ಹಳ್ಳಿಯ ಆತ್ಮಕಥೆ

Author : ನರೇಂದ್ರ ರೈ ದೇರ್ಲ

Pages 152

₹ 175.00




Year of Publication: 2020
Published by: ಕನಸು ಪ್ರಕಾಶನ
Address: ಮಡವು ಪೋಸ್ಟ್, ಪುತ್ತೂರು ತಾಲೂಕು, ದಕ್ಷಿಣ ಕನ್ನಡ
Phone: 9164561789

Synopsys

‘ಹಳ್ಳಿಯ ಆತ್ಮಕಥೆ’ ಲೇಖಕ ನರೇಂದ್ರ ರೈ ದೇರ್ಲ ಅವರ ಲೇಖನಗಳ ಸಂಕಲನ. ಕೋವಿಡ್ ಸಂಕಷ್ಟ ಸಂದರ್ಭಕ್ಕೆ ಸೃಜನಾತ್ಮಕವಾಗಿ ಸಡ್ಡು ಹೊಡೆಯುವಂತೆ, ಹದಿನೆಂಟು ಪ್ರಬಂಧಗಳ ಸಂಚಯ ಹಳ್ಳಿಯ ಆತ್ಮಕಥೆ. ವೃತ್ತಿಯಿಂದ ಪ್ರಾಧ್ಯಾಪಕರೂ ಪ್ರವೃತ್ತಿಯಿಂದ ಸಾಹಿತಿ- ಪತ್ರಕರ್ತ- ಸಂಪಾದಕ- ಅನುವಾದಕ- ಕವಿ ಹೀಗೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ನರೇಂದ್ರ ರೈ ದೇರ್ಲ ಅವರ ಈ ಕೃತಿ ವಿಶೇಷವಾಗಿದೆ.

ಜನಪರ ಅಂಕಣಕಾರರಾಗಿ ರಾಜ್ಯಾದ್ಯಂತ ಮನ್ನಣೆ ಪಡೆದಿರುವ ನರೇಂದ್ರ ರೈ ದೇರ್ಲ ಅವರು ಕೊರೋನದಂತ ಸಂಕಷ್ಟದ ಕಾಲದಲ್ಲಿ ಹಲವು ವಿಭಿನ್ನ ಲೇಖನಗಳನ್ನು ರಚಿಸಿದ್ದಾರೆ. ಹಳ್ಳಿಯ ಆತ್ಮಕಥೆ ಎಂಬ ಶೀರ್ಷಿಕೆ ತುಂಬಾ ಔಚಿತ್ಯಪೂರ್ಣವಾಗಿದೆ. ವೃಷ್ಟಿ ಮತ್ತು ಸಮಷ್ಟಿ ಎಂಬ ಎರಡೂ ನೆಲೆಗಳಲ್ಲಿ ಪರಿಭಾವಿಸಬೇಕಾದ ಗ್ರಂಥವಿದು. ಹಳ್ಳಿ ಮತ್ತು ದೇರ್ಲರು ಅಭಿನ್ನ ಎಂಬ ನಿಜ ಅರಿವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

About the Author

ನರೇಂದ್ರ ರೈ ದೇರ್ಲ
(14 October 1965)

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರು ಪತ್ರಕರ್ತರೂ ಹೌದು. ಹಾಗೆಯೇ  ಕವಿಗಳೂ ಕೂಡ. 'ತೊದಲು' ಕವನ ಸಂಕಲನದ ನಂತರ ಗದ್ಯ ಬರವಣಿಗೆ ಮುಂದುವರಿಸಿದರು.  ಆದರೆ, ಪದ್ಯದ ಗುಣ ಅವರ ಗದ್ಯಕ್ಕಿದೆ. ಅವರಿಗೆ ಸಾವಯವ ಕೃಷಿಯಲ್ಲಿ ವಿಶೇಷ ಆಸಕ್ತಿ . ಹಾಗಯೇ ಪರಿಸರದ ಬಗ್ಗೆ ಗಾಢ ಅನುರಕ್ತಿ.  ತೇಜಸ್ವಿಯೊಳಗಿನ ಕಲಾವಿದ'ನನ್ನು ಕಂಡರಿಸಿದ ನರೇಮದ್ರ ಅವರು  'ನಮ್ಮೆಲ್ಲರ ತೇಜಸ್ವಿ'ಯ ಅನಾವರಣಗೊಳಿಸಿದ್ದಾರೆ. ’ವಿಶುಕುಮಾರ್ ಬದುಕು ಬರೆಹ'; 'ಹೊನ್ನಯ ಶೆಟ್ಟಿ ಬದುಕು ಬರೆಹ'; 'ಡಾ. ಮೋಹನ ...

READ MORE

Conversation

Related Books