ಕೌಂಟ್ ಲಿಯೋ ಟಾಲ್‌ ಸ್ಟಾಯ್ಅವರ ಆತ್ಮಕಥೆ

Author : ಆನಂದ (ಅಜ್ಜಂಪುರ ಸೀತಾರಾಂ)

Pages 535

₹ 110.00




Year of Publication: 2007
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಜಾಗತಿಕ ಸಾಹಿತ್ಯದಲ್ಲಿ ಅಪೂರ್ವ ತಾರೆಯಾಗಿ ಎಂದೆಂದಿಗೂ ಮಿನುಗುತ್ತಿರುವ ಲಿಯೊ ಟಾಲ್ಸ್ಟಾಯ್ ಅವರ ಆತ್ಮಚರಿತ್ರೆಯ ಕನ್ನಡ ಅನುವಾದವಾಗಿದೆ ಈ ಕೃತಿ. ಇದನ್ನು ಆನಂದರವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಶೈಶವ, ಬಾಲ್ಯ, ಮತ್ತು ಯೌವನ ಎಂಬ ಮೂರು ಭಾಗಗಳನ್ನೊಳಗೊಂಡ ಈ ಕೃತಿಯು ಸಾಹಿತ್ಯಿಕ ಕೋನದಿಂದಷ್ಟೇ ಅಲ್ಲದೆ ಸಾಮಾಜಿಕ ಮತ್ತು ರಾಜಕೀಯ ಇತಿಹಾಸಗಳ ದೃಷ್ಟಿಯಿಂದಲೂ ಗಮನ ಸೆಳೆದಿದೆ. ಇದರಲ್ಲಿ ಅವರ ಬಹು ಸೂಕ್ಷ್ಮವಾದ ಮನಶ್ಶಾಸ್ತ್ರೀಯ ವಿಶ್ಲೇಷಣೆ, ಭಾವುಕತೆ, ಗಂಭೀರತೆ ಮತ್ತು ವಾಸ್ತವಿಕತೆಗಳನ್ನುಈ ಕೃತಿಯೂ ಒಳಗೊಂಡಿದೆ.

About the Author

ಆನಂದ (ಅಜ್ಜಂಪುರ ಸೀತಾರಾಂ)
(18 August 1902 - 17 November 1963)

’ಆನಂದ’ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಅಜ್ಜಂಪುರ ಸೀತಾರಾಂ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ಮಾಸ್ತಿಯವರ ಸಣ್ಣಕಥಾ ಪರಂಪರೆಯಲ್ಲಿ ಆನಂದರು ಹೆಜ್ಜೆಗುರುತು ಮೂಡಿಸುವ ಬರವಣಿಗೆ. ಇವರು ಜನಿಸಿದ್ದು 1902 ಆಗಸ್ಟ್‌ 18ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಜನಿಸಿದರು. ತಮದೆ ಅನಂತಯ್ಯ, ತಾಯಿ ವೆಂಕಟಲಕ್ಷ್ಮಮ್ಮ. ಶಿವಮೊಗ್ಗದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಿಂದ ಬಿಎಸ್‌ಸಿ ಪದವಿ ಪಡೆದರು. ಆನಂದ ಕಾವ್ಯನಾಮದ ಮೂಲಕ ಬರವಣಿಗೆ ಶುರು ಮಾಡಿದ ಇವರು ಬರೆದ ಮೊದಲ ಕತೆ ಭವತಿ ಭಿಕ್ಷಾಂದೇಹಿ. ಇವರು ಬರೆದ ಹಲವು ಕತೆಗಳು ವಿವಿಧ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ...

READ MORE

Related Books