ಪ್ರಕೃತಿ-ಸಂಸ್ಕೃತಿ- ಸಂಲಗ್ನ

Author : ಬಿದರಹಳ್ಳಿ ನರಸಿಂಹಮೂರ್ತಿ

Pages 272

₹ 220.00




Year of Publication: 2014
Published by: ಸಿವಿಜಿ ಇಂಡಿಯಾ
Address: ಕಸ್ತೂರಬಾ ಭವನ, ಗಾಂಧಿ ಭವನ ಕ್ಯಾಂಪಸ್, ಕುಮಾರಪಾರ್ಕ್ ಈಸ್ಟ್, ಬೆಂಗಳೂರು- 560001
Phone: 08022340799

Synopsys

ಸಂವೇದನಾಶೀಲ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರ ವಿಶಿಷ್ಟ ಬರಹಗಳ ಸಂಕಲನ ‘ಪ್ರಕೃತಿ-ಸಂಸ್ಕೃತಿ-ಸಂಲಗ್ನ’. ಆಕಾಶವಾಣಿಯಲ್ಲಿ ಪ್ರಸಾರವಾದ ಚಿಂತನಾರಶ್ಮಿಗಳಿಂದ ಹಿಡಿದು ಪ್ರಬಂಧಗಳು, ಲೇಖನಗಳು, ಅಂಕಣಬರಹಗಳು, ಪತ್ರಿಕಾವರದಿಗಳು ಹೀಗೆ ಒಂದು ಬಗೆಯಲ್ಲಿ ನವಧಾನ್ಯಗಳು ಬೆರೆತ ಪುಷ್ಟಿಶಾಲಿ ಆಹಾರದಂತಿದೆ. ತಮ್ಮನ್ನು ಕಾಡಿದ ವಿಷಯಗಳಿಗೆ ನೀಡಿದ ಅಭಿವ್ಯಕ್ತಿಗಳು ನಮ್ಮನ್ನು ಗಂಭೀರ ಚಿಂತನೆಗೆ ಹಚ್ಚುವಂತಿವೆ. ಏಳು ಹಂತಗಳಲ್ಲಿ ತಮ್ಮ ವೈಚಾರಿಕ ನೆಲೆಗಳನ್ನು ಬಿಡಿಸಿಟ್ಟಿದ್ದಾರೆ. ತಮ್ಮ ಸುತ್ತಮುತ್ತಲಿನ ಪ್ರಕೃತಿ ಅದು ನಿಸರ್ಗವೇ ಆಗಬೇಕಿಲ್ಲ. ಅದು ಕನ್ನಡದ ವಿಷಯವಾಗಿರಬಹುದು. ಇಂದು ನಾವು ಕಲಿಯುತ್ತಿರುವ ಶಿಕ್ಷಣ ಇರಬಹುದು. ದಲಿತ ಚಿಂತನೆ ಇರಬಹುದು, ಸಾರ್ವಕಾಲಿಕ-ಸಮಕಾಲೀನ ವಿಷಯಗಳಿರಬಹುದು. ತಮ್ಮ ಮೇಲೆ ಪ್ರಭಾವ ಬೀರಿದ ಮೇರು ವ್ಯಕ್ತಿತ್ವಗಳಿರಬಹುದು ಇವೆಲ್ಲಾ ಸೇರಿದ ನಿಸರ್ಗವು ನಾಗರಿಕತೆಯ ಧಾಳಿಯಿಂದ ಕಲುಷಿತಗೊಳ್ಳುತ್ತಿರುವ ಬಗ್ಗೆ ಆತಂಕಪಡುವ ಆರೋಗ್ಯಕರರ ಮನಸ್ಸೊಂದರ ಅನೇಕ ಒಳನೋಟಗಳುಳ್ಳ ಆಳವಾದ ಚಿಂತನೆಗಳು ನಮ್ಮನ್ನು ಕಲಕುತ್ತವೆ. ಇವೆಲ್ಲ ಅರ್ಥಪೂರ್ಣ ಸಂಸ್ಕೃತಿಯೊಂದಿಗೆ ಸಂಲಗ್ನಗೊಳ್ಳಬೇಕಿದೆ ಎಂಬ ಆಶಯ, ಕಳಕಳಿ ಈ ಕೃತಿಯಲ್ಲಿದೆ.

About the Author

ಬಿದರಹಳ್ಳಿ ನರಸಿಂಹಮೂರ್ತಿ
(05 February 1950)

ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು:  ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001),  ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...

READ MORE

Related Books