ಸಂಘರ್ಷದಿಂದ ಸಾಮರಸ್ಯದೆಡೆಗೆ

Author : ಟಿ.ಆರ್. ಭಟ್

Pages 408

₹ 275.00




Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, , ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 2216911

Synopsys

ಕಾರ್ಮಿಕರೆಂದರೆ, ಬಯಲಲ್ಲಿ ಬೆವರು ಸುರಿಸಿ ದುಡಿಯುವ ಶ್ರಮ ಜೀವಿಗಳಷ್ಟೇ ಅಲ್ಲ. ಆಧುನಿಕ ದಿನಗಳಲ್ಲಿ ಬೇರೆ ಬೇರೆ ರೀತಿಯಲ್ಲಿ  ಶ್ರಮ ವಿಂಗಡನೆಗೊಂಡಿವೆ. ಶೋಷಣೆಯೆನ್ನುವುದು ಅನಕ್ಷರಸ್ಥರಿಗಷ್ಟೇ ಮಾತ್ರ ಸೀಮಿತವಾದ ಪದವಲ್ಲ. ಅಕ್ಷರಸ್ಥರೂ ಕೂಡ ದಿನನಿತ್ಯ ಶೋಷಣೆಗೀಡಾಗುತ್ತಾರೆ, ಬ್ಯಾಂಕು ಕಚೇರಿಗಳಲ್ಲೂ ಇದನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಟಿ. ಆರ್. ಭಟ್ ಅವರು ಬ್ಯಾಂಕ್ ಅಧಿಕಾರಿಗಳ ಸಂಘಟನೆಯನ್ನು ರೂಪಿಸಿ, ಅದನ್ನು ಚಳುವಳಿಯಾಗಿ ವಿಸ್ತರಿಸಿದ ಅನುಭವವನ್ನು ಈ ಕೃತಿಯಲ್ಲಿ ಹಂಚಿಕೊಂಡಿದ್ದಾರೆ. ಸಾಮೂಹಿಕ ಚಳುವಳಿಯನ್ನು ಮುನ್ನಡೆಸುವಲ್ಲಿ ಬಂದ ಸವಾಲುಗಳು, ಸಂಸ್ಥೆ ಮತ್ತು ಉದ್ಯೋಗಿಗಳ ಸಂಬಂಧ, ಕಾರ್ಮಿಕ ಚಳುವಳಿಯ ಮುಂದೆ ಆಗಾಗ ಏಳುವ ಪ್ರಶ್ನೆಗಳು, ಅವುಗಳ ಸಾಮಾಜಿಕ ಜವಾಬ್ದಾರಿ, ರಾಜಕೀಯ ಧೋರಣೆ ಮುಂದಾದ ವಿಭಿನ್ನ ಆದರೆ ಮುಖ್ಯವಸ್ತುವಿಗೆ ಪೂರಕವಾದ ವಿಷಯಗಳು ಇಲ್ಲಿ ಬಂದಿವೆ. ಬ್ಯಾಂಕುಗಳನ್ನು ಸುತ್ತುವರಿದಿರುವ ರಾಜಕೀಯಗಳು, ಅದರೊಳಗಿನ ಕಾರ್ಮಿಕ ಬಿಕ್ಕಟ್ಟು, ಕಾರ್ಮಿಕ ಸಂಘಟನೆ ಮತ್ತು ಅದರ ಹೊರಗಿನ ಚಟುವಟಿಕೆಗಳು, ಬ್ಯಾಂಕುಗಳಲ್ಲಿ ಮಾನವ ಸಂಪನ್ಮೂಲ ನೀತಿ, ಬ್ಯಾಂಕುಗಳಲ್ಲಿ ಕಾರ್ಮಿಕ ಸಂಘಟನೆಗಳ ಪ್ರಸ್ತುತತೆ  ಮೊದಲಾದ ಪ್ರಮುಖ ವಿಷಯಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಲಾಗಿದೆ.

About the Author

ಟಿ.ಆರ್. ಭಟ್

ಕಾರ್ಪೋರೇಷನ್ ಬ್ಯಾಂಕ್‌ ಅಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷ ಹಾಗೂ ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟದ ಮಾಜಿ ಜಂಟಿ ಪ್ರಧಾನ ಕಾರ್ಯದರ್ಶಿ ಆಗಿದ್ದ ಟಿ.ಆರ್‌. ಭಟ್‌ ಅವರು ಹೋರಾಟದ ಹಿನ್ನೆಲೆಯಿಂದ ಬಂದವರು. ದೇಶದ ಆರ್ಥಿಕ ಬೆಳವಣಿಗೆ ಹಾಗೂ ನೋಟು ರದ್ಧತಿಗೆ ಸಂಬಂಧಿಸಿದಂತೆ ವಿವರವಾದ ಲೇಖನ ಬರೆದಿದ್ದಾರೆ. ...

READ MORE

Related Books