ತೆರೆದ ಬದುಕಿನ ಪುಟಗಳು

Author : ಕೆ.ಎನ್. ಭಗವಾನ್

Pages 352

₹ 290.00
Year of Publication: 2018
Published by: ನ್ಯೂ ವೇವ್ ಬುಕ್ಸ್
Address: #90/3,1ನೇ ಫ್ಲೋರ್, ಇ.ಎ.ಟಿ ಸ್ಟ್ರೀಟ್, ಬಸವನಗುಡಿ ಬೆಂಗಳೂರು- 560004
Phone: 9448788222

Synopsys

‘ತೆರೆದ ಬದುಕಿನ ಪುಟಗಳು’ ಕೃತಿಯು ಕೆ.ಎನ್. ಭಗವಾನ್ ಅವರ ಆತ್ಮಚರಿತ್ರೆಯಾಗಿದೆ. ಈ ಕೃತಿಯು ಅಂಗಳದ ಬೆಳಕು, ನನ್ನ ಶಾಲೆ ಮತ್ತು ಪರಿಸರ, ಪ್ರಮೀಳಕ್ಕನ ವಿವಾಹ ಸಪ್ತಾಹ, ಬಣ್ಣ- ದೀಪ; ಬೆಡಗು -ಬೆರಗು, ಅತ್ತಿಗೆ ತಂದ ನಾಗರೀಕತೆ, ಹೈಸ್ಕೂಲ್ ದಿನಗಳು, ಶ್ರೀ ಆಂಜನೇಯ ಕೃಪಾಪೋಷಿತ ನಾಟಕ ಮಂಡಳಿ, ಇಂಜಿನಿಯರಿಂಗ್‌ ಓದು!, ಜೀವಮಾನದ ಮೊದಲ ಸಂಬಳ, ಜ್ಯೋತಿ ಕಲಾ ಸಂಘದ ನಾಟಕಗಳಲ್ಲಿ, ಬದುಕಿನ ತಾಳ ತಪ್ಪಿಸಿದ ಸಂಗೀತ, ಎಚ್.ಎ.ಎಲ್. ನಲ್ಲಿ ಉದ್ಯೋಗ; ಬೆಂಗಳೂರಿನಲ್ಲಿ ನೆಲೆ, ಮೊದಲ ಬಾಡಿಗೆ ಮನೆಯ ವಾಸ, ಹೊಯ್ಸಳರ ನಾಡಿನ ಬಾಂಧವ್ಯ, ಮೊದಲ ಪುತ್ರೋತ್ಸವ, ಅಶೋಕ ಶಿಶುವಿಹಾರ ಎಂಬ ಕನ್ನಡ ಶಾಲೆ. ಭಾಗ-2ರಲ್ಲಿ ಬಂಧು-ಮಿತ್ರರೊಡನಾಟ, ಪದವಿ ಪತ್ರ- ಕೆಲಸದಲ್ಲಿ ಬಡ್ತಿ, ಪರಿವರ್ತನೆಯ ಆ ಐದು ವರ್ಷಗಳು, ಸಿಹಿಗಳ ನಡುವೆ ಒಂದಿಷ್ಟು ಕಹಿ, ಎರಡನೇ ಇನ್ನಿಂಗ್ಸ್, ಮದುವೆಗಳ ಸರಣಿ, ನಿವೃತ್ತಿಯ ಅಂಚಿನಲ್ಲಿ ಸಾಹಿತ್ಯ ಪ್ರವೃತ್ತಿ, ಮೂಡಬಿದಿರೆಯಲ್ಲಿ ‘ಆಷಾಢ ಮಳೆ’, ‘ಜ್ಞಾನವಾಣಿ’ಗೆ ಸಪ್ತ ರೂಪಕಗಳು, ಚಿಕ್ಕಪ್ಪನ ಪೀಳಿಗೆಯ ವಿವರಗಳು, ‘ಮನದಿಂದ ಮುಗಿಲಿಗೆ’, ಕನ್ನಡ ಕುಲೋದ್ಧಾರಕರು- ಪುಸ್ತಕ ಮಾಲೆ, ಕನ್ನಡ ಗೆಳೆಯರ ಬಳಗ, ದೂರದರ್ಶನ ಸಮೀಪ ದರ್ಶನ, ಫೋಟೋ- ಕ್ಯಾಮೆರಾ ಹುಚ್ಚು, ಕನ್ನಡ ಮೇಷ್ಟರ ಕೆಲಸ, ಕೆಲವು ಪ್ರವಾಸಗಳು, ಸಾಹಿತ್ಯಿಕ -ಸಾಂಸ್ಕೃತಿಕ ಸಮಾರಂಭಗಳಲ್ಲಿ, ಚಂದ್ರನಾಥರೊಂದಿಗೆ ಒಂದು ಸಂದರ್ಶನ, ಸಾಹಿತ್ಯ ದಾಸೋಹ ಎಂಬ ಸ್ನೇಹಕೂಟ, ಕಾಲಕ್ಷೇಪಂ ವಹಾಮ್ಯಹಂ, ಮನೆ-ಮೊಮ್ಮಕ್ಕಳು, ಇಳಿಹೊತ್ತು, ಕೆ.ಎನ್.ಭಗವಾನ್ ಸ್ವವಿವರ ಇವೆಲ್ಲವುಗಳನ್ನು ಒಳಗೊಂಡಿದೆ.

About the Author

ಕೆ.ಎನ್. ಭಗವಾನ್
(09 June 1942)

ಲೇಖಕ ಕೆ.ಎನ್. ಭಗವಾನ್ ಅವರು (ಜನನ: 1942, ಜೂನ್ 9 ) ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಶಾವಾರ ಗ್ರಾಮದವರು. ಹುಟ್ಟೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ, ಅಕ್ಕರಾಂಪುರದಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಮಧುಗಿರಿಯಲ್ಲಿ ಪ್ರೌಢಶಾಲಾ ಶಿಕ್ಷಣ, ನಂತರ, ತುಮಕೂರಿನ ಪಾಲಿಟೆಕ್ನಿಕಲ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವಿ ಪಡೆದರು. ದೆಹಲಿಯ ಏರೋನಾಟಿಕ್ ಸೊಸೈಟಿ ಆಫ್ ಇಂಡಿಯಾದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಹಾಗೂ  ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದರು.  ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಮೇಲ್ವಿಚಾರಕರಾಗಿ ಉದ್ಯೋಗಕ್ಕೆ ಸೇರಿದರು. ಎಚ್. ಎ. ಎಲ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ 37 ವರ್ಷ ದೀರ್ಘಕಾಲ ...

READ MORE

Related Books