ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಕೆ. ರತ್ನಪ್ರಭಾ ಅವರ ಜೀವನದ ಸಾಧನೆಗಳ ಕುರಿತು ಈ ಕೃತಿಯಲ್ಲಿ ದಾಖಲಿಸಲಾಗಿದೆ. ರತಪ್ರಭಾ ಅವರ ತಂದೆ ಮೂಲತಃ ಆಂಧ್ರಪ್ರದೇಶದವರಾಗಿದ್ದು ಗುಂಟೂರು, ಪ್ರಕಾಶಂ ಹಾಗೂ ಹೈದರಾಬಾದ್ ಮೂರು ಜಿಲ್ಲೆಗಳಿಗೆ ಜಿಲ್ಲಾಧಿಕಾರಿಯಾಗಿದ್ದರು. ತಮ್ಮ ಸರಳ ಹಾಗೂ ಪ್ರಾಮಾಣಿಕ ಜೀವನಶೈಲಿಯಿಂದ ಮಕ್ಕಳಿಗೆ ಮತ್ತು ಸಮಾಜಕ್ಕೆ ಮಾದರಿಯಾಗಿದ್ದರು. ಬಡವರಿಗೆ ಸಹಾಯ ಮಾಡುವುದು ಅವರಿಗೆ ತುಂಬಾ ಇಷ್ಟದ ವಿಷಯವಾಗಿತ್ತು.
ರತ್ನಪ್ರಭಾ ಅವರ ತಾಯಿ ವೃತ್ತಿಯಲ್ಲಿ ವೈದ್ಯರಾಗಿದ್ದು ತಮ್ಮ ಪತಿಯ ಆಶೋತ್ತರಗಳಿಗೆ ಬೆನ್ನೆಲುಬಾಗಿ ನಿಂತವರು. ತಂದೆ ತಾಯಿಯ ಜೀವನ ಶೈಲಿ ರತ್ನಪ್ರಭಾರ ಜೀವನದಲ್ಲಿ ಪರಿಣಾಮವನ್ನು ಬೀರಿತು. ಪ್ರಸ್ತುತ ಈ ಕೃತಿಯಲ್ಲಿ ರತ್ನ ಪ್ರಭಾ ಜಿಲ್ಲಾದಿಕಾರಿ ಸೇವೆ ಸಲ್ಲಿಸಿದ ರೀತಿ,ಎದುರಿಸಿದ ಸವಾಲುಗಳನ್ನು, ಮಾಡಿದ ಸಾಧನೆಗಳನ್ನು ವಿವರಿಸಲಾಗಿದೆ. ಇದು ಒಂದರ್ಥದಲ್ಲಿ ರತ್ನಪ್ರಭಾ ಅವರ ಆತ್ಮಕತೆಯೂ ಹೌದು, ಆಡಳಿತ ಯಂತ್ರದ ಜೀವನಗಾಥೆಯೂ ಹೌದು.
©2023 Book Brahma Private Limited.