ಲೇಖಕ ಪ್ರೊ. ಅರವಿಂದ ಮಾಲಗತ್ತಿ ಅವರ ಆತ್ಮಕಥೆ -ಗೌರ್ಮೆಂಟ್ ಬ್ರಾಹ್ಮಣ. ಈ ದೇಶದ ದಲಿತರು ಅನುಭವಿಸುವ ಪಾಡನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸಿದ್ದು, ದಲಿತರ ನೋವಿಗೆ ಕೊನೆ ಎಂದು? ಚಿಂತನೆಗೆ ಹಚ್ಚುವ ಕೃತಿ ಇದು. ದಲಿತರಾಗಿ ಸ್ವತಃ ನೋವನ್ನು ಅನುಭವಿಸಿದ ಲೇಖಕರು, ದಲಿತ ಹೆಣ್ಣುಮಕ್ಕಳನ್ನು ಮೇಲ್ಜಾತಿ ಬ್ರಾಹ್ಮಣರು ಲೈಂಗಿಕವಾಗಿ ಹೇಗೆ ಶೋಷಿಸುತ್ತಿದ್ದರು, ಲೈಂಗಿಕತೆ ಹೊರತುಪಡಿಸಿದ ಉಳಿದೆಲ್ಲ ವಿದ್ಯಮಾನಗಳಲ್ಲಿ ಅವರನ್ನು ಹೇಗೆಲ್ಲ ಕೀಳಾಗಿ ಕಾಣಲಾಗುತ್ತಿತ್ತು ಎಂಬುದನ್ನು ಕಲ್ಪನೆಗೂ ಮೀರಿದ ಶೋಷಣೆಯ ಭಾಗವಾಗಿ ಚಿತ್ರಿಸಿದ ಈ ಲೇಖಕರ ನಿರೂಪಣಾ ಶೈಲಿಯೂ ಕೃತಿಯ ಹೆಗ್ಗಳಿಕೆಯ ಒಂದು ಭಾಗವಾಗಿದೆ.
ಅರವಿಂದ ಮಾಲಗತ್ತಿಯವರ ’ಗವರ್ನಮೆಂಟ್ ಬ್ರಾಹ್ಮಣ’ ಕುರಿತು ಕೃತಿಯ ಲೇಖಕರಿಂದ ಮನದ ನುಡಿಗಳು.
©2023 Book Brahma Private Limited.