಚ್ಚು ಸೂಕ್ತ. ಈ ಎರಡೂ ಸಾಹಿತ್ಯ ಕೇವಲ ವ್ಯಕ್ತಿ ಚಿಂತನದ ಅಭಿಪ್ರಾಯಗಳಾಗಿರದೆ ಸಾಮೂಹಿಕ ಚಿಂತನದ ಅಭಿವ್ಯಕ್ತಿಯಾಗಿವೆ,

ಸತ್ಯದ ದರ್ಶನ ಮಾಡಿಸುವ ಉದ್ದೇಶ ಹೊಂದಿವೆ. ವಚನ ಚಳವಳಿಯ ನೇತಾರರಾದ ಬಸವೇಶ್ವರರು, ದಾಸಶ್ರೇಷ್ಠರಾದ ಪುರಂದರದಾಸರು ಒಂದೇ ಪ್ರದೇಶದ ಬೇರೆ-ಬೇರೆ ಕಾಲಗಳ ಪ್ರತಿಭೆಗಳಾಗಿದ್ದಾರೆ. ಈ ಎರಡೂ ಸಾಹಿತ್ಯ ಸಂದರ್ಭಗಳು ಜನಸಾಮಾನ್ಯರ ಹತ್ತಿರಕ್ಕೆ ಬರಲು ಸರಳ ಮಾಧ್ಯಮಗಳ ಶೋಧ ನಡೆಯಿಸಿವೆ.

ಒಂದು ಸಾಹಿತ್ಯದ ಸತ್ವದಲ್ಲಿ ಮಿಗಿಲೆನಿಸಿದರೆ, ಮತ್ತೊಂದು ಸಂಗೀತದ ಮಾಧುರ್ಯದಿಂದ ಮಿಗಿಲಾಗಿದೆ. ಈ ಎರಡೂ ಸಾಹಿತ್ಯ ನಿರ್ಮಾಣಗೊಂಡ ಪರಿಸರ, ಪರಿಸ್ಥಿತಿ, ಉದ್ದೇಶ, ಪರಿಣಾಮಗಳನ್ನು ಕುರಿತು ಒಂದು ಸಮಗ್ರ ಅಧ್ಯಯನ ನಡೆಯಿಸುವ ಉದ್ದೇಶದಿಂದ ಡಾ. ಬಸವರಾಜ ಸಬರದ, ಈ ವಿಷಯ ಆಯ್ಕೆ ಮಾಡಿಕೊಂಡಿದ್ದಾರೆ. ಮೊನಚಾದ ವಿಮರ್ಶನ ದೃಷ್ಟಿಯುಳ್ಳ ಡಾ. ಸಬರದ ಅವರು ಆಧುನಿಕ ಸಾಹಿತ್ಯದ ಹಿನ್ನೆಲೆಯಲ್ಲಿ ಈ ಎರಡೂ ಸಾಹಿತ್ಯದ ಒಳಪದರುಗಳನ್ನು ಶೋಧಿಸುವ ಪ್ರಯತ್ನವನ್ನಿಲ್ಲಿ ಮಾಡಿದ್ದಾರೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books