ಗುರುವಾಯನ ಕೆರೆ

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 168

₹ 108.00




Year of Publication: 2012
Published by: ಅಂಕಿತ ಪುಸ್ತಕ
Address: # 53, ಶ್ಯಾಮಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾಋ, ಬಸಬವನಗುಡಿ, ಬೆಂಗಳೂರು-560004

Synopsys

ಲೇಖಕ ಜೋಗಿ (ಗಿರೀಶ್ರಾವ್ ಹತ್ವಾರ್) ಅವರ ಕೃತಿ-ಗುರುವಾಯನಕೆರೆ. ಲೇಖಕರು ತಮ್ಮ ಊರಿನ ನೆನಪನ್ನು ಇಲ್ಲಿ ಸಂಗ್ರಹಿಸಿದ್ದೇ ಈ ಕೃತಿ. ತಾವು ಹುಟ್ಟಿ ಬೆಳೆದ, ಆಡಿದ, ಶಾಲಾದಿನಗಳನ್ನು ಕಳೆದ, ಸಂಸ್ಕೃತಿ-ಸಂಸ್ಕಾರ ಪಡೆದ ಈ ಎಲ್ಲವುಗಳಿಗೆ ಸಾಕ್ಷಿಯಾಗಿ ಅವರ ಹುಟ್ಟೂರು ನಿಂತಿದೆ. ಆ ಹುಟ್ಟೂರಿನ ಆತ್ಮಕಥೆಯನ್ನು ಉತ್ತಮ ಸಾಹಿತ್ಯ ಚರಿತ್ರೆಯಾಗಿ ರೂಪಿಸಿದ್ದಾರೆ.

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books