ಜೇನುಗೂಡು

Author : ಗಿರಿಜಾ ಎಸ್. ದೇಶಪಾಂಡೆ

Pages 120

₹ 100.00
Year of Publication: 2021
Published by: ದೇವಿ ಪಬ್ಲಿಕೇಶನ್
Address: # 28/ಎ, 13ನೇ ಮುಖ್ಯ ರಸ್ತೆ, 50 ಅಡಿ ರಸ್ತೆ, ಹನುಮಂತನಗರ, ಬೆಂಗಳೂರು -560050
Phone: 6361774582

Synopsys

‘ಜೇನುಗೂಡು’ ಲೇಖಕಿ ಗಿರಿಜಾ ಎಸ್. ದೇಶಪಾಂಡೆ ಅವರ ಆತ್ಮಕಥೆ. ಒಟ್ಟು 11 ಅಧ್ಯಾಯಗಳಲ್ಲಿ ನಿರೂಪಿತವಾಗಿದೆ. ಹನಿ ಹನಿ ಅನುಭವಗಳ ಜೇನುಗೂಡು’ ಎಂದು ಕೃತಿಗೆ ಲೇಖಕಿಯು ಉಪಶೀರ್ಷಿಕೆ ನೀಡಿದ್ದಾರೆ. ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಅವರು ಕೃತಿಯ ಕುರಿತು ‘"ಜೇನುಗೂಡು" ಆತ್ಮಕಥನ ಕನ್ನಡ ಸಾರಸ್ವತ ಲೋಕದಲ್ಲಿ ಎದ್ದುನಿಲ್ಲುವ ಕೃತಿ. ಜೀವನದ  ಈ ಸುದೀರ್ಘ ಪಯಣದ ಮಧ್ಯದಲ್ಲಿ ಇಲ್ಲವೇ ತುಟ್ಟತುದಿಯಲ್ಲಿ ನಿಂತು ತಾವು ಸವೆಸಿ ಬಂದ ಜಿವನದ ಏರುಪೇರುಗಳು, ಸಿಹಿ- ಕಹಿ ಅನುಭವಗಳು, ಕಿರುಕಳಗಳು, ಔದಾರ್ಯ, ಕರುಣ, ಸಹಾಯ, ಸಹಾನುಭೂತಿ, ಅನುಭೂತಿಗಳನ್ನು ಅಕ್ಷರಗಳ ಮೂಲಕ ಪರಿಣಾಮಕಾರಿಯಾಗಿ ಹಿಡಿದಿಡುವ ಸಮರ್ಥ ಕಾರ್ಯವನ್ನು "ಜೇನುಗೂಡು" ಮಾಡಿದೆ. ಪತಿಯ ಅಗಲುವಿಕೆ ಇನ್ನೊಂದು ಆಘಾತ. ಮಕ್ಕಳ ಲಾಲನೆ ಪಾಲನೆ. ಪುಟ್ಟ ಉದ್ಯೋಗ, ನಂತರ ಮಕ್ಕಳ ಅಭ್ಯುದಯ ಮೊದಲಾದ ಮಜಲುಗಳು ಅವರ ಜೇನುಗೂಡಿನಲ್ಲಿ ಅತ್ಯಂತ ಮಾರ್ಮಿಕವಾಗಿ ದಾಖಲಾಗಿವೆ. ತಮ್ಮೆಲ್ಲ ಕಹಿ ಘಟನೆಗಳನ್ನು ಬರವಣಿಗೆಯ ಮೂಲಕ ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಂಕಣ ಬರೆಹಗಾರ್ತಿ, ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಗಿರಿಜಾ ದೇಶಪಾಂಡೆ, ಜೀವನದಲ್ಲಿ ಹತ್ತು ಹಲವಾರು ಏರುಪೇರುಗಳನ್ನು ಕಂಡು ಮಾಗಿದವರು. ಮನುಷ್ಯಕುಲದ ನಾಡಿಮಿಡಿತವನ್ನು ಅರಿತವರು. ಜೀವನದಲ್ಲಿ ಎದುರಾದ ಸಂಕಷ್ಟಗಳು, ಅವರು ಎದುರಿಸಿದ ರೀತಿ ಇತರರಿಗೆ ದಾರಿ ದೀಪ. ಈ. ಆತ್ಮಕಥೆ ಓದುತ್ತಿದ್ದಂತೆ ಉತ್ತಮ ಕಾದಂಬರಿಯ ರೂಪ ಪಡೆದಿದೆ ಎಂದೆನಿಸಿತು. ತಮ್ಮ ಜೀವನದ ಕಥಾನಕವನ್ನು ಅವರು ಭಾವುಕರಾಗಿ ಸರಳವಾಗಿ ನಿರೂಪಿಸುತ್ತ ಹೋಗುತ್ತಾರೆ. ಓದುತ್ತಿದ್ದಂತೆ ಕುತೂಹಲವೂ ಕೆರಳುತ್ತ ಸಾಗುತ್ತದೆ. ಜೀವನದ ಆಕಸ್ಮಿಕ ತಿರುವುಗಳು ಕಥೆ ಕಾದಂಬರಿಗಳಲ್ಲಿ ಬರುವ ಘಟನೆಗಳಂತೆ ಭಾಸವಾಗುತ್ತವೆ.ಅವರ ಪೆನ್ನಿಗೆ ಬರಹ ಪಕ್ಕಾಗಿದೆ. ಒಟ್ಟಾರೆ, ಓದಬಹುದಾದ ಕೃತಿ ಜೇನುಗೂಡು’ ಎಂದು ಪ್ರಶಂಸಿಸಿದ್ದಾರೆ. .

About the Author

ಗಿರಿಜಾ ಎಸ್. ದೇಶಪಾಂಡೆ

ಲೇಖಕಿ ಗಿರಿಜಾ ಎಸ್. ದೇಶಪಾಂಡೆ ಅವರು ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ಊರಿನವರು. ಹಾವೇರಿಯಲ್ಲಿ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಬಿ.ಇಡಿ ಪದವೀಧರೆ. ವೃತ್ತಿಯಲ್ಲಿ ಶಿಕ್ಷಕಿಯಾಗಿ ಈಗ ನಿವೃತ್ತರು. ಇವರು ಬರೆದ ಲೇಖನಗಳು, ಸಂದರ್ಶನಗಳು, ಪ್ರಬಂಧಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬೆಂಗಳೂರಿನಲ್ಲಿ ವಾಸವಿದ್ದಾರೆ. ಕರ್ನಾಟಕ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸದಸ್ಯರಾಗಿದ್ದಾರೆ. ಕೃತಿಗಳು: . ಸಂವಾದಿನಿ (32 ಮಹಿಳಾ ಸಾಧಕರ ಪರಿಚಯ), ಸಂಜೀವಿನಿ (ಆರೋಗ್ಯ ಲೇಖನಗಳು), ಜೇನುಗೂಡು (ಆತ್ಮಕಥೆ) ಪ್ರಶಸ್ತಿ-ಪುರಸ್ಕಾರಗಳು: ಡಿ.ಎಸ್.ಮ್ಯಾಕ್ಸ್ ಕನಸ್ಟ್ರಕ್ಶನ್ (2019) ಕಂಪನಿಯವರಿಂದ ರಾಜ್ಯೋತ್ಸವದಂದು ಶ್ರೇಷ್ಟ ಅಂಕಣ ಬರಹಗಾರ್ತಿ ಸಾಹಿತ್ಯಶ್ರೀ ಪ್ರಶಸ್ತಿ, ಕನ್ನಡ ...

READ MORE

Related Books