ಮುಸ್ಸಂಜೆಯ ಆಲಾಪ

Author : ಮೋಹನ ಹಬ್ಬು

Pages 448

₹ 500.00
Year of Publication: 2022
Published by: ನೀವೆದಿತ ಪ್ರಕಾಶನ
Address: ನಂ 3437,4ನೇ ಮುಖ್ಯರಸ್ತೆ, 9ನೇ ಅಡ್ಡ ರಸ್ತೆ, ಶಾಸ್ತ್ರೀ ನಗರ, ಬೆಂಗಳೂರು-28
Phone: 9448733323

Synopsys

ಮುಸ್ಸಂಜೆಯ ಆಲಾಪ ಮೋಹನ ಹಬ್ಬು ಅವರ ಆತ್ಮ ಕಥನವಾಗಿದೆ.ಆತ್ಮಚರಿತ್ರೆ ಕತೆ ಕಾದಂಬರಿಗಳ ತರಹ ಕಟ್ಟು ಕಥೆಯಲ್ಲ. ಇಲ್ಲಿ ಕಟ್ಟವುದೇನೂ ಉಳಿದಿರುವುದಿಲ್ಲ. ಅದಾಗಲೇ ಬದುಕು ಹೆಜ್ಜೆ ಹೆಜ್ಜೆಗೆ ಕಥೆ ಹುಟ್ಟುತ್ತಲೇ ಸಾಗಿ ಬಂದಿದೆ. ಕತೆ ಕಾದಂಬರಿಗಳು ಈ ಹಿಂದೆ ನಡೆದು ಹೋದ ವಾಸ್ತವ ಘಟನೆಯನ್ನು ಅವಲಂಬಿಸಿರುವುದಾದರೂ ಅವುಗಳನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಲೇಖಜನ ಕೌಶಲ್ಯ, ಪ್ರತಿಭೆಗಳು ಕೆಲಸ ಮಾಡುತ್ತವೆ‌ ಆಯ್ಮಕಥನಕ್ಕೆ ಇವು ಇದ್ದರೆ ಚೆನ್ನ. ಅದರೆ ಇವೇ ಪ್ರಧಾನ ಅಂಶಗಳಲ್ಲ. ಅವು ಬದುಕಿನ ದಾರಿಯಲ್ಲಿ ಕಂಡುಂಡ ಅನುಭವಗಳ ನೇರಾನೇರ ದಾಖಲೆ ಅಷ್ಟೆ. ಆತ್ಮಕಥನದಲ್ಲಿ ಸತ್ಯ ವಿಜೃಂಭಿಸಬೇಕೆ ವಿನಹ ಕಲ್ಪಕತೆಗೆ ಅಲ್ಲಿ ಅವಕಾಶವಿಲ್ಲ. ಅನುಭವಗಳನ್ನು ಹಸಿಹಸಿಯಾಗಿ ದಾಖಲಿಸುವ ಪ್ತಾಮಾಣಿಕತೆ, ಉತ್ತಮ ಭಾಷೆ, ಅಭಿವ್ಯಕ್ತಿಕ್ರಮ ಇವೇ ಕಥನದ ಶಕ್ತಿಯಾಗಬೇಕು‌. ಇದಿಷ್ಟು ನನ್ನ ಬದುಕಿನ ಕಥೆ. ಎಲ್ಲವನ್ನೂ ನೆನಪಿನ ಕೋಶದಿಂದ ಒಂದೊಂದಾಗಿ ಬಗೆದು ಬಿಚ್ಚಿಟ್ಟಿದ್ದೇನೆ‌. ಬೆತ್ತಲಾಗಿದ್ದೇನೆ. ನನ್ನ ಹಿಂದಿನ ವ್ಯಕ್ತಿತ್ವಕ್ಕೆ ನಾನೊಬ್ಬನೇ ವಾರಸುದಾರನಲ್ಲ‌ ನಾನೊಬ್ಬನೇ ರೂಪಿಸಿದವನೂ ಅಲ್ಲ‌ ಇಲ್ಲಿ ಹೆಸರಿರದ ಅನೇಕರ ಯೋಗದಾನವಿದೆ. ನನ್ಬಲ್ಲಿ ಪ್ರವಹಿಸುವ ರಕ್ತದ ಕಣಕದಲ್ಲೂ ಯಾರೋ ನೀಡಿದ ಅನ್ನದ ಋಣವಿದೆ‌ ನೆರವಿನ ಹಸ್ತಗಳಿವೆ‌. ಇಂದು ಇದನ್ನು 'ಇಕೋ, ನನ್ನದೆಲ್ಲವನ್ನೂ ಒಪ್ಪಿಸಿದ್ದೇನೆ' ಎಂಬ ನಿರಾಳ ಭಾವ ನನಗೆ‌ ಕೃತಜ್ಞತೆ ಎಂಬ ಪದಕ್ಕೆ ಇಲ್ಲಿ ಅರ್ಥವಿಲ್ಲ. ಎಂದು ಮೋಹನ ಹಬ್ಬು ಅವರು ಪುಸ್ತಕ ಬೆನ್ನುಡಿಯಲ್ಲಿ ತಿಳಿಸಿದ್ದಾರೆ

About the Author

ಮೋಹನ ಹಬ್ಬು

ಮೋಹನ ಹಬ್ಬು ಅವರು ಅಂಕೋಲೆಯ ಗೋಖಲೆ ಸೆಂಟಿನರಿ ಕಾಲೇಜ್ ಮತ್ತು ಕಾರವಾರದ ದಿವೇಕರ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ  ಭೌತಶಾಸ್ತ್ರ ಅಧ್ಯಾಪಕ, ಪ್ರಾಚಾರ್ಯರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರಿಗೆ ಓದು, ಬರಹ  ಆಸಕ್ತಿ ಕ್ಷೇತ್ರವಾಗಿದೆ. ಪ್ರಸ್ತುತ್ತ ಪ್ರತಿಷ್ಠಿತ ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತಿದ್ದಾರೆ. ಕವನ ಸಂಕಲನ : ತೆಂಕನ ಹಸಿರು ನಿಶಾನೆ , ಕುಸುರಿಯೊಳಗಣ ಕಸರು , ಲಾಘವದ ಕ್ಷಣಗಳು ನಾಗಮುರಿ ಕಥಾಸಂಕಲನ : ವೈಶಾಖದ ಮಳೆ , ವೃತ್ತದೊಳಗೊಂದು ವೃತ್ತ ೩. ಸತ್ಯದ ಕದಪಿಗೆ ಸುಳ್ಳಿನ ಮಚ್ಚೆ ೪. ಚಯನ (ಆಯ್ದ ಕತೆಗಳು : ಅಚ್ಚಿನಲ್ಲಿ ವಿಮರ್ಶೆ . ಚಿತ್ರಮಾಲೆ, ...

READ MORE

Related Books