ಕುಂವಿಯವರ ಆತ್ಮಕಥನಾತ್ಮಕ ಬರವಣಿಗೆ. ಕುಂವೀ ಬರಹಗಳೇ ಹಾಗೆ. ಓದುತ್ತಾ ಓದುತ್ತಾ ಭಯ ಹುಟ್ಟಿಸಿದಂತೆ ಕಾಣಿಸಿದರೂ ಕಥೆ ಮುಗಿಯುಷ್ಟರಲ್ಲಿ ನಮ್ಮನ್ನು ಸೆಳೆದುಕೊಂಡು ಬಿಟ್ಟಿರುತ್ತವೆ. ಕರ್ನಾಟಕಾಂಧ್ರ ಗಡಿ ಭಾಗವಾದ ಬಳ್ಳಾರಿ ಜಿಲ್ಲೆಯ ಹಳ್ಳಿಗಳ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕುಂವೀ ಚಿತ್ರಿಸುತ್ತಾರೆ. ಅಲ್ಲಿಯ ನಕ್ಸಲೀಯರು, ಸದಾ ಹತ್ತನ್ನೆರಡು ಗನ್‌ಮ್ಯಾನ್‌ಗಳ ಮಧ್ಯದಲ್ಲಿ ಬದುಕುವ ಜಮೀನ್ದಾರರು, ಅಮಾಯಕ ಸಾಮಾನ್ಯ ಜನತೆ-ಇವರು ಹೀಗೆಲ್ಲಾ ಬದುಕಲು ಸಾಧ್ಯವೇ ಎಂದು ಅಚ್ಚರಿಪಡುವಷ್ಟು ಅಪರಿಚಿತ ಬದುಕನ್ನು ನಮ್ಮ ಮುಂದಿಡುತ್ತಾರೆ. ಅಲ್ಲಿಯ ಎರೆಮಣ್ಣು ಮಳೆಗಿಂತ ರಕ್ತದಲ್ಲಿಯೇ ಹೆಚ್ಚು ನೆನೆದಂತೆ ಚಿತ್ರಿಸುವ ಇವರ ಬರವಣಿಗೆ ಕಂಡು, ಖ್ಯಾತ ಲೇಖಕ ಪಿ. ಲಂಕೇಶರು ಹೀಗೆಲ್ಲಾ ಇರಲು ಸಾಧ್ಯವೇ ಎಂದು ಅಚ್ಚರಿ ವ್ಯಕ್ತ ಪಡಿಸಿದ್ದುಂಟು. ಮೂರು ದಶಕಗಳಿಗೂ ಮೀರಿದ ವೃತ್ತಿ ಬದುಕಿನಲ್ಲಿ ಕಾರ್ಯ ನಿರ್ವಹಿಸಿದ ಕುಗ್ರಾಮಗಳ ಜನರ ಬದುಕಿನ ಬಗ್ಗೆ ಕಥೆ ಕಟ್ಟುತ್ತಾರೆ.
©2023 Book Brahma Private Limited.