ವಿಜಯ ಪಥ

Author : ವಿಜಯಲಕ್ಷ್ಮಿ ಸತ್ಯಮೂರ್ತಿYear of Publication: 2020
Published by: ಹವ್ಯಾಸೀ ಪ್ರಕಾಶನ ಬೆಂಗಳೂರು

Synopsys

ತೊದಲುನುಡಿಯಿಂದ ಸಂಧ್ಯಾರಾಗದತ್ತ ಎಂಬ ಟ್ಯಾಗ್ ಲೈನ್ ನೊಂದಿಗೆ ವಿಜಯ ಪಥ ಎಂಬ ಶೀರ್ಷಿಕೆಯಲ್ಲಿ ಲೇಖಕಿ ತಮ್ಮ ಜೀವನದ ಪ್ರಮುಖ ಘಟನೆಗಳನ್ನು ಸಂವೇದನೆಗಳನ್ನು ಸುಂದರವಾಗಿ ಸಹಜವಾಗಿ ಚಿತ್ರಿಸಿದ್ದಾರೆ. ನಲವತ್ತೆಂಟನೆಯ ವಯಸ್ಸಿನಲ್ಲಿ ಸಾಹಿತ್ಯಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಇವರು ಈ ಕೃತಿಯಲ್ಲದೆ ಐದು ಕವನಸಂಕಲನ, ಮೂರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಹಲವಾರು ನಲಿವಿನ ಕ್ಷಣಗಳನ್ನು ಅನುಭವಿಸಿ ಸಿಹಿಸಂಭ್ರಮಗಳನ್ನು.ಸಡಗರದಿಂದ ಆನಂದಿಸಿದ ಬಳಿಕ ಭಗವಂತ "ಇನ್ನು ನಕ್ಕಿದ್ದು ಸಾಕು ಅಳುವುದನ್ನೂ ಅಭ್ಯಾಸ ಮಾಡಿಕೋ "ಎಂದು ಹೇಳಿದ . "ನೋವು ಸಂಕಟಗಳು ಬದುಕನ್ನೇ ಅಲ್ಲಾಡಿಸಿದಾಗಲೂ ನಗುವಿನ ಮುಖವಾಡ ಧರಿಸಿದ್ದೆ. ಅದಕ್ಕೊಂದು ಅಂತ್ಯ ಹಾಡಿ ಕೆಲವು ಸಂದೇಶಗಳನ್ನು ಕೆಲವರಿಗೆ ತಲುಪಿಸುವ ಸಲುವಾಗಿ ಲೇಖನಿ ಹಿಡಿದೆ" ಎಂಬ ಲೇಖಕಿಯ ಮಾತುಗಳು ಲೇಖಕಿಯ ಮನೋಧರ್ಮಕ್ಕೆ ಸಾಕ್ಷಿಯಾಗಿದೆ ಹತಾಶೆಯ ಸಂದರ್ಭದಲ್ಲಿ ಇತರರನ್ನು ದೂರದೇ, ",ಭಗವಂತ ನಾನು ಬೇಡದೆಯೇ ನೀಡಿದ, ಹೇಳದೆಯೇ ಕಿತ್ತುಕೊಂಡ ಅವೆಲ್ಲವನ್ನೂ ಒಪ್ಪಿಕೊಂಡೆ ಅಪ್ಪಿಕೊಂಡೆ ಎನ್ನುವ ಸಾಲುಗಳು ನಿಜಕ್ಕೂ ಮನೋಜ್ಞವಾಗಿವೆ. ಪೀನದರ್ಪಣ ಕೆಲವನ್ನು ಹೆಚ್ಚು ದೊಡ್ಡದಾಗಿ ತೋರಿಸುತ್ತದೆ. ನಿಮ್ನ ದರ್ಪಣ ಕೆಲವನ್ನು ಚಿಕ್ಕದಾಗಿ ತೋರಿಸುತ್ತದೆ.ಆದರೆ ಆತ್ಮಕಥೆ ಒಂದು ಸಾಮಾನ್ಯ ದರ್ಪಣದಂತೆ ಇದ್ದುದನ್ನು ಇದ್ದಂತೆ ತೋರಿಸಬೇಕು. ಈ ಆಶಯಕ್ಕೆ ಪೂರಕವಾಗಿ ವಿಜಯಪಥ ನಿಲ್ಲುತ್ತದೆ. ಬಾಲ್ಯದ ಮುಗ್ಧತೆ, ಅಜ್ಜಿಯ ನೆನಪು ಶಾಲಾದಿನಗಳು ಸವಿನೆನಪುಗಳನ್ನು ಮೆಲುಕು ಹಾಕುವುದರ ಜೊತೆಗೆ ವಿವಾಹದ ನಂತರದ ದಿನಗಳಲ್ಲಿ ಆದ ಬದಲಾವಣೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಕೆಂಡದ ಮಳೆ" ಚಲನಚಿತ್ರದಲ್ಲಿ ನಟಿಸಲು ಬಂದ ಅವಕಾಶವನ್ನು ನಿರಾಕರಿಸಿದ್ದನ್ನೂ ಹೇಳುತ್ತಾ ಅದು ಆಗಿನ ಮನೋಧರ್ಮ ಎಂದು ಒಪ್ಪಿಕೊಂಡಿದ್ದಾರೆ. ಕುಟುಂಬದ ಸದಸ್ಯರ ಅನಾರೋಗ್ಯದ ವಿಷಮ ಸಂದರ್ಭದಲ್ಲಿ ಮನೋಸ್ಥೈರ್ಯ ಕಾಪಾಡಿಕೊಂಡಿದ್ದು, ಖಿನ್ನತೆಯಿಂದ ಹೊರಬರಲು ಸಾಹಿತ್ಯವನ್ನು ಬಳಸಿಕೊಂಡಿದ್ದು ಈ ಕೃತಿಯಲ್ಲಿ ಉಲ್ಲೇಖವಾಗಿವೆ. ಎಲ್ಲೂ ಉತ್ಪ್ರೇಕ್ಷೆ ಕಾಣದೆ ಸಹಜವಾಗಿ ನವಿರಾಗಿ ಭಾವಗಳು ಹೊಮ್ಮಿವೆ. ತಮ್ಮ ಸಾಹಿತ್ಯಪಯಣದಲ್ಲಿ ಸಹಾಯ ಮಾಡಿದ ಹಲವಾರು ವ್ಯಕ್ತಿಗಳನ್ನೂ ಸಂಘಟನೆಗಳನ್ನೂ ಸಾಮಾಜಿಕ ಜಾಲತಾಣಗಳ ನಿರ್ವಾಹಕರನ್ನೂ ಸ್ಮರಿಸಿ ಅವರೇ ನನಗೆ ಕವಯತ್ರಿ ಎಂಬ ಪಟ್ಟ ಕಟ್ಟಿಬಿಟ್ಟರು ಎಂದು ಹೇಳಿರುವುದು ವಿನಯವಂತಿಕೆಗೆ ಸಾಕ್ಷಿಯಾಗಿದೆ. "ಕವನ ನನಗೆ ಒಗ್ಗುವುದಿಲ್ಲ ಗದ್ಯವೇ ಸಾಕು" ಎಂದು ಹೇಳಿದರೂ ಕವನಸಂಕಲನಗಳನ್ನು ಹೊರತಂದಿದ್ದಾರೆ. ತಮ್ಮ ಎದೆಯ ತಲ್ಲಣಗಳಿಗೆ ಉತ್ತರ ಕೊಡುತ್ತಲೇ ವಾಟ್ಸಾಪ್ ಫೇಸ್ಬುಕ್ ಗಳಿಂದ ಸಾಹಿತ್ಯಕೃಷಿಗೆ ಯಾವುದೇ ಅಡ್ಡಿ ಅಡಚಣೆಯಿಲ್ಲ. ಯಾವುದನ್ನು ಹೇಗೆ ಸಮರ್ಥವಾಗಿ ಬಳಸಿಕೊಂಡು ಪ್ರಗತಿ ಸಾಧಿಸಬಹುದು ಎನ್ನಲು ವಿಜಯಲಕ್ಷ್ಮಿ ಸಾಕ್ಷಿಯಾಗಿದ್ದಾರೆ.

About the Author

ವಿಜಯಲಕ್ಷ್ಮಿ ಸತ್ಯಮೂರ್ತಿ

ವಿಜಯಲಕ್ಷ್ಮಿ ಸತ್ಯಮೂರ್ತಿ ಮೂಲತಃ ಬೆಂಗಳೂರಿನವರು. ತಂದೆ ಶ್ರೀನಿವಾಸ ಮೂರ್ತಿ.ತಾಯಿ ಯಶೋದ.ಪತಿ  ಸತ್ಯಮೂರ್ತಿ. ಚಾಮರಾಜಪೇಟೆಯ ಶ್ರೀರಾಮ ಶಿಶುವಿಹಾರ, ಮಾಧವ ಕೃಷ್ಣಯ್ಯ ಬಾಲಕಿಯರ ಪ್ರೌಢ ಶಾಲೆ ಹಾಗೂ ಚಾಮರಾಜಪೇಟೆ ಜೂನಿಯರ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ.  ಇವರ 'ನವಮಿ' ಕಥಾಸಂಕಲನ  ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜಿನ ಎರಡನೇ ಸೆಮಿಸ್ಟರ್ ಡಿಗ್ರಿ ತರಗತಿಗೆ ಪಠ್ಯವಾಗಿದೆ. ಬಸವ ವಿಭೂಷಣ ಪ್ರಶಸ್ತಿ,ಬಸವ ರತ್ನ ಪ್ರಶಸ್ತಿ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ  ಕೆ ಎಸ್ ನ ಕಾವ್ಯ ಪುರಸ್ಕಾರ ಇವರು ಪಡೆದಿರುವ  ಪ್ರಶಸ್ತಿಗಳು . ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. 'ಋತುಗಾನ'ಎಂಬ ಸಾಹಿತ್ಯ ಮತ್ತು ...

READ MORE

Related Books