ಸಾಹಿತಿ ಕೆ. ಶಿವರಾಮ ಕಾರಂತ ಹೇಳುವಂತೆ ’ಸುಮಾರು ಐದು ದಶಕಗಳ ಕಾಲಕ್ಕಿಂತ ಹೆಚ್ಚಾಗಿ ಲೇಖನ ವೃತ್ತಿ ನಡೆಸಿದ ತಮ್ಮ ಬರೆಹಗಳ ಉದ್ದೇಶವನ್ನು, ಹಿನ್ನೆಲೆಯನ್ನು ಬದಲಿಸುತ್ತಾ, ಸಾಗಿದ ದೃಷ್ಟಿಯನ್ನು ಸಾಹಿತ್ಯ ಮತ್ತು ನಾನು ಕೃತಿಯು ವಿವರಿಸುತ್ತದೆ ಎಂದಿದ್ದಾರೆ.
”ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯು ಕಾರಂತರ ಆತ್ಮಕಥೆ ಎಂದೇ ಪರಿಗಣಿತವಾಗಿದೆ. ಆದರೆ, ’ಸ್ಮೃತಿ ಪಟಲದಿಂದ’ ಎಂಬ ಸರಣಿ ಮಾಲೆಯಡಿ ಪ್ರಕಟವಾಗುವ ಎಲ್ಲ ಕೃತಿಗಳು ಒಂದು ಅರ್ಥದಲ್ಲಿ ಅವರ ಆತ್ಮಕಥೆಗಳೇ ಆಗಿವೆ. ಆದ್ದರಿಂದ, ಸಾಹಿತ್ಯ ಮತ್ತು ನಾನು ಕೃತಿಯು ಸಹ ಅವರ ಆತ್ಮಕಥೆಯೇ ಆಗಿದೆ. ಸಾಹಿತ್ಯ ಕುರಿತಂತೆ ತಮ್ಮ ದೃಷ್ಟಿಕೋನ, ಅನುಭವ, ಹಿನ್ನೆಲೆ ಎಲ್ಲವನ್ನೂ ಅವರು ಈ ಕೃತಿಯಲ್ಲಿ ಕಟ್ಟಿಕೊಡುತ್ತಾರೆ.
©2022 Book Brahma Private Limited.