ಮೌನ ಬಿಚ್ಚಿದ ಮಾತು

Author : ಸಂಗಮೇಶ ತಮ್ಮನಗೌಡ್ರ

Pages 95

₹ 50.00




Year of Publication: 2007
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ತಾ: ರೋಣ, ಜಿ: ಗದಗ-582 102
Phone: 9449074397

Synopsys

ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ತಮ್ಮ ಆತ್ಮ ಚರಿತ್ರೆಯ ಎರಡನೇ ಭಾಗವಾಗಿ ಬರೆದ ಕೃತಿ-ಮೌನ ಬಿಚ್ಚಿದ ಮಾತು. ಸಾಹಿತ್ಯ, ಶಿಕ್ಷಣ, ಸಂಘಟನೆ ವಿಷಯಕ್ಕೆ ಸಂಬಂಧಿಸಿದ ಪತ್ರಗಳು, ಸಾವು ತಪ್ಪಿಸಲು ಕೂಗಿದವರು, ನನ್ನತನವನ್ನು ಒರೆಗೆ ಹಚ್ಚಿದಾಗ, ಅಸಮರ್ಪಕ ವ್ಯವಸ್ಥೆಗೆ ಮಹಾಶರಣು, ಹದಿನೆಂಟು ಸಂವತ್ಸರದ ಪತ್ರಗಳು ಹೀಗೆ ವಿವಿಧ ಅಧ್ಯಾಯಗಳಡಿ ತಮ್ಮ ಅನುಭವದ ಮರೆಯಲಾಗದ ಅಮೂಲ್ಯ ಕ್ಷಣಗಳನ್ನು ಇಲ್ಲಿ ದಾಖಲಿಸಿದ್ದಾರೆ. 

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Excerpt / E-Books

ನಾನು ಸ್ವಭಾವತಃ ಮೌನಿ, ಮಾತನಾಡಿದರೆ ಘಂಟೆಗಟ್ಟಲೇ. ಮಾತನಾಡುತ್ತೇನೆ. ಬಾಯಿಮುಚ್ಚಿದರೆ ದೀರ್ಘ ಮೌನಿಯಾಗುತ್ತೇನೆ. ನನ್ನ ಬದುಕಿನ ಅವಸ್ಥೆಗಳು ನನ್ನನ್ನು ಈ ರೀತಿಯಾಗಿ ಮಾಡಿವೆ. ಸತ್ಯವನ್ನು ಆತ್ಮೀಯವಾಗಿ ಮಾತನಾಡುತ್ತೇನೆ. ಅಸತ್ಯ- ಅಸಹನೀಯ ಮಾತುಗಳು ಇರುಸು - ಮುರಸಾಗುತ್ತವೆ. ಆಕ್ಷಣ ನಾನೆಂಬ ಪರಕೀಯನಾಗಿ ನನ್ನೊಳಗೆ ವ್ಯಥೆಪಡುತ್ತೇನೆ...

“ನಾನು ಸಂಸಾರಿಯಾಗಿ ಸೋತವನು; ಸಾಹಿತಿಯಾಗಿ ಗೆದ್ದವನು'. ಆತ್ಮಹತ್ಯೆ ಮಾಡಿಕೊಂಡು ಸಾಯಬೇಕಾದವನಿಗೆ 'ಅಯ್ಯೋ ಹುಚ್ಚಾ ! ನೀನೂ ಬದುಕು.' ಎಂಬ ಸಾಂತ್ವನದ ನುಡಿ ಹೇಳಿದ್ದು ಸಾಹಿತ್ಯ, ನನ್ನ ಜೀವನದ ನೋವುಗಳನ್ನು ಮರೆಯುವ ಸಲುವಾಗಿ ಪುಸ್ತಕ ಓದುವ ಗೀಳಿಗೆ ಅಂಟಿಕೊಂಡೆ. ಅನುಭವ ಬೆಳೆದಂತೆ ಬರೆಯಹತ್ತಿದೆ. ನನ್ನ ನೋವಿನ ಕೆಲವು ಕ್ಷಣಗಳನ್ನು ನನ್ನ ಆತ್ಮಚರಿತ್ರೆ ಭಾಗ-೧ “ಗೋವಾ ನನ್ನತವರು ಮನೆ' ಎಂಬ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ಹಂಚಿಕೊಂಡಿದ್ದೇನೆ. ಚರಿತ್ರೆಯ ಭಾಗ - ೧ನ್ನು ಬರೆಯುವಾಗ ನನ್ನ ವಯಸ್ಸು ೨೧ ವರ್ಷ. ಈಗ ಭಾಗ - ೨ನ್ನು ಬರೆಯುವಾಗ ೩.೭ ವಯಸ್ಸು. 

(ಕೃತಿಯ ಬೆನ್ನುಡಿಯಲ್ಲಿ ಲೇಖಕರು ಓದುಗರೊಡನೆ ಹಂಚಿಕೊಂಡ ಮಾತುಗಳು)

Related Books