ಹುಣ್ಸ್ ಮಕ್ಕಿ ಹುಳ

Author : ವಿನುತಾ ವಿಶ್ವನಾಥ್

Pages 176

₹ 150.00

Buy Now


Year of Publication: 2021
Published by: ಹೂವಿನಹೊಳೆ ಪ್ರಕಾಶನ
Address: # 16, ಜೀವ ಸಂಗಮ ಆಲಯ, ತರಾಸು ರಸ್ತೆ, ಚೈತ್ರ ಮೇಡೋಸ್ ಲೇಔಟ್, ಬೇಗೂರು ಕೊಪ್ಪ ರಸ್ತೆ, ಮೈಲಸಂದ್ರ, ಬೆಂಗಳೂರು - 560114 
Phone: 8088081008

Synopsys

ಲೇಖಕಿ ವಿನುತಾ ವಿಶ್ವನಾಥ ಅವರ ಆತ್ಮಕಥನ-ಹುಣ್ಸ್ ಮಕ್ಕಿ ಹುಳ. ತಮ್ಮ ಏಳನೇ ವಯಸ್ಸಿನಲ್ಲಿ ಬೆಂಕಿ ಅವಘಟಡಕ್ಕೆ ಸಿಲುಕಿ ಮುಖದ ಚೆಲುವನ್ನು ಕಳೆದುಕೊಂಡವಳು. ಕಣ್ಣಿನ ಮಾತು ಕೇಳಬೇಡಿ, ಮನಸ್ಸಿನ ಮಾತಿಗೆ ಕಿವಿಗೊಡಿ’ ಎಂಬ ಶೀರ್ಷಿಕೆಯೊಂದಿಗೆ ಫೇಸ್ ಬುಕ್ ನಲ್ಲಿ ಬರೆಯುತ್ತಿದ್ದಅಭಿಪ್ರಾಯಗಳು ಬರಹ ವಲಯವನ್ನು ಆಕರ್ಷಿಸಿದ್ದವು. ಮುಂದೆ ಈ ಹವ್ಯಾಸವು ತಮ್ಮ ಆತ್ಮಕಥನ ಬರೆಯಲು ಪ್ರೇರಣೆ ನೀಡಿತು. 

ಲೇಖಕಿ ಡಿ. ಸುಮನ್ ಕಿತ್ತೂರು ಅವರು ಕೃತಿಗೆ ಬೆನ್ನುಡಿ ಬರೆದು ‘ಸಣ್ಣ ಸಣ್ಣ ವಿಚಾರಗಳಲ್ಲಿ ಎಷ್ಟೋ ದೊಡ್ಡ ದೊಡ್ಡ ತಾತ್ವಿಕ ಪಯಣ ತೆರೆದುಕೊಳ್ಳುತ್ತದೆ ಎಂಬುದನ್ನು ಈ ಆತ್ಮಕಥೆ ನಿರೂಪಿಸುತ್ತದೆ. ತಮ್ಮದಲ್ಲದ ತಪ್ಪಿಗೆ, ಸಮಾಜದೊಂದಿಗೆ, ಅದರ ತಿರಸ್ಕಾರದೊಂದಿಗೆ ಗುದ್ದಾಡಲೂ ಸಹ ಆಗದ, ಆತ್ಮಸ್ಥೈರ್ಯ ಕಳೆದುಕೊಂಡು ಮೂಲೆಗುಂಪಾಗುವ ಎಷ್ಟೊ ಜೀವಗಳಿಗೆ ಈ ಆತ್ಮಕಥೆ ಸ್ಫೂರ್ತಿಯಾಗಲಿದೆ’ ಎಂದು ಪ್ರಶಂಸಿಸಿದ್ದಾರೆ.


 

About the Author

ವಿನುತಾ ವಿಶ್ವನಾಥ್

ಲೇಖಕಿ ವಿನುತಾ ವಿಶ್ವನಾಥ್ ಅವರು ಮೂಲತಃ ಕುಂದಾಪುರ ತಾಲೂಕಿನ ಹುಣ್ಣೆಮಕ್ಕಿ‌.ಗ್ರಾಮದವರು. ಶಿವಮೊಗ್ಗ ಜಿಲ್ಲೆಯ  ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನಿಕ್ ನಿಂದ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ವಿಷಯದಲ್ಲಿ ಡಿಪ್ಲೋಮಾ ಪದವೀಧರರು. ಪ್ರವೃತ್ತಿಯಿಂದ ಇವರು ಹವ್ಯಾಸಿ ರಂಗಭೂಮಿ ಕಲಾವಿದೆ. ಸದ್ಯ ಟಿ.ವಿ. ಹೌಸ್ ನೆಟ್ ವರ್ಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.   ಕೃತಿಗಳು: ಹುಣ್ಸಮಕ್ಕಿ ಹುಳ (ಆತ್ಮಕಥನ) ...

READ MORE

Related Books