ಬೀನಾ ದಾಸ್ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ದಿಗಂತದಲ್ಲಿ ಪ್ರಜ್ವಲಿಸುತ್ತಿರುವ ಮಿನುಗು ತಾರೆ. ಅವಳ ಸಮಕಾಲೀನರಿಂದ 'ಅಗ್ನಿಕನ್ಯೆ' ಯೆಂದು ಕರೆಸಿಕೊಂಡ ಈಕೆ ವಿದೇಶಿ ಆಳ್ವಿಕೆಯ ವಿರುದ್ಧ ಸಿಡಿದೆದ್ದ ಸಾಕ್ಷಿಪ್ರಜ್ಞೆ, ಕ್ರಾಂತಿಕಾರಿ ಹೋರಾಟದ ಮೂಲಕ ತನ್ನ ಜೀವನವನ್ನು ಆರಂಭಿಸಿದ ಬೀನಾ ದಾಸ್‌ಗೆ ಸುಭಾಷ್ ಚಂದ್ರ ಬೋಸರಷ್ಟೇ ಮಹಾತ್ಮ ಗಾಂಧಿಯೂ ಆದರಣೀಯರು. ಈಕೆ ಬದುಕಿನ ಹತ್ತು ವರ್ಷಗಳ ಕಾಲ ಸೆರೆಮನೆಯಲ್ಲಿದ್ದಳು. ಶಸ್ತ್ರಾಸ್ತ್ರ ಹೋರಾಟದಿಂದ ಆರಂಭಿಸಿದ ಅವಳ ಜೀವನ ಪಯಣ ಗಲಭೆಯೆದ್ದ ನೌಖಾಲಿಯಲ್ಲಿ ಗಾಂಧಿಯವರೊಂದಿಗೆ ಪಾದಯಾತ್ರೆ ಕೈಗೊಳ್ಳುವ ಕಾಂಗ್ರೆಸ್ ನೇತಾರಳಾಗುವವರೆಗೂ ಸಾಗುತ್ತದೆ.
ಬೀನಾ ದಾಸ್‌ಳ ಆತ್ಮಕತೆ 'ಶೃಂಖಲ್ ಝಂಕಾರ್' ಅವಳೊಬ್ಬಳ ಕತೆ ಮಾತ್ರವಾಗದೆ, ಆ ಕಾಲದ ಹೋರಾಟದ ಹಲವು ಮುಖಗಳನ್ನು ಬಿಚ್ಚಿಡುತ್ತದೆ. ಅಂತಹ ಮಹತ್ವದ ಕೃತಿಯನ್ನು ಲೇಖಕಿ ಎನ್. ಗಾಯತ್ರಿ ಕನ್ನಡೀಕರಿಸಿದ್ದಾರೆ.
©2023 Book Brahma Private Limited.