ಬೆಂಬಿಡದ ಭೂತಗಳು

Author : ಪಾ.ವೆಂ. ಆಚಾರ್ಯ

Pages 232

₹ 170.00




Year of Publication: 2017
Published by: ಲೋಕ ಶಿಕ್ಷಣ ಟ್ರಸ್ಟ್ ಗ್ರಂಥಮಾಲೆ‍

Synopsys

ಲೇಖಕ ಪಾ. ವೆಂ. ಆಚಾರ್ಯ ಅವರು ಬರೆದ ಕೃತಿ ʼಬೆಂಬಿಡದ ಭೂತಗಳುʼ. ಸ್ವತಂತ್ರ ಭಾರತದ ಸಂಕಟಗಳ ಸರಮಾಲೆಯಾಗಿದ್ದು, ದೇಶ ಎದುರಿಸುತ್ತಿರುವ ರಾಜಕೀಯ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಲೇಖಕಿ ಹಾಗೂ ಉಪನ್ಯಾಸಕಿ ಡಾ. ಸರ್ವಮಂಗಳಾ ಆಚಾರ್ಯ ಅವರು ಪುಸ್ತಕದ ಬಗ್ಗೆ “ಕನ್ನಡದ ಪತ್ರಿಕಾ ಭಾಷೆಗೆ ಪಾವೆಂ ಅವರು ಕೊಟ್ಟಿರುವ ಹೊಸತನ ಹಾಗೂ ಸಮರ್ಪಕತೆ ಅಭ್ಯಾಸನೀಯ ಅಂಶವಾಗಿದೆ. ಹೊಸಗನ್ನಡದ ಪ್ರತಿರೂಪ ಶಿಲ್ಪಿಗಳಲ್ಲಿ ಇವರು ನಮಗೆ ಪ್ರಮುಖರಾಗಿ ಕಾಣುತ್ತಾರೆ. ಇವರ ಬೆಂಬಿಡದ ಭೂತಗಳು ಕೃತಿಯಲ್ಲಿ ಪ್ರಸ್ತುತ ರಾಜಕೀಯವಷ್ಟೇ ಅಲ್ಲ, ಎಲ್ಲ ಕ್ಷೇತ್ರದ ವಿದ್ಯಮಾನಗಳಿಗೆ ದಿಕ್ಸೂಚಿಯಾಗಬಲ್ಲ ಪ್ರಖರ ವೈಚಾರಿಕ ಚಿಂತನೆಗಳುಳ್ಳ ಮೌಲಿಕ ಲೇಖನಗಳು ಮಹತ್ವಪೂರ್ಣ, ಅಭ್ಯಾಸಯೋಗ್ಯ ಹಾಗೂ ಅನುಸಂಧಾನೀಯವಾಗಿದೆ” ಎಂದು ಹೇಳಿದ್ಧಾರೆ.

About the Author

ಪಾ.ವೆಂ. ಆಚಾರ್ಯ
(06 February 1915 - 04 May 1992)

ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್‍ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು. 1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್'  ಸೇರಿದರು.  ...

READ MORE

Related Books