ಯಕ್ಷ ಗಾನ ಲೀಲಾವಳಿ

Author : ವಿದ್ಯಾರಶ್ಮಿ ಪೆಲತ್ತಡ್ಕ

Pages 156

₹ 150.00




Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಲೇಖಕಿ, ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ ಅವರ ಕೃತಿ ಯಕ್ಷ ಗಾನ ಲೀಲಾವಳಿ. ಇದು ಯಕ್ಷಗಾನ ರಂಗದ ಪ್ರಥಮ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಆತ್ಮಕಥನವಾಗಿದೆ. ಹಿರಿಯ ಲೇಖಕ ಲಕ್ಷ್ಮೀಶ ತೋಳ್ಪಾಡಿ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ‘ಯಕ್ಷಮೇಳಗಳ ತಿರುಗಾಟದಲ್ಲಿ ಭಾಗವಹಿಸಿದ ಮೊದಲ ಮಹಿಳಾ ಭಾಗವತರೆಂಬ ಇತಿಹಾಸವನ್ನು ಲೀಲಮ್ಮ ಸೃಷ್ಟಿಸಿದರು – ಹೀಗೊಂದು ಇತಿಹಾಸ ಸೃಷ್ಟಿಸುತ್ತಿದ್ದೇನೆ ಎಂಬ ಅರಿವಿಲ್ಲದೆ! ಹೊಸ ಮಾರ್ಗವೊಂದು ಉದ್ಘಾಟನೆಗೊಂಡಿತು ಎಂದು ಅರಿವಿಗೆ ಬಂದಾಗಲೂ ಲೀಲಮ್ಮನಿಗೆ ಉಂಟಾದದ್ದು ಕೂಡಾ ವಿನೀತ ಭಾವವೇ. ಲೋಕವನ್ನೇ ಕರಗಿಸುವ ಈ ವಿನಯ ಲೀಲಮ್ಮನವರದೇ ಸೊತ್ತು ಎನಿಸುತ್ತದೆ ನನಗೆ. ಕಲೆಯ ಮೂಲ ಸಮಸ್ಯೆಗಳಲ್ಲಿ ಇದೂ ಒಂದು; ಅದೆಂದರೆ ತನ್ನ ಭಾವ ತಾದಾತ್ಮ್ಯ ಮತ್ತು ಎಚ್ಚರದ ಸಮತೋಲ. ಲೀಲಮ್ಮನಿಗೆ ಇದು ಸಹಜವಾಗಿ ಬಂದಂತಿದೆ. ಒಂದೆಡೆ ಸಂಸಾರ. ಇನ್ನೊಂದೆಡೆ ಯಕ್ಷವೇದಿಕೆ. ಒಂದೆಡೆ ಲೋಕಧರ್ಮಿ, ಇನ್ನೊಂದೆಡೆ ನಾಟ್ಯ ಧರ್ಮಿ. ಇವೆರಡನ್ನೂ ಕಲಾತ್ಮಕ ಹದದಿಂದ ಮುನ್ನಡೆಯಿಸಿದವರು ಅವರು. ಈ ಕಲಾ ಕಾಯಕದಲ್ಲಿ ಲೀಲಮ್ಮನವರ ಪತಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಹಿಮ್ಮೇಳ, ಹಿನ್ನೆಲೆ, ಮಾರ್ಗದರ್ಶನ, ಪ್ರೋತ್ಸಾಹಗಳು- ತಾನು ಹಿನ್ನೆಲೆಯಲ್ಲಿ ನಿಂತು ಮಡದಿಯನ್ನು ಮುನ್ನೆಲೆಗೆ ತರುವಲ್ಲಿನ ಸಹೃದಯತೆ- ಸರ್ವಥಾ ಅಭಿನಂದನೀಯವಾಗಿದೆ’ ಎಂದಿದ್ದಾರೆ.

About the Author

ವಿದ್ಯಾರಶ್ಮಿ ಪೆಲತ್ತಡ್ಕ

ವಿದ್ಯಾರಶ್ಮಿ ಪೆಲತ್ತಡ್ಕ- ದಕ್ಷಿಣ ಕನ್ನಡ-ಕಾಸರಗೋಡು ಗಡಿ ಭಾಗದ ಪೆಲತ್ತಡ್ಕದವರು. ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ ಪ್ರಭ, ಸುವರ್ಣ ನ್ಯೂಸ್, ವಿಜಯ ನೆಕ್ಸ್ಟ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ. ಸದ್ಯ ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಇವರು ಬರೆದ ಕವನ, ಕಥೆ, ಪ್ರಬಂಧಗಳು ಹಲವೆಡೆ ಪ್ರಕಟವಾಗಿವೆ.  ‘ಗೌರೀದುಃಖ’ ಇವರ ಪ್ರಕಟಿತ ಕವನ ಸಂಕಲನ.  ...

READ MORE

Related Books