ಗೆರೆ ದಾಟಿದ ಮೇಲೆ

Author : ಎಂ. ಎಸ್. ಪರಶಿವಮೂರ್ತಿ

Pages 424

₹ 220.00




Year of Publication: 2009
Published by: ರೂಪ ಪ್ರಕಾಶನ
Address: 1ನೇ ಕ್ರಾಸ್, ಹೊಸಬಂಡೀಕೇರಿ, ಮೈಸೂರು. 570004
Phone: 9342274331

Synopsys

’ಗೆರೆ ದಾಟಿದ ಮೇಲೆ’ ಪರಶಿವಮೂರ್ತಿಯವರ  ಆತ್ಮಕತೆ. ಪರಶಿವಮೂರ್ತಿಯವರು ಬ್ಯಾಂಕ್ ಅಧಿಕಾರಿಗಳು. ಅವರ ಹುಟ್ಟು, ಬೆಳವಣಿಗೆ ಸಾಮಾನ್ಯ ರೀತಿಯದೆ. ಅನೇಕ ಬಗೆಯ ನಿಂದೆ, ಶೋಷಣೆ, ಸಮಸ್ಯೆಗಳಿಗೆ ಈಡಾದವರು. ಅಂದುಕೊಂಡದ್ದನ್ನು ನೆರವೇರಿಸಲಾಗದೆ ತೊಳಲಿದವರು. ಅವರು ತಮ್ಮ ಆತ್ಮಕಥನದ ಉದ್ದಕ್ಕೂ ಯಾರ ಮೇಲೂ ಎಂಥ ಸಂದರ್ಭದಲ್ಲೂ ದ್ವೇಷದ ಮಾತುಗಳನಾಡಿಲ್ಲ. ಬದಲಿಗೆ ತಮ್ಮ ಮನಸ್ಸಿನೊಂದಿಗೇ ಮುಖಾಮುಖಿಯಾಗುತ್ತಾರೆ. ತಮ್ಮ ಆತ್ಮಸಾಕ್ಷಿಯನ್ನೇ ಅಗೆದಗೆದು ನೋಡುತ್ತಾರೆ. ಅತ್ಯಂತ ಸಮಾಧಾನಚಿತ್ತದಿಂದ ತಮ್ಮ ವಿವೇಕ, ಅವಿವೇಕಗಳನ್ನು ಒರೆಗೊಡ್ಡಿ ನೋಡಿಕೊಳ್ಳುತ್ತಾರೆ ಕೂಡ. ತಮ್ಮ ಬದುಕಿನ ಹಾದಿ ಬದಲಾದಾಗಲೆಲ್ಲ ಅದರ ಅರಿವಾಗಿ, ತಾನು ಕ್ರಮಿಸುತ್ತಿರುವ ದಿಕ್ಕು ತಪ್ಪಿರಬಹುದೇ ಎನಿಸಿ ಹೆತ್ತವರ ಮುಂದೆ ನಿಂತು ತಲೆಬಾಗುತ್ತಾರೆ. ಇಲ್ಲಿ ಪರಶಿವಮೂರ್ತಿಯವರು ತಾಯ್ತನದ ಅಂತರಂಗ ಇಟ್ಟುಕೊಂಡೇ ತಮ್ಮ ಇಡೀ ಬದುಕನ್ನೂ, ಜಗತ್ತನ್ನೂ ನೋಡ ಹೊರಟಿದ್ದಾರೆ. ಇಂಥ ಅನೇಕ ಅಚಾನಕಗಳನ್ನು ದಾಟುವ ಪರಶಿವಮೂರ್ತಿಯವರ ಈ  ಆತ್ಮಕಥನ ಒಂದು ರೋಚಕತೆಗಳನ್ನು ಒಳಗೊಂಡಿರುವ ಕೃತಿ.

About the Author

ಎಂ. ಎಸ್. ಪರಶಿವಮೂರ್ತಿ

ಇಂಡಿಯನ್‌ ಬ್ಯಾಂಕ್‌ನಲ್ಲಿ ಮ್ನಾನೇಜರ್‌ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಎಂ.ಎಸ್‌. ಪರಶಿವಮೂರ್ತಿ ಅವರು ಸದ್ಯ ಬೆಂಗಳೂರು ನಿವಾಸಿಯಾಗಿದ್ದಾರೆ. ಮೈಸೂರು ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಅವರು ಮನಃಶಾಸ್ತ್ರ, ರಾಜ್ಯಶಾಸ್ತ್ರ ಸ್ನಾತಕ ಪದವಿ ಪಡೆದರು. ಚಿತ್ರಕಲಾವಿದ ಆಗಿರುವ  ಪರಶಿವಮೂರ್ತಿ ಅವರು ಪ್ರವಾಸದಲ್ಲಿಯೂ ಆಸಕ್ತಿ ಉಳ್ಳವರು. ಪ್ರವಾಸ ಕಥನ ಮತ್ತು ಆತ್ಮಕತೆಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books