ಮುದ್ದು ಮಗಳೇ ಮತ್ತೊಮ್ಮೆ ಹುಟ್ಟಿ ಬಾ

Author : ಲತಾ ಶ್ರೀನಿವಾಸ್

Pages 144

₹ 200.00
Year of Publication: 2020
Published by: ಕಾಜಾಣ ಪ್ರಕಾಶನ
Address: ನಂ. 216, 5ನೇ ಮುಖ್ಯರಸ್ತೆ, ಕೆನರಾ ಬ್ಯಾಂಕ್ ಬಡಾವಣೆ, ಕೊಡಗೇಹಳ್ಳಿ, ವಿದ್ಯಾರಣ್ಯಪುರ ಪೋಸ್ಟ್ ಬೆಂಗಳೂರು- 97
Phone: 9483793275

Synopsys

‘ಮುದ್ದು ಮಗಳೇ ಮತ್ತೊಮ್ಮೆ ಹುಟ್ಟಿ ಬಾ’ ಲೇಖಕಿ ಲತಾ ಶ್ರೀನಿವಾಸ್ ಅವರ ಆತ್ಮಕಥನ. ಈ ಕೃತಿಗೆ ಖ್ಯಾತ ಕಾದಂಬರಿಗಾರ್ತಿ ವೈದೇಹಿ, ಹಿರಿಯ ಸಾಹಿತಿ ಎಚ್.ಎಸ್. ಶಿವಪ್ರಕಾಶ್ ಬೆನ್ನುಡಿ ಬರೆದಿದ್ದು, ಕವಿ, ನಾಟಕಕಾರ ಬೇಲೂರು ರಘುನಂದನ್ ಮುನ್ನುಡಿ ಬರೆದಿದ್ದಾರೆ. ‘ಅಸ್ವಾಸ್ಥ್ಯವೆಂಬ ಉರಿಗಾಳಿಯಿಂದ ಉದ್ದಕ್ಕೂ ನಲುಗಿದ ಮಗು ಮತ್ತು ಅದನ್ನು ಕೊನೆಗೂ ಬೀಳ್ಕೊಟ್ಟ ಹೆತ್ತೊಡಲ ಒಳಗುದಿಯ ಕತೆಯಿದು’ ಎನ್ನುತ್ತಾರೆ ವೈದೇಹಿ. ತಾಯಿಯೊಬ್ಬಳನ್ನು ನಿರಂತರ ಬೇಯಿಸುವ ನೆನಹುಗಳ ಬಿಸುಸುಯ್ಲಿನ ಕತೆಯೂ, ಯಾವ ಉತ್ಪ್ರೇಕ್ಷೆಯಿಲ್ಲದೆ ಸಹಜಸ್ಯ ಸಹಜವಾಗಿ ನಿರೂಪಣೆಯ ನುಡಿ-ನುಡಿಗಳಲ್ಲಿಯೂ ಉಕ್ಕಿ ಹರಿವ ವೇದನೆ ಓದುಗರನ್ನೂ ಇನ್ನಿಲ್ಲದಂತೆ ಸ್ಪರ್ಶಿಸುತ್ತದೆ. ಮನುಷ್ಯನ ಅಳವಿಗೆ ಮೀರಿದ ವಿಧಿವಿಪರೀತದ ವ್ಯಂಗ್ಯವನ್ನೂ ಕ್ರೌರ್ಯವನ್ನೂ ದರ್ಶಿಸುತ್ತದೆ. ಬಾಳ ಬೆಳಕಿನ ಕೋಮಲ ಕುಡಿಯು ತಾನು ಎಷ್ಟೇ ಕೈಮರೆ ಮಾಡಿದರೂ ಫಲವಾಗದೆ ಕೊನೆಗೂ ನಂದಿಯೇ ಹೋದ ನೋವು, ಆ ನಂತರದ ಸ್ವಗತ, ಮಗುವಿನೊಡನೆ ಮಾತು, ಆತ್ಮನಿರೀಕ್ಷಣೆ, ಮೆಲುಕು ಇತ್ಯಾದಿಗಳಿಂದ ಕೃತಿ ಒಂದು ರೀತಿಯಲ್ಲಿ ಗತಿಸಿದ ಜೀವಕ್ಕೆ ತಾಯಿ ಸಲಿಸುವ ಅಶ್ರುತರ್ಪಣವೂ ಆಗಿದೆ. ನಿತ್ಯ ನೈಮಿತ್ಯದಲ್ಲಿ ಮುಳುಗಿರುವ ಗೃಹಿಣಿಯೊಬ್ಬರು ತನ್ನ ಅಂತರಂಗದ ಎಣೆಯೇ ಇಲ್ಲದ ತಳಮಳವನ್ನು ಬರವಣಿಗೆಗೆ ತೊಡಗಿಸಿದರೆ ಅದು ತಂತಾನೆ ಪಡೆವ ಕೃತಿರೂಪದ ಸಾರ್ಥಕತೆ ಈ ಕೃತಿಯಲ್ಲಿ ಎದ್ದುಕಾಣುತ್ತಿದೆ ಎಂದು ವೈದೇಹಿ ಅಭಿಪ್ರಾಯಪಟ್ಟಿದ್ದಾರೆ.

 

About the Author

ಲತಾ ಶ್ರೀನಿವಾಸ್

ಲೇಖಕಿ ಲತಾ ಶ್ರೀನಿವಾಸ್ ಮೂಲತಃ ತುಮಕೂರಿನವರು. ಹುಟ್ಟಿದ್ದು 1963ರಲ್ಲಿ. ತಂದೆ- ರಾಮಚಂದ್ರಪ್ಪ, ತಾಯಿ- ಮಂಗಳಮ್ಮ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವೀಧರೆ. ಚಿತ್ರಕಲೆ, ಪ್ರವಾಸ ಲತಾ ಅವರ ಹವ್ಯಾಸಗಳು. ಕೆಲ ಸಣ್ಣ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪತಿ ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಆರ್. ಶ್ರೀನಿವಾಸ್. ಲತಾ ಅವರು ‘ಮುದ್ದು ಮಗಳೇ ಮತ್ತೊಮ್ಮೆ ಹುಟ್ಟಿ ಬಾ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ...

READ MORE

Related Books