ನನ್ನ ಜೀವನ ಶಿಲ್ಪ ಆತ್ಮಕಥನ

Pages 292

₹ 600.00




Year of Publication: 2023
Published by: ಸ್ಟುಡಿಯೋ 94
Address: #19, 70, ಮೊದಲನೇ ಮುಖ್ಯ ರಸ್ತೆ, 5ನೇ ಕ್ರಾಸ್, ಇಠ್ಮಂಡು, ಬನಶಂಕರಿ 3ನೇ ಹಂತ, ಬೆಂಗಳೂರು- 560085
Phone: 9448408563

Synopsys

ಶಿಲ್ಪ ಕಲಾವಿದನಾಗಿ ನೆನಪಿನಾಳದಲ್ಲಿ ಇದ್ದ ಬದುಕಿನ ಅನುಭವದಲ್ಲಿ ಬೆಳೆದ ರೀತಿ, ಅವಕಾಶ, ಅನುಭವಗಳ ಹೂರಣವೇ ವೆಂಕಟಾಚಲಪತಿ ಅವರ ‘ನನ್ನ ಜೀವನ ಶಿಲ್ಪ’ ಆತ್ಮಕಥನ. ಇಲ್ಲಿ ಲೇಖಕರ ಶಿಲ್ಪಕಲಾ ಪಯಣ, ಶಿಲ್ಪ ರಚನೆಯಲ್ಲಿ ವಿವಿಧ ಶೈಲಿ, ತಂತ್ರಗಾರಿಕೆ, ಯೋಚನಾ ಕ್ರಮ, ಸಂಯೋಜನೆಗಳಲ್ಲದೆ ಶಿಲ್ಪದ ಇತರ ಅಂಶಗಳು ಸರಳವಾಗಿ ಮೂಡಿಬಂದಿದೆ. ಕೃತಿಯು 26 ಪರಿವಿಡಿಗಳನ್ನು ಒಳಗೊಂಡಿದ್ದು, ಬಾಲ್ಯ ಮತ್ತು ಪ್ರೇರಣೆ, ದೇವನಹಳ್ಳಿಯ ಹನುಂತಾಚಾರ್ಯರ ಶಿಲ್ಪಕಲಾ ಶಾಲೆ, ಕಲಾಮಂದಿರದ ಅ.ನ. ಸುಬ್ಬರಾಯರಲ್ಲಿ ನನ್ನ ಕಲಿಕೆ- ಬದುಕು, ಕಲಾಬದುಕಿಗೊಂದು ದಾರಿದೀಪ ನೀಡಿದ ವಿಶ್ವೇಶ್ವರಯ್ಯ ಮ್ಯೂಸಿಯಂ, ಮ್ಯೂಸಿಯಂ ವೃತ್ತಿ ನನ್ನನ್ನು ಪ್ರವೃತ್ತಿಯಲ್ಲಿ ಓರ್ವ ಶಿಲ್ಪಿಯನ್ನಾಗಿ ರೂಪಿಸಿತು. ಮ್ಯೂಸಿಯಂ ಮೀರಿ ಬೆಳೆದ ಕಲಾರಂಗದ ಸಂಪರ್ಕ, ಹೊಸ, ವಿಚಾರ, ಮಾಧ್ಯಮ, ತಂತ್ರಗಳ ಆಟ, ಅಸಾಮಾನ್ಯ ಶಿಲ್ಪಿಗಳ ಒಡನಾಟ, ಶಿಲ್ಪಿಯಾಗಿ ಸೃಜನಶೀಲ ಮತ್ತು ಭಾವಶಿಲ್ಪಗಳ ರಚನೆ, ನನ್ನ ಕಲಾ ಬೆಳವಣಿಗೆಯ ಹಾದಿಯಲ್ಲಿ ಶಿಲ್ಪ ಶಿಬಿರಗಳು- ಪ್ರದರ್ಶನಗಳು, ಸಮೂಹಶಿಲ್ಪ ಫೆಸ್ಟಿವಲ್ ಆಫ್ ಸೈನ್ಸ್, ಸಮಕಾಲೀನ, ಭಾವಶಿಲ್ಪ ಪೂರ್ಣಪ್ರಮಾಣದ ಶಿಲ್ಪದ ರಚನೆ, ನನ್ನ ಬದುಕಿನ ಮಹತ್ವದ ಗಳಿಗೆ, ಸೃಜನಶೀಲರಿಗೆ ಅಧಿಕಾರಿಗಳು ಹತ್ತಿರವಾಗಿರಬೇಕೇ?, ನ್ನ ಸ್ಟುಡಿಯೋ ನಿರ್ಮಾಣ ಬೆಳವಣಿಗೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷನಾಗಿ, ಅಂತಾರಾಷ್ಟ್ರೀಯ ಚಿತ್ರಕಲಾವಿದರ ಮತ್ತು ಶಿಲ್ಪಿಗಳ ಸಿಂಪೋಸಿಯಂ, ಮೆಟಲ್ ಕಾಸ್ಟಿಂಗ್ ನಲ್ಲಿ ಹೊಸಪ್ರಯತ್ನ, ಶಿಲ್ಪ ಕಲೆಯ ಪಯಣದಲ್ಲಿ ನಾನು, ಸಮಾನ ಮನಸ್ಕರ ಸಂಗದಲ್ಲಿ, ನನ್ನ ಗೌರವಾನ್ವಿತ ಸ್ನೇಹಿತರ ಬಳಗ, ನನ್ನ ಟ್ರಾವೆಲ್ ಡೈರಿ, ಚಿತ್ರಸಂಪುಟ, ಶಿಲ್ಪಕ್ಕಾಗಿ ಕೆಲವು ರೇಖಾಚಿತ್ರಗಳು, ಗಣ್ಯರೊಂದಿಗೆ ಸಮ್ಮಾನಗಳು, ಅನುಬಂಧ(ಕೆಲವು, ಬರಹ, ಪತ್ರಗಳು) ಪತ್ರಿಕಾ ಪ್ರಕಟಣೆಗಳು ಲೇಖನಗಳು ಇಲ್ಲಿವೆ

Related Books