ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು

Author : ಜ.ಹೊ.ನಾರಾಯಣಸ್ವಾಮಿ (ಜ.ಹೊ.ನಾ)

Pages 168

₹ 108.00




Year of Publication: 2015
Published by: ಮಾನವ ಪ್ರಕಾಶನ
Address: ಹಾಸನ

Synopsys

ಚಿಂತಕ ಜ.ಹೋ. ನಾರಾಯಣಸ್ವಾಮಿ ಅವರ ಕೃತಿ -ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು. ವಿವೇಕಾನಂದರು ಧರ್ಮ-ಜಾತಿಗಳನ್ನು ಮೀರಿ ಮಾನವ ಕುಲದ ಐಕ್ಯತೆ ಹಾಗೂ ಕಲ್ಯಾಣದತ್ತ ಒಲವು ಇಟ್ಟುಕೊಂಡು ಬೋಧಿಸಿದ್ದರೂ, ಅವರ ಪ್ರತಿ ವಿಚಾರಗಳು ಒಂದು ಧರ್ಮಕ್ಕೆ ಸೀಮಿತಗೊಳಿಸಿ ಪ್ರಚಾರ ಮಾಡುವ ಹುನ್ನಾರಕ್ಕೆ ತೆರೆ ಎಳೆದ ಕೃತಿ ಇದು. ಮಾನವೀಯತೆಯೇ ನೈಜ ಧರ್ಮ ಎಂದು ಸಾರಿದ ವಿವೇಕರು, ಧರ್ಮವನ್ನು ಒಂದು ವರ್ಗದ ಜನ ತಮ್ಮ ಸ್ವಾರ್ಥ ಸಾಧನೆಗಾಗಿ ಉಪಯೋಗಿಸುತ್ತಿದ್ದಾರೆ ಎಂಬುದು ವಿವೇಕಾನಂದರ ಸಾಮಾಜಿಕ ಎಚ್ಚರವೂ ಆಗಿತ್ತು. ವಿವೇಕಾನಂದರ ಇಂತಹ ವಿಚಾರಗಳನ್ನು ಲೇಖಕರು ಸಂಗ್ರಹಿದ್ದು ಈ ಕೃತಿಯ ಹೆಚ್ಚುಗಾರಿಕೆ.

About the Author

ಜ.ಹೊ.ನಾರಾಯಣಸ್ವಾಮಿ (ಜ.ಹೊ.ನಾ)
(13 June 1941 - 09 November 2018)

ಜ.ಹೊ.ನಾ ಎಂದೇ ಖ್ಯಾತರಾದ ಜ.ಹೊ.ನಾರಾಯಣಸ್ವಾಮಿ ಅವರು 13-06-1941ರಂದು ಹಾಸನ ತಾಲೂಕಿನ ಜನಿವಾರ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಹೊನ್ನಯ್ಯ, ತಾಯಿ ತಿಮ್ಮಮ್ಮ. ಮಹಾಕವಿ ಕುವೆಂಪುರವರ ಬೆರಳೆಣಿಕೆಯ ಆಪ್ತ ಶಿಷ್ಯ ವೃಂದದಲ್ಲಿ ಜ.ಹೊ.ನಾ ಪ್ರಮುಖರು. ಸಾಹಿತ್ಯ ವಲಯದಲ್ಲಿ ಆಲೋಚನೆಯ ದಾರಿದ್ರ್ಯ ಹಿಡಿದು ಸಂಪ್ರದಾಯ ನೇಣುಗಂಬಕ್ಕೆ ತುತ್ತಾದ ಸಂದರ್ಭದಲ್ಲಿ ಜ.ಹೊ.ನಾ ಅದಾರಾಚೆಯ ವೈಚಾರಿಕ ಲೋಕ ದರ್ಶನ ಮಾಡಿಸಿದವರು. ಮಾನವ ಕುಲಂ ತಾನೋಂದೇ ವಲಂ ಎನ್ನುವಂತೆ ವೇದ, ಕುರಾನ್ ಆಚೆಗೆ ನಮ್ಮನ್ನೆಲ್ಲಾ ಕೊಂಡೋಯ್ದು ಮಠ, ಮಂದಿರ, ಚರ್ಚ್, ಮಸೀದಿಗಳ ತೊರೆದು ಹೊರಬಂದು ಮಾನವೀಯ ಮೌಲ್ಯಗಳ ಆವಿರ್ಭವಿಸಿಕೊಳ್ಳುವಂತೆ ಕರೆನೀಡಿದ ಮಾನವತಾವಾದಿ ಜ.ಹೊ.ನಾ. ಪ್ರಾಥಮಿಕ ಶಿಕ್ಷಣದಿಂದ ...

READ MORE

Related Books