ಅನ್ವಯ

Author : ಅರವಿಂದ ಚೊಕ್ಕಾಡಿ

Pages 168

₹ 92.00




Year of Publication: 2004
Published by: ಮೌಲ್ಯ ಪ್ರಕಾಶನ
Address: ಕಾರ್ಕಳ ತಾಲೂಕು, ಜಿಲ್ಲೆ ಉಡುಪಿ, ನಲ್ಲೂರು- 574502
Phone: 9880128871

Synopsys

‘ಅನ್ವಯ’ ಅರವಿಂದ ಚೊಕ್ಕಾಡಿ ಅವರ ವೈಚಾರಿಕ ಲೇಖನಗಳಾಗಿವೆ. ಪ್ರಸ್ತುತ ಮಾನವನ ಏಳೆಯ ವಿಚಾರಗಳನ್ನೇ ಪ್ರಧಾನವಾಗಿ ಪರಿಗಣಿಸಿ ಸರಿಯಾದ ವಾದಸರಣಿಯಿಂದಲೂ ಅಸಂಖ್ಯಾತ ಉದಾಹರಣೆಗಳೊಂದಿಗೂ ಚರ್ಚೆಗೆ ಇಳಿಯುವ ಅರವಿಂದ ಚೊಕ್ಕಾಡಿ ಇಂದಿನ ಪ್ರತಿಭಾವಂತ ಪ್ರಜ್ಞಾವಂತ ಲೇಖಕರು. ವಿವರವಾಗಿ ತಿಳಿಹೇಳುವ, ಅರೆದು ಕುಡಿಸುವಂತಹ ತಮ್ಮ ಅಧ್ಯಾಪಕರ ಭಾಷಾ ಶೈಲಿಯಿಂದ ನಾಡಿನ ಎಲ್ಲ ಪತ್ರಿಕೆಗಳಲ್ಲೂ ಹೆಸರು ಮೂಡಿಸಿದ ಅವರು ಇಂದಿನ ಹಲವು ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ವಿಶ್ಲೇಷಿಸಿದ ಕೆಲವು ಲೇಖನಗಳು ಇಲ್ಲಿವೆ.

About the Author

ಅರವಿಂದ ಚೊಕ್ಕಾಡಿ
(21 December 1975)

 ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ  ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ  ಬಿ. ಇಡ್. ಪದವೀಧರರಾಗಿರುವ ಇವರು  ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...

READ MORE

Reviews

ಹೊಸತು - ಮಾರ್ಚ್ -2005

ಪ್ರಸ್ತುತ ಮಾನವನ ಏಳೆಯ ವಿಚಾರಗಳನ್ನೇ ಪ್ರಧಾನವಾಗಿ ಪರಿಗಣಿಸಿ ಸರಿಯಾದ ವಾದಸರಣಿಯಿಂದಲೂ ಅಸಂಖ್ಯಾತ ಉದಾಹರಣೆಗಳೊಂದಿಗೂ ಚರ್ಚೆಗೆ ಇಳಿಯುವ ಅರವಿಂದ ಚೊಕ್ಕಾಡಿ ಇಂದಿನ ಪ್ರತಿಭಾವಂತ ಪ್ರಜ್ಞಾವಂತ ಲೇಖಕರು. ವಿವರವಾಗಿ ತಿಳಿಹೇಳುವ, ಅರೆದು ಕುಡಿಸುವಂತಹ ತಮ್ಮ ಅಧ್ಯಾಪಕರ ಭಾಷಾಶೈಲಿಯಿಂದ ನಾಡಿನ ಎಲ್ಲ ಪತ್ರಿಕೆಗಳಲ್ಲೂ ಹೆಸರು ಮೂಡಿಸಿದ ಅವರು ಇಂದಿನ ಹಲವು ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ವಿಶ್ಲೇಷಿಸಿದ ಕೆಲವು ಲೇಖನಗಳು ಇಲ್ಲಿವೆ. ಆರ್ಥಿಕ ರಂಗದ ವಿಫಲತೆ ಮತ್ತು ಪ್ರಭುತ್ವದ ಅಸಹಾಯಕತೆ ಇವೆರಡು ನಮ್ಮಲ್ಲಿ, ಎದ್ದುಕಾಣುವ ಅಂಶ. ಜನಸಾಮಾನ್ಯರ ಯಾವುದೇ ತೊಂದರೆಗಳಿಗೂ ಸ್ಪಂದಿಸಲಾಗದಂಥ ಅವ್ಯವಸ್ಥೆಯಿಂದಾಗಿ ಎಲ್ಲ ರಂಗಗಳಲ್ಲಿ ತಲೆದೋರಿದ ವೈಫಲ್ಯವನ್ನು ಗುರುತಿಸುತ್ತ ಜಾಗತೀಕರಣದ ಸಮ್ಮೋಹಿನಿಗೆ ಬಲಿಯಾಗುವ ಅಪಾಯಗಳು ನಮ್ಮ ಗಮನ ಸೆಳೆದಿದ್ದಾರೆ. ಈ ಲೇಖನಗಳು ಇಂದಿನ ಬಿಕ್ಕಟ್ಟಿಗೆ ಎಚ್ಚರಿಕೆಯ ದನಿಯಾಗಬಲ್ಲವು.

Related Books