ಯುದ್ಧ ಯೋಧ

Author : ಎಸ್.ಸಿ. (ಶ್ರೀಕೃಷ್ಣ) ಸರದೇಶಪಾಂಡೆ

Pages 180

₹ 150.00




Published by: ಶರ್ವಿಲ್ ಪಬ್ಲಿಷರ್ಸ್
Address: ಧಾರವಾಡ

Synopsys

ಸೈನ್ಯ, ಸೈನಿಕ, ಬಾಂಬ್, ಮಿಷನ್ ಗನ್, ರಾಕೆಟ್ ಮೊದಲಾದ ಹೆಸರುಗಳು  ಹೆಚ್ಚು ಚಾಲ್ತಿಯಲ್ಲಿವೆಯಾದರೂ, ಹೆಚ್ಚಿನವರಿಗೆ ಅವುಗಳ ಬಗ್ಗೆ ಅರಿವಿನ ಕೊರತೆ ಇದೆ.  ಅದರ ಬಗ್ಗೆ ಮಾಹಿತಿಯನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಲೇಖಕರು ಬಾಂಗ್ಲಾ ಯುದ್ಧದಲ್ಲಿ ವಿಶಿಷ್ಟ ಸೇವಾ ಪದಕವನ್ನು , ಶ್ರೀಲಂಕಾ  ಶಾಂತಿಪಾಲನ ಯುದ್ದದಲ್ಲಿ ಯುದ್ದ ಸೇವಾ ಪದಕ ಮೊದಲಾದ ಪ್ರಶಸ್ತಿಗಳನ್ನು ಪಡೆದವರು. ಯದ್ದ ಎಂದರೇನು, ಅದರ ರಚನೆ, ಸಾಧನೆ, ಅದಕ್ಕೆ ಮಾಡಬೇಕಾದ ಸಿದ್ದತೆ, ಅದರ ನಿವಾರಣೆಯ ಪ್ರಯತ್ನ ಹೀಗೆ ಹಲವು ಪ್ರಮುಖ ಸಂಗತಿಗಳ ಕುರಿತು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. ಸೇನೆಯ ಕುರಿತು ಸಾಮಾನ್ಯ ಜನರಿಗೆ ಇರುವ ಮಾಹಿತಿಯ ಕೊರತೆ, ಸೇನೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ಈ ಕೃತಿಯನ್ನು ರಚಿಸಿದ್ದಾರೆ.

 

About the Author

ಎಸ್.ಸಿ. (ಶ್ರೀಕೃಷ್ಣ) ಸರದೇಶಪಾಂಡೆ

ವೃತ್ತ ಲೆಫ್ಟಿನೆಂಟ್ ಜನರಲ್ ಎಸ್.ಸಿ. (ಶ್ರೀಕೃಷ್ಣ)  ಸರದೇಶಪಾಂಡೆ ಅವರು ಮೂಲತಃ ಧಾರವಾಡದವರು. ಭಾರತೀಯ ಸೇನೆಯ ಕುಮಾಂವು ರೆಜಿಮೆಂಟ್ ನಲ್ಲಿ 35 ವರ್ಷ ಸೇವೆ ಸಲ್ಲಿಸಿದರು. 1990ರಲ್ಲಿ ನಿವೃತ್ತರಾದರು. ಕಥೆ-ಕಾದಂಬರಿ ರಚಿಸುತ್ತಿದ್ದು, ಪರಿಸರ ಕುರಿತ ಲೇಖನಗಳನ್ನು ಬರೆಯುತ್ತಿದ್ದಾರೆ. ಸಮರ ಕುರಿತ ಬರಹಗಳೂ ಇವೆ. ಈಗಾಗಲೇ ಒಟ್ಟು 20 ಕೃತಿಗಳನ್ನು ರಚಿಸಿದ್ದಾರೆ. ಮಿಲಿಟರಿ ಸಂಬಂಧಿತ ಬರಹಗಳನ್ನು ಕನ್ನಡದಲ್ಲಿ ತರುವ ಪ್ರಯತ್ನ ಇವರದು.  ಕೃತಿಗಳು: ಭಾರತೀಯ ಯುದ್ಧ ಪರಂಪರೆ ಮತ್ತು ಸೈನಿಕನೇಕೆ ಹೋರಾಡು ತ್ತಾನೆ.  ‘ಸಿಯಾಚಿನ್ ಗೆ ದೂರ ದಾರಿ ಅದೇಕೆ? (ಅನುವಾದಿತ ಕೃತಿಗಳು), ಯುದ್ಧ ಯೋಧ (ಯುದ್ಧ ಹಾಗೂ ಯೋಧರ ಸ್ಥಿತಿಯ ಚಿತ್ರಣ)  ...

READ MORE

Related Books