‘ಅನುದಿನದ ಅಂತರಗಂಗೆ’ ಹಿರಿಯ ಲೇಖಕಿ, ಕವಿ, ಪ್ರತಿಭಾ ನಂದಕುಮಾರ್ ಅವರ ಆತ್ಮಕಥನ. ನಾವು ಹುಡುಗಿಯರೇ ಹೀಗೆ ಎಂಬ ಕವನದ ಮೂಲಕ ಕನ್ನಡ ಕಾವ್ಯಲೋಕಕ್ಕೆ ಮತ್ತೊಂದು ಮಜಲನ್ನು ಪರಿಚಯಿಸಿದ ಪ್ರತಿಭಾ ನಂದಕುಮಾರ್, ತಮ್ಮ ಬದುಕನ್ನು ತೀವ್ರವಾಗಿ ಬದುಕುವವರು. ಬದುಕಿನ ಪ್ರತಿ ಘಟ್ಟವನ್ನು ತೀವ್ರವಾಗಿ ಅನುಭವಿಸಿ ಬರೆವ ಅವರ ಪದ್ಯಗಳಂತೆಯೇ ಅವರ ಆತ್ಮಕಥನ ಅನುದಿನದ ಅಂತರಗಂಗೆಯೂ ಧುಮ್ಮಿಕ್ಕುವ ಭಾವಗಳಲ್ಲಿ ಸಾಗುತ್ತದೆ. ಬದುಕಿನ ಬವಣೆಗಳೊಂದಿಗೆ ಸೆಣೆಸಾಡುತ್ತಲೇ ಕಾವ್ಯದ ಗಮ್ಯವನ್ನು ತಲುಪಿದ ಪ್ರತಿಭಾ ಅವರ ಬದುಕು ಅನುದಿನದ ಅಂತರಗಂಗೆಯಲ್ಲಿ ಕಾವ್ಯಾತ್ಮಕವಾಗಿಯೇ ದಾಖಲಾಗಿದೆ.
©2023 Book Brahma Private Limited.