ದೇಸಿ ಕಥನ

Author : ಮೊಗಳ್ಳಿ ಗಣೇಶ್

Pages 128

₹ 125.00




Year of Publication: 2016
Published by: ಅರುಹು ಕುರುಹು
Address: ಮೌನ, 366, ನಾವಿಲು ಮುಖ್ಯ ರಸ್ತೆ, ಕುವೆಂಪುನಗರ, ಮೈಸೂರು- 23
Phone: 9008798406

Synopsys

ಲೇಖಕ ಡಾ. ಮೊಗಳ್ಳಿ ಗಣೇಶ್‌ ಅವರ ಲೇಖನ ಕೃತಿ ʼದೇಸಿ ಕಥನʼ. ಪುಸ್ತಕವು ದೇಸಿ ಚಿಂತನೆಗಳ ಕುರಿತು ಹೇಳುತ್ತದೆ. ಪುಸ್ತಕದ ಸಂಪಾದಕೀಯದಲ್ಲಿ ಲೇಖಕರು, “ಮಾರ್ಗ ಮತ್ತು ದೇಸೀಯ ಅನುಸಂಧಾನ ಬಹಳ ಹಳೆಯದು. ಅವತ್ತಿನಿಂದ ಇವತ್ತಿನ ತನಕ ಕವಿಗಳು ಈ ಸಂಬಂಧವನ್ನು ನಿರಂತರವಾಗಿ ಬೆಳೆಸಿದ್ದಾರೆ. ಇಪ್ಪತ್ತನೆಯ ಶತಮಾನದ ಕೊನೆಯ ಹಂತದಲ್ಲಿ ದೇಸಿ ಚಿಂತನೆಯು ಅಧ್ಯಯನಗಳಲ್ಲಿ ವಿಶೇಷವಾಗಿ ಕಾಣಿಸಿಕೊಂಡಿವೆ. ಸಾಹಿತ್ಯ ವಿಮರ್ಶೆಯಲ್ಲಂತೂ ಇದು ಒಂದು ಮುಖ್ಯ ಧಾರೆಯಾಗಿ ವಿವೇಚಿಸಲ್ಪಟ್ಟಿದೆ. ಸಂಸ್ಕ್ರತಿ ಚಿಂತನೆಯ ಭಾಗವಾಗಿ ದೇಸಿವಾದವು ಸಮುದಾಯಗಳ ಪ್ರಜ್ಞೆಯ ಅಭಿವ್ಯಕ್ತಿಯಾಗಿ ಟಿಸಿಲೊಡೆಯಿತು. ದೇಸಿಯನ್ನು ಉದಾರವಾಗಿ ಮಾರ್ಗತತ್ವಕ್ಕೆ ಬಳಸಿಕೊಂಡು ಮಾತನಾಡುವುದರಲ್ಲಿ ಆಳವಾದ ಮಾನವ ಸಂಬಂಧಗಳಿಲ್ಲ ಎಂಬ ಕೊರತೆ ಎದ್ದು ಕಾಣುತ್ತಿತ್ತು. ಈ ನೆಲೆಯಿಂದಲೇ ದೇಸಿ ಚಿಂತನೆಯಿಂದ ಜಾತಿ ಹಾಗೂ ಲಿಂಗ ಸಂಬಂಧಿ ಆಯಾಮಗಳಿಂದ ನಿರ್ವಚಿಸುವ ಬಾಗಿಲು ತೆರೆದುಕೊಂಡಿದ್ದು. ಅವೈದಿಕ ಜ್ಞಾನ ಪರಂಪರೆಗಳಲ್ಲಿರುವ ದೇಸಿ ಚಹರೆಗಳನ್ನು ಅವಲೋಕಿಸುವುದಕ್ಕೂ ಅವಕಾಶವಾಯಿತು. ಸೃಜನಶೀಲತೆಯ ದೇಸಿ ಕ್ರಮಗಳು ಹೇಗೆ ಜಾತಿ ಹಾಗೂ ಲಿಂಗ ಸಂಬಂಧಿ ಹೇಗೆ ಬೇರು ಬಿಟ್ಟಿವೆ ಎಂಬುದನ್ನು ಸಮರ್ಥಿಸುವ ಚಿಂತನೆಗಳಿಗೆ ಚಾಲನೆ ಸಿಕ್ಕಿತು" ಎಂದಿದ್ದಾರೆ.

About the Author

ಮೊಗಳ್ಳಿ ಗಣೇಶ್
(01 July 1962)

ಕತೆಗಾರ ಮೊಗಳ್ಳಿ ಗಣೇಶ್ ಅವರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ. ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದ ಮೊಗಳ್ಳಿ ಅವರು ತಮ್ಮ ಅನುಭವವನ್ನು ವಿಶಿಷ್ಟ, ವಿನ್ಯಾಸದಲ್ಲಿ ಸೊಗಸಾದ ಕಥೆಗಳನ್ನಾಗಿ ಕಟ್ಟಿಕೊಡಬಲ್ಲರು.  ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು.  ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ (ಕಥಾ ಸಂಕಲನಗಳು), ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ), ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಪಡೆದಿವೆ- ಒಂದು ಹಳೆಯ ಚಡ್ಡಿ (1989), ಬುಗುರಿ (1990), ಬತ್ತ (1991), ...

READ MORE

Related Books