ಹುಳಿಮಾವು ಮತ್ತು ನಾನು

Author : ಇಂದಿರಾ ಲಂಕೇಶ್

Pages 202

₹ 135.00
Year of Publication: 2013
Published by: ಲಂಕೇಶ ಪ್ರಕಾಶನ
Address: ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು- 560004

Synopsys

ಖ್ಯಾತ ಪತ್ರಕರ್ತ-ಸಾಹಿತಿ ಲಂಕೇಶ ಅವರ ಪತ್ನಿ ಇಂದಿರಾ ಲಂಕೇಶ ಅವರ ಆತ್ಮಕಥೆ. ಹುಳಿಮಾವಿನ ಮರ-ಲಂಕೇಶರ ಆತ್ಮಕತೆ. ಅಲ್ಲಿ ಪ್ರಸ್ತಾಪಿಸಲ್ಪಟ್ಟ ಕೆಲ ಸನ್ನಿವೇಶಗಳಿಗೆ ಪೂರಕವಾಗಿಯೂ ಈ ಆತ್ಮಕತೆಯಲ್ಲಿ ಲೇಖಕಿ ಪ್ರಸ್ತಾಪಿಸಿದ್ದಾರೆ; ಪ್ರತಿಕ್ರಿಯಿಸಿದ್ದಾರೆ; ಸ್ಪಂದಿಸಿದ್ದಾರೆ. ಕುಟುಂಬ, ಮಕ್ಕಳು ಸೇರಿದಂತೆ ಲಂಕೇಶರ ವ್ಯಕ್ತಿತ್ವವು ತಮ್ಮ ವಿಚಾರ-ಭಾವ ಜಗತ್ತು ಆವರಿಸಿಕೊಂಡಿದ್ದರ ಬಗೆಗೆ ಹೆಚ್ಚು ಪ್ರಸ್ತಾಪವಿದೆ. ಲಂಕೇಶರನ್ನು ಹುಳಿಮಾವಿಗೆ ಸಾಂಕೇತವಾಗಿಸಿದ್ದು ಇಲ್ಲಿಯ ವಿಶೇಷ.

About the Author

ಇಂದಿರಾ ಲಂಕೇಶ್

ಕನ್ನಡದ ಖ್ಯಾತ ಲೇಖಕ, ಸಾಹಿತಿ ಪತ್ರಕರ್ತ ಹಾಗೂ ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್. ಪತಿ ಲಂಕೇಶ್ ಅವರ ಜನಪ್ರಿಯತೆಗೆ ಮಾತ್ರ ಜೊತೆಯಾಗದ ಇಂದಿರಾ, ಲಂಕೇಶ್ ಅವರ ಹುಂಬತನಗಳೊಂದಿಗೆ ಬದುಕು ನಡೆಸಿದವರು. ಅವರೊಂದಿಗಿನ ತಮ್ಮ ಬದುಕಿನ ಅನುಭವಗಳನ್ನು ಹುಳಿಮಾವು ಮತ್ತು ನಾನು ಎಂಬ ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ. ...

READ MORE

Related Books