ಹಿರಿಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬಾಲ್ಯಾವಧಿಯ ಕುರಿತು ಅವರೇ ಬರೆದ ಆತ್ಮಕತೆ ಇದು. ಹಾಸನ ಜಿಲ್ಲೆಯ ಗೊರೂರು ಗ್ರಾಮದವರು. ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷಮ್ಮ. ತಮ್ಮ ಹಳ್ಳಿಯಲ್ಲಿ ಲೋಯರ್ ಸೆಕೆಂಡರಿ ಶಿಕ್ಷಣ ಮುಗಿಸಿ, ಹಾಸನದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಗಾಂಧೀಜಿಯವರ ಅಸಹಕಾರ ಚಳವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದರು. ಅನಂತರ ಅವರು ಗಾಂಧೀಜಿಯ ಆಶ್ರಮವನ್ನು ಸೇರಿ, ಗುಜರಾತಿನ ವಿದ್ಯಾಪೀಠದ ವಿದ್ಯಾರ್ಥಿಯಾದರು. ಬಳಿಕ ಮದ್ರಾಸಿನ ‘ಲೋಕಮಿತ್ರ’ ಮತ್ತು ‘ಭಾರತಿ’ ಪತ್ರಿಕೆಗಳ ಕನ್ನಡ ಸಮಾಚಾರ ಲೇಖಕರಾದರು. ಹೀಗೆ ಗೊರೂರರ ಬಾಲ್ಯವು ದೇಶದ ಸ್ವಾತಂತ್ಯ್ರ, ಗಾಂಧೀಜಿಯ ಚಳವಳಿಯಿಂದ ಪ್ರಭಾವಿತವಾಗಿತ್ತು. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದಾಗಿದ್ದು, ಗೊರೂರು ಅವರ ಬಾಲ್ಯದ ಆತ್ಮಕತೆಯೇ ಆಗಿದೆ.
©2025 Book Brahma Private Limited.