ಕರತೇಜ ದರ್ಪಣ

Author : ನಿಷ್ಠಿ ರುದ್ರಪ್ಪ

Pages 118

₹ 50.00




Year of Publication: 2013
Published by: ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತ ಮಠ
Address: ಸಂಡೂರು, ಜಿಲ್ಲೆ: ಬಳ್ಳಾರಿ

Synopsys

‘ಕರತೇಜ ದರ್ಪಣ’ ಕೃತಿಯನ್ನು ಲೇಖಕ ನಿಷ್ಠಿ ರುದ್ರಪ್ಪನವರು ರಚಿಸಿದ್ದಾರೆ. ಈ ಕೃತಿಯು 2013 ರಲ್ಲಿ ಮೊದಲ ಮುದ್ರಣ ಕಂಡಿತು. 2020ರಲ್ಲಿ ಎರಡನೇ ಆವೃತ್ತಿ ಕಂಡಿದೆ. ದೇವರು ಧರ್ಮಗಳ ಪರಿಕಲ್ಪನೆಯು ನಮ್ಮಲ್ಲಿ ಅನೇಕ ಬಗೆಯಾಗಿವೆ. ಆರಾಧನೆಯ ವಸ್ತು ಮತ್ತು ಆರಾಧನಾ ವಿಧಿವಿಧಾನಗಳು ಭಿನ್ನತೆಯನ್ನು ಪಡೆದುಕೊಂಡಿವೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಇಷ್ಟಲಿಂಗವನ್ನು ಸಮಾನತೆಯ ಕುರುಹಾಗಿ ಸ್ವೀಕರಿಸಿದರು. ಅವರ ಕಲ್ಪನೆಯಲ್ಲಿ ಇಷ್ಟಲಿಂಗ ಜಾತಿಯ ಕುರುಹಲ್ಲ. ಅದು ಜ್ಯೋತಿಯ ಕುರುಹು ಆಗಿತ್ತು. ಮುಂದೆ ಅದೇ ಒಂದು ಜಾತಿಯಾಗಿದ್ದು ಮಾತ್ರ ಹತ್ತು ಹಲವು ಸಮಸ್ಯೆಗಳನ್ನು ಜಟಿಲವಾಗಿಸಿದೆ. ಆದರೆ ಶರಣರ ಕಲ್ಪನೆಯಲ್ಲಿ ಇಷ್ಟಲಿಂಗವು ಅಂಗೈಯಲ್ಲಿ ಆತ್ಮಸ್ವರೂಪವನ್ನು ನೋಡಿಕೊಳ್ಳುವ ಒಂದು ದಿವ್ಯ ಸಾಧನ ಮಾತ್ರ. ಇಂತಹ ಮಹೋನ್ನತ ಪರಿಕಲ್ಪನೆಯನ್ನು ಹೊಂದಿದ್ದ ಶರಣರ ಇಷ್ಟಲಿಂಗ ಪರಿಕಲ್ಪನೆಯನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ವಚನ ಸಾಹಿತ್ಯಾಧಾರಿತವಾಗಿ ಈ ಕೃತಿಯಲ್ಲಿ ಇಷ್ಟಲಿಂಗವನ್ನು ಕರತೆಜ ದರ್ಪಣವೆಂದು ಕರೆಯಲಾಗಿದೆ.

About the Author

ನಿಷ್ಠಿ ರುದ್ರಪ್ಪ
(01 June 1966)

ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್,  ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ...

READ MORE

Related Books