ನನ್ನ ಬೊಗಸೆಯ ಆಕಾಶ

Author : ಎಂ. ವೀರಪ್ಪ ಮೊಯ್ಲಿ

Pages 665

₹ 850.00
Year of Publication: 2022
Published by: ಸಪ್ನ ಬುಕ್ ಹೌಸ್
Address: #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಲೇಖಕ-ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರ ಆತ್ಮಕಥನ-ನನ್ನ ಬೊಗಸೆಯ ಆಕಾಶ. ಸಾಮಾಜಿಕವಾಗಿ ತಳಮಟ್ಟದಿಂದ ಬಂದ ಮೊಯಿಲಿ ಅವರು ಶಿಕ್ಷಣದ ವಿವಿಧ ಮಜಲುಗಳನ್ನು ದಾಟಿ, ಸಾಮಾಜಿಕ ಸಮಾನತೆಗಾಗಿ ಹೋರಾಟದ ಭಾಗವಾಗಿ ರಾಜಕಾರಣದಲ್ಲಿ ಸಕ್ರಿಯರಾದರು. ಹಂತಹಂತವಾಗಿ ಮೇಲೇರುತ್ತಲೇ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೂ ಆದರು. ಮಾತ್ರವಲ್ಲ; ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸುವ ಮೂಲಕ ಕೇಂದ್ರ ಸಚಿವ ಸಂಪುಟದ ಮಹತ್ವದ ಹುದ್ದೆಗಳನ್ನು ನಿರ್ವಹಿಸಿ, ಉತ್ತಮ ಆಡಳಿತಗಾರರೆನಿಸಿಕೊಂಡವರು. ಸಾಹಿತಿಯಾಗಿಯೂ ಹತ್ತು ಹಲವು ಕೃತಿಗಳನ್ನು ರಚಿಸಿರುವ ಎಂ.ವೀರಪ್ಪ ಮೊಯಿಲಿ ಅವರ ಬಹುಮುಖಿ ವ್ಯಕ್ತಿತ್ವದ ಪ್ರತೀಕವಾಗಿ ಈ ಕೃತಿ ಮೂಡಿಬಂದಿದೆ. ಮೊಯಿಲಿ ಅವರ ಮುತ್ಸದ್ಧಿತನಕ್ಕೆ ಕನ್ನಡಿ ಹಿಡಿಯುತ್ತದೆ.

About the Author

ಎಂ. ವೀರಪ್ಪ ಮೊಯ್ಲಿ
(12 January 1940)

ಕರ್ನಾಟಕ ರಾಜ್ಯದ 13ನೇ ಮುಖ್ಯಮಂತ್ರಿಯಾಗಿ ಹಾಗೂ ಕೇಂದ್ರಸಚಿವರಾಗಿ ರಾಜಕಾರಣದಲ್ಲಿ ವೀರಪ್ಪ ಮೊಯ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ತಂದೆ- ತಮ್ಮಯ್ಯ ಮೊಯ್ಲಿ, ತಾಯಿ ಪೂವಮ್ಮ. ಪ್ರಾಥಮಿಕ ಶಿಕ್ಷಣ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಮೂಡಬಿದರೆಯಲ್ಲಿ ಪೂರೈಸಿ, ಮಂಗಳೂರು ಸರಕಾರಿ ಕಾಲೇಜಿನಲ್ಲಿ ಪದವಿ, ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆ ಹಾಗೂ ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ, ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್. ಪದವಿ ಪಡೆದಿದ್ದಾರೆ. ಕಾರ್ಕಳ ಹಾಗೂ ಮಂಗಳೂರಿನಲ್ಲಿ ವಕೀಲ ವೃತ್ತಿಯನ್ನಾರಂಭಿಸಿದ ನಂತರದಲ್ಲಿ ಬೆಂಗಳೂರಿನಲ್ಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿದ್ದರು. 1968ರಲ್ಲಿ ಕಾಂಗ್ರೆಸ್ ಸದಸ್ಯರಾಗಿ, 1969ರಲ್ಲಿ ಕಿಸಾನ್ ಸಭಾ ಸ್ಥಾಪಿಸಿದರು. 1972ರಿಂದ 1999ರವರೆಗೆ ಮೊಯ್ಲಿಯವರೆಗೆ ...

READ MORE

Related Books