ಆ ಹದಿಮೂರು ವರುಷಗಳು

Author : ಎಚ್.ಎಸ್. ಅನುಪಮಾ

Pages 172

₹ 140.00
Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಡಾ.ಎಚ್.ಎಸ್.ಅನುಪಮಾ ಅವರು ಕನ್ನಡಕ್ಕೆ ಅನುವಾದಿಸಿರುವ ರಾಮಚಂದ್ರ ಸಿಂಗ್ ಅವರ 'ಆ ಹದಿಮೂರು ವರುಷಗಳು' ಕೃತಿಯು ನಕ್ಸಲೈಟನ ಜೈಲು ಆತ್ಮಕಥನವನ್ನು ಒಳಗೊಂಡಿರುವಂತದ್ದು. 

ನಕ್ಸಲಿಸಂ ಬಗೆಗಿನ ಪೂರ್ವಾಗ್ರಹಗಳನ್ನು ದೂರ ಮಾಡುವ ಕೃತಿಯಾಗಿ ಓದುಗರಿಗೆ ಹತ್ತಿರವಾಗುವ ಅಪೂರ್ವ ಕೃತಿಯಾಗಿದೆ.  ಉತ್ತರ ಪ್ರದೇಶದ ಬಂಗಾರಮಾವ್ ನ ಹಿಂದುಳಿದ ಜಾತಿಗೆ ಸೇರಿದ ರಾಮಚಂದ್ರ ಸಿಂಗ್ ವಿದ್ಯಾರ್ಥಿ ದೆಸೆಯಲ್ಲೇ ಈ ಹಾದಿಯಲ್ಲಿ ಪಯಣಿಸಿ ನಕ್ಸಲೈಟರಾದುದು; ಸಶಸ್ತ್ರ ಹೋರಾಟ ಕೈಗೆತ್ತಿಕೊಂಡ ಅವರು ತಮ್ಮ ಸಹಚರರೊಂದಿಗೆ ಸೆರೆ ಸಿಕ್ಕಿ ಜೀವಾವಧಿ ಶಿಕ್ಷೆಗೆ ಗುರಿಯಾದುದು; ಆ ಸಮಯದಲ್ಲಿ ಉತ್ತರ ಪ್ರದೇಶದ ವಿವಿಧ ಜೈಲುಗಳಲ್ಲಿ ಕಳೆದ ದಿನಗಳ ಅವರ ಅನುಭವದ ದಾಖಲೆಯನ್ನು ಒಳಗೊಂಡಿದೆ.

ಮುನ್ನುಡಿಯಲ್ಲಿ ಪ್ರೊ.ನಗರಗೆರೆ ರಮೇಶ್ ಹೇಳುವಂತೆ - 'ಆ ನೆನಪುಗಳು ಕೇವಲ ವೈಯುಕ್ತಿಕವಲ್ಲ. ಅಲ್ಲಿ ದೇಶದ ಪರಿಸ್ಥಿತಿಯ ಬಗ್ಗೆ ಒಳನೋಟಗಳಿವೆ. ಜೈಲು ಸಿಬ್ಬಂದಿಯ ಅನಾಗರಿಕ, ಅಮಾನುಷ ನಡವಳಿಕೆಯ ವಿವರಗಳಿವೆ. ವಿರಳ ಒಳ್ಳೆಯ ಅಧಿಕಾರಿಗಳ ಚಿತ್ರಣವಿದೆ. ಚಿತ್ರಹಿಂಸೆಗೆ ಗುರಿಯಾಗುವಾಗಲೂ ಮಾನಸಿಕ ಸಮತೋಲನ ಕಾಯ್ದುಕೊಂಡ ರಾಮಚಂದ್ರ ಸಿಂಗರ ಪ್ರಬುದ್ಧ ವ್ಯಕ್ತಿತ್ವದ ಅನಾವರಣವಾಗಿ ಕೃತಿ ಹೊರಹೊಮ್ಮಿದೆ.' ಎಂದಿದ್ದಾರೆ.

ವಸ್ತುನಿಷ್ಠವಾಗಿ ಎಲ್ಲವನ್ನೂ ಎಲ್ಲರನ್ನೂ ಪರಿಚಯಿಸುವ ರಾಮಚಂದ್ರ ಸಿಂಗ್ ರದು ಅನನ್ಯ ನಿರೂಪಣೆ. ಒಳ್ಳೆಯ ಉದ್ದೇಶವನ್ನೇ ಇಟ್ಟುಕೊಂಡು ಆರಂಭವಾಗುವ 'ಕ್ರಾಂತಿ' ಸಿದ್ಧಾಂತದ ತಿಕ್ಕಾಟದಲ್ಲಿ ಒಡೆದು ಹೋಳಾದಾಗ ಎದುರಾಗುವ ದುರ್ಗಮತೆಯನ್ನು; ಸುಧಾರಣಾ ಕೇಂದ್ರಗಳಾಗಬೇಕಾದ ಜೈಲುಗಳು ಹಿಂಸಾ ಕೇಂದ್ರಗಳಾಗುತ್ತಿರುವ ಕಟು ವಾಸ್ತವವನ್ನು, ಜೈಲಿನ ಕಗ್ಗತ್ತಲ ಕೋಣೆಗಳ ಕೊಳಕುತನವನ್ನು ಮೀರಿಸುವ ಸ್ವಾರ್ಥ ಸಮಾಜದಲ್ಲಿ ವಿಜೃಂಭಿಸುತ್ತಿರುವುದನ್ನು; ಮೂಲ ಚಳುವಳಿಯ ಆಶಯದ ಪರಿಚಯವೇ ಇಲ್ಲದೇ ನಕ್ಸಲರನ್ನು ದ್ವೇಷಿಸುವುದೇ ದೇಶಪ್ರೇಮ ಎಂದು ಬಿಂಬಿತವಾಗುತ್ತಿರುವ ವರ್ತಮಾನದ ವಿಪರ್ಯಾಸವನ್ನು - ಎಳೆ ಎಳೆಯಾಗಿ ಬಿಚ್ಚಿಡುವ ಕೃತಿ 'ಆ ಹದಿಮೂರು ವರ್ಷಗಳು'.

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Related Books