ಬಸವಣ್ಣ ಏಕೆ ಬೇಕು?

Author : ರಂಜಾನ್ ದರ್ಗಾ

Pages 88

₹ 60.00




Year of Publication: 2017
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಬಂಡಾಯ ಸಾಹಿತ್ಯ ಚಳವಳಿಯಿಂದ ಹುಟ್ಟಿಬಂದವರು ಕವಿ, ಪತ್ರಕರ್ತ ರಂಜಾನ್‌ ದರ್ಗಾ. ಅವರ ಆಸಕ್ತಿಯ ಮತ್ತೊಂದು ಕ್ಷೇತ್ರ ಬಸವ ವಿಚಾರಧಾರೆ ಮತ್ತು ವಚನ ಚಳವಳಿ. ಅವರ ಚಿಂತನೆಗಳ ಮುಂದುವರಿದ ಭಾಗದಂತೆ 'ಬಸವಣ್ಣ ಏಕೆ ಬೇಕು?'  ಕೃತಿ ಹೊರಬಂದಿದೆ. ಶರಣ ಸಾಹಿತ್ಯ, ಸಮತಾವಾದ ಮತ್ತು ಸೂಫಿ ವಿಚಾರಗಳ ನೆಲೆಯಲ್ಲಿ ಬಸವಣ್ಣನ ಪ್ರಸ್ತುತತೆಯನ್ನು ಅರ್ಥ ಮಾಡಿಕೊಳ್ಳುವ ಯತ್ನ ನಡೆದಿದೆ. 

ಕೃತಿ ಮೂರು ಅಧ್ಯಾಯಗಳನ್ನು ಒಳಗೊಂಡಿದೆ. ಮೊದಲನೆಯದು ಬಸವಣ್ಣ ಯಾಕೆ ಬೇಕು ಎನ್ನುವುದನ್ನು ಚರ್ಚಿಸಿದರೆ, ಎರಡನೆಯದು, ಬಸವ ಶಾಸನದ ಕುರಿತಂತೆ ವಿವರಿಸುತ್ತದೆ. ಮೂರನೆಯ ಅಧ್ಯಾಯದ ಹೆಸರು ಪ್ರತಿಜ್ಞೆ. ಈ ಅಧ್ಯಾಯದಲ್ಲಿ ಶರಣರು ಸ್ವೀಕರಿಸುವ ಪ್ರತಿಜ್ಞೆಗಳನ್ನು ಹೇಳಲಾಗಿದೆ. ಲಿಂಗಾಯತ ಧರ್ಮವನ್ನು ಗೊಂದಲಗಳಿಲ್ಲದೆ ಅರ್ಥ ಮಾಡುಕೊಳ್ಳಲು ಯತ್ನಿಸುವವರಿಗೆ ಉಪಯುಕ್ತವಾಗುವ ಅನೇಕ ಅಂಶಗಳು ಇಲ್ಲಿವೆ. 

ಕೃತಿಯಲ್ಲಿ ’ಸುಲಿಗೆಕೋರರು ನಂಬಿಸುವ ಪ್ರಜಾಪ್ರಭುತ್ವದ ಜಾಗದಲ್ಲಿ ಜನರ ಪ್ರಜಾಪ್ರಭುತ್ವ ತರಬೇಕಿದೆ. ಅದಕ್ಕಾಗಿ ಮೊದಲಿಗೆ ಬಸವಣ್ಣನವರು ಆರಂಭಿಸಿದ ಜಾತಿ ವಿನಾಶ ಹೋರಾಟವನ್ನು ಮುಂದುವರಿಸಬೇಕಾಗಿದೆ’ ಎಂದು ದರ್ಗಾ ಅವರು ಅಭಿಪ್ರಾಯಪಡುತ್ತಾರೆ.

About the Author

ರಂಜಾನ್ ದರ್ಗಾ

ಲೇಖಕ ರಂಜಾನ್ ದರ್ಗಾ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಪ್ರಗತೀಪರ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ, ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ರಂಜಾನ್ ದರ್ಗಾ ಅವರಿಗೆ ಸಂದಿವೆ. ...

READ MORE

Related Books