
ತನ್ನದೇ ನುಡಿಗಟ್ಟು ಪಡೆಯಬೇಕೆನ್ನುವ ಹಂಬಲ ಕವಿ ಗೋಪಾಲ ಕೃಷ್ಣ ಅಡಿಗರಿಗೆ ನನ್ನ ನುಡಿಯೊಳೇ ಬಣ್ಣಿಸುವ ಪದ್ದತಿಕೆ ಬರುವನಕ, ನನ್ನ ಬಾಳಿದು ನರಕ. ಇಷ್ಟು ತೀವ್ರವಾದ ಹಂಬಲವು ತಾಂತ್ರಿಕ ಎಚ್ಚರವಾಗಿ ಬೆಳೆಯಲೇ ಬೇಕು. ಅಂದರೆ, ತಾನು ಬರೆಯುತ್ತಿರುವ ಕಾವ್ಯ ಮಾರ್ಗವು ಅದರಲ್ಲಿ ಬರೆಯುತ್ತಿರುವಾಗಲೇ ಒಳಗಿಂದ ಅಸಂತೃಪ್ತಿಯನ್ನು ಉಂಟು ಮಾಡುತ್ತಲೇ ಇರುತ್ತದೆ. ಈ ಅಸಂತೃಪ್ತಿಯೇ ಹೊಸಹಾದಿಯನ್ನು ಹುಡುಕುವ ಪ್ರಯತ್ನವಾಗಿ ಬೆಳೆಯುತ್ತದೆ. ಇಂತಹ ಕಾವ್ಯದ ಹುಡುಕಾಟದ ಮಾರ್ಗದಲ್ಲಿ ನಡೆದವರು ಚಿಂತಕರಾದ ಲಕ್ಷ್ಮೀಶ ತೋಳ್ಫಾಡಿಯವರು.
ಗೋಪಾಲಕೃಷ್ಣ ಅಡಿಗರ ಪ್ರಸಿದ್ದವಾದ 'ಮೋಹನ ಮುರಳಿ” ಕವಿತೆಯಲ್ಲಿನ ಹೊಳಹನ್ನು ಕುರಿತು, ಕೊಳಲಿನ ಮೋಹಕವಾದ ಕರೆ ಮಾತ್ರ ಯಾರಿಗೂ ಕೇಳಿಸಿಲ್ಲ. ಕೇಳಿಸಿತೇನು? 'ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು?' - ಎನ್ನುವ ಪ್ರಶ್ನೆಯಲ್ಲಿರುವ ಜಿಜ್ಞಾಸೆಯನ್ನು ಹಾಗೂ ಅಡಿಗರ ಅನೇಕ ಕವಿತೆಗಳಲ್ಲಿನ ಕಾವ್ಯಮಾರ್ಗವನ್ನು ಲೇಖಕರು ತಮ್ಮ ಅಭಿಮತ,ಹಾಗೂ ಅಡಿಗರ ಹಲವು ಕಾವ್ಯಗಳ ಕುರಿತು ತಮ್ಮ ಕಾವ್ಯಲಹರಿಯ ಸ್ವಗತವನ್ನು ಇಲ್ಲಿ ವ್ಯಕ್ತಪಡಿಸಿದ್ಧಾರೆ.
©2025 Book Brahma Private Limited.