ಬರೆಯದ ದಿನಚರಿಯ ಮರೆಯದ ಪುಟಗಳು

Author : ಬಿ.ವಿ ಕಕ್ಕಿಲ್ಲಾಯ

Pages 368

₹ 350.00

Buy Now


Year of Publication: 2019
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 9900998686

Synopsys

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬಿ.ವಿ ಕಕ್ಕಿಲ್ಲಾಯ ಅವರ ಹೋರಾಟದ ಬದುಕು- ಬರಹಗಳನ್ನು ಒಳಗೊಂಡಂತೆ, ಅವರ ಹಿರಿಯ ಕಮ್ಯುನಿಸ್ಟ್ ನಾಯಕತ್ವದ ಹೆಜ್ಜೆ ಗುರುತುಗಳನ್ನು, ರಾಜಕೀಯದ ಅನುಭವಗಳನ್ನು,  ’ಬರೆಯದ ದಿನಚರಿಯ ಮರೆಯದ ಪುಟಗಳು’ ಆತ್ಮಕತೆಯಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಬಿ. ವಿ. ಕಕ್ಕಿಲ್ಲಾಯರ ಬದುಕು ಹೋರಾಟಗಳ ಚಿತ್ರಣ. ಜೀವನಚರಿತ್ರೆಯೆನಿಸಿದರೂ ಇಲ್ಲಿ ದಾಖಲಾಗಿರುವುದು ಸಂಪೂರ್ಣವಾಗಿ ಹೋರಾಟಕ್ಕೆ ಸಮರ್ಪಿಸಿಕೊಂಡ ಒಬ್ಬ ಕಮ್ಯೂನಿಸ್ಟ್ ಕಾರ್ಯಕರ್ತನ ಬದುಕಿನ ಗಾಥೆ.

About the Author

ಬಿ.ವಿ ಕಕ್ಕಿಲ್ಲಾಯ
(09 April 1919 - 04 June 2012)

ಬಿ.ವಿ. ಕಕ್ಕಿಲ್ಲಾಯರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರು, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರು, ಪ್ರಶಸ್ತಿ ವಿಜೇತ ಲೇಖಕರು ಹಾಗೂ ಚಿಂತಕರು. ಉತ್ತರ ಕೇರಳದ ಕಾಸರಗೋಡು ತಾಲೂಕಿನ ಚೆರ್ಕಳದ ಸಮೀಪ, ಪಯಸ್ವಿನಿ ನದಿಯ ದಂಡೆಯ ಮೇಲಿರುವ ಬೇವಿಂಜೆಯಲ್ಲಿ ಶ್ರೀಮಂತ ಭೂಮಾಲಕರಾಗಿದ್ದ ವಿಷ್ಣು ಕಕ್ಕಿಲ್ಲಾಯರ ಕೊನೆಯ ಮಗನಾಗಿ ಏಪ್ರಿಲ್ 9, 1919 ರಂದು ಬಿ. ವಿ ಕಕ್ಕಿಲ್ಲಾಯ ಜನಿಸಿದರು.  ಕಾಸರಗೋಡಿನಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದ ಬಳಿಕ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜನ್ನು ಸೇರಿದ ಬಿ ವಿ ಕಕ್ಕಿಲ್ಲಾಯರು ಆ ಕಾಲದಲ್ಲಿ ಉತ್ತುಂಗದಲ್ಲಿದ್ದ ಭಾರತದ ಸ್ವಾತಂತ್ರ್ಯ ...

READ MORE

Reviews

ಹೊಸತು- ಜೂನ್‌ -2003

ಚಳುವಳಿಗಳ ಮುಂಚೂಣಿಯಲ್ಲಿದ್ದು ಸಾಮಾನ್ಯ ಕಾರ್ಮಿಕ ದುಡಿಮೆಗಾರರ ಹಿತರಕ್ಷಣೆಯತ್ತ ತಮ್ಮ ಒಲವು ತೋರಿದ ಬಿ. ವಿ. ಕಕ್ಕಿಲ್ಲಾಯರ ಬದುಕು ಹೋರಾಟಗಳ ಚಿತ್ರಣ. ಜೀವನಚರಿತ್ರೆಯೆನಿಸಿದರೂ ಇಲ್ಲಿ ದಾಖಲಾಗಿರುವುದು ಸಂಪೂರ್ಣವಾಗಿ ಹೋರಾಟಕ್ಕೆ ಸಮರ್ಪಿಸಿಕೊಂಡ ಒಬ್ಬ ಕಮ್ಯೂನಿಸ್ಟ್ ಕಾರ್ಯಕರ್ತನ ಬದುಕಿನ ಗಾಥೆ. ತಮ್ಮ ಸಂಗಾತಿಗಳೊಂದಿಗಿನ ಒಡನಾಟವನ್ನು ನೆನಪಿಸುವ ಈ ದಿನಚರಿಯಿಂದಾಗಿ ಅವರು ನಮಗೆ ಸ್ಫೂರ್ತಿಯ ಸೆಲೆಯಾಗಿ ಕಂಡುಬರುತ್ತಾರೆ.

Related Books