ಬದುಕು ಬಯಲು

Author : ದು. ಸರಸ್ವತಿ

Pages 280

₹ 180.00




Year of Publication: 2011
Published by: ಲಂಕೇಶ್ ಪ್ರಕಾಶನ
Address: ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 080-26676427

Synopsys

ಲೇಖಕಿ ಎ. ರೇವತಿ ಅವರ ಆಂಗ್ಲ ಕೃತಿ ಬದುಕು ಬಯಲು. ಈ ಕೃತಿಯನ್ನು ದು. ಸರಸ್ವತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಜ್ರಾ ಒಬ್ಬಳ ಆತ್ಮಕಥೆ ಇದು. ತೃತೀಯ ಲಿಂಗಿಗಳನ್ನು ಸಮಾಜ ಯಾವುದೇ ಕಾರಣಕ್ಕೂ ಒಪ್ಪದು. ಪ್ರತಿ ಆಚರಣೆ-ಸಂಪ್ರದಾಯದಿಂದಲೂ ಅವರನ್ನು ದೂರ ಇಡಲಾಗುತ್ತದೆ. ಈ ತಾರತಮ್ಯ ಹೋಗಲಾಡಿಸಲು ಹತ್ತು ಹಲವು ವರ್ಷದಿಂದ ಹೋರಾಟ ನಡೆದಿದ್ದರ ಫಲವಾಗಿ ಇಂದು ನಮ್ಮ ಸಂವಿಧಾನವು ಕಾನೂನಿನ ಬೆಂಬಲ ನೀಡಿದೆ. ಆದ್ದರಿಂದ ಹಿಜ್ರಾಗಳು ಸಹ ಇಂದು ಗೌರವಯುತವಾಗಿ ಬದುಕುವಂತೆ ಆಗಿದೆ. ಈ ಹಿನ್ನೆಲೆಯಲ್ಲಿ ಹಿಜ್ರಾವೊಬ್ಬರು ತಮ್ಮ ಅನುಭವಗಳಿಗೆ ಸ್ಪಂದಿಸಿದ ಬರೆಹ ಇದು.

About the Author

ದು. ಸರಸ್ವತಿ
(20 April 1963)

ದು.ಸರಸ್ವತಿ- ಹುಟ್ಟಿದ್ದು 20 ಏಪ್ರಿಲ್ , 1963, ಬೆಂಗಳೂರಿನಲ್ಲಿ. ವಿದ್ಯಾಭ್ಯಾಸವೂ ಬೆಂಗಳೂರಿನಲ್ಲಿಯೇ. ರಂಗಭೂಮಿ, ಚಿತ್ರಕಲೆ, ಮಹಿಳಾ ಮತ್ತು ದಲಿತ ಚಳುವಳಿ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಸರಸ್ವತಿ, ಹೆಣೆದರೆ ಜೇಡನಂತೆ(ಕಡೆಂಗೋಡ್ಲು ಕಾವ್ಯ ಪ್ರಶಸ್ತಿ-1997), ಈಗೇನ್ ಮಾಡೀರಿ(ಅನುಭವ ಕಥನ-2000) ಕೃತಿಗಳನ್ನು ಪ್ರಕಟಿಸಿದ್ದಾರೆ.  ...

READ MORE

Related Books